Advertisement

ಸ್ಟೇಟ್‌ ಬ್ಯಾಂಕ್‌-ಮಣಿಪಾಲ  ವೋಲ್ವೋ ಬಸ್‌ಗೆ ದಿನದ ಪಾಸ್‌

07:30 AM Sep 03, 2017 | Harsha Rao |

ಮಂಗಳೂರು: ಮಂಗಳೂರು-ಮಣಿಪಾಲ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಕೆಎಸ್‌ಆರ್‌ಟಿಸಿ ಒಂದು ದಿನದ ಪಾಸ್‌ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತಂದಿದೆ. ಸೆ. 2ರಿಂದಲೇ ಇದು ಜಾರಿಗೆ ಬಂದಿದೆ.

Advertisement

ಏನಿದು ಒಂದು ದಿನದ ಪಾಸ್‌?
ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್‌ಗಳಿಗೆ ಒಂದು ತಿಂಗಳ ಪಾಸ್‌ ವಿತರಣೆ ಮಾಡುತ್ತಿದ್ದು, ವೋಲ್ವೋ ಬಸ್‌ಗಳಲ್ಲಿ ಒಂದು ದಿನದ ಪಾಸ್‌ ವ್ಯವಸ್ಥೆಯನ್ನು ಮಂಗಳೂರಿಗರಿಗೆ ಐದು ವರ್ಷಗಳ ಹಿಂದೆಯೇ ಪರಿಚಯಿಸಲಾಗಿತ್ತು. ಆದರೆ ಕೆಲವೊಂದು ಕಾರಣಗಳಿಂದ ಅದು ಸ್ಥಗಿತಗೊಂಡಿತ್ತು. 24 ತಾಸುಗಳ ಮಾನ್ಯತೆ ಇರುವ ಒಂದು ದಿನದ ಪಾಸ್‌ ಸ್ಟೇಟ್‌ಬ್ಯಾಂಕ್‌ನಿಂದ ಮಣಿಪಾಲ ನಡುವೆ ಹೋಗಿ-ಬರಲು ಅನುಕೂಲ ಕಲ್ಪಿಸಲಿದೆ. ಒಂದು ಬಾರಿ ಪ್ರಯಾಣಿಸಿದಾಗ ನಿರ್ವಾಹಕ ಪಾಸ್‌ನಲ್ಲಿ ಅದನ್ನು ನಮೂದು ಮಾಡುವುದರಿಂದ ಪುನರ್ಬಳಕೆ ಸಾಧ್ಯವಿಲ್ಲ.

ದಿನದ ಪಾಸ್‌ಗೆ 150 ರೂ. ನಿಗದಿಗೊಳಿಸಲಾಗಿದೆ. ಪಾಸ್‌ ಪಡೆಯದೆ ಪ್ರಯಾಣಿಸಿದರೆ 95 ರೂ. ತಗಲುತ್ತದೆ. ವಾಪಸ್‌ ಬರಲೂ 95 ರೂ. ಟಿಕೆಟ್‌ ಇರುವುದರಿಂದ ಪಾಸ್‌ ಖರೀದಿಸಿದರೆ 30 ರೂ. ಉಳಿತಾಯವಾಗುತ್ತದೆ.

ಮುಂದಿನ ದಿನದಲ್ಲಿ ಮತ್ತಷ್ಟು ವಿಸ್ತರಣೆ
ದಿನದ ಬಸ್‌ ಪಾಸ್‌ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಣೆ ಮಾಡಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಪ್ರಯಾಣಿಕರ ಅಭಿರುಚಿ ಗಮನಿಸಿ ವಿಸ್ತರಿಸುವ ಯೋಜನೆ ನಿಗಮಕ್ಕಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿ ಎಂ.ಬಿ. ಜಯಶಾಂತ ಕುಮಾರ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next