Advertisement
2017-18ನೇ ಸಾಲಿಗೆ 15 ಜನ ಹಾಗೂ 2018-19ನೇ ಸಾಲಿಗೆ 15 ಜನ ಸೇರಿ ಒಟ್ಟು 30 ಮಂದಿ ಆಯ್ಕೆ ಮಾಡಲಾಗಿದೆ. ಅಕಾಡೆಮಿಯ ಗೌರವ ಪ್ರಶಸ್ತಿಗೆ ತಲಾ ಐವರನ್ನು ಆಯ್ಕೆ ಮಾಡಿದ್ದು, ಪ್ರಶಸ್ತಿ ತಲಾ 50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ವಾರ್ಷಿಕ ಪ್ರಶಸ್ತಿಗೆ ತಲಾ 10 ಜನ ಹಿರಿಯ ಕಲಾವಿರದನ್ನು ಆಯ್ಕೆ ಮಾಡಿದ್ದು, ತಲಾ 25 ಸಾವಿರ ನಗದು, ಪ್ರಶಸ್ತಿ ಒಳಗೊಂಡಿದೆ. ಪ್ರಶಸ್ತಿ ಪುರಸತರಲ್ಲಿ ಇಬ್ಬರು ಅಂಗವಿ ಕಲರು ಸಹಿತ ಸಾಮಾಜಿಕ ನ್ಯಾಯ, ಪ್ರಾದೇಶಿಕತೆ ಅನುಗುಣವಾಗಿಅರ್ಜಿ ಸಲ್ಲಿಸದೇ ಇದ್ದರೂ ಆಯ್ಕೆ ಮಾಡಲಾಗಿದೆ ಎಂದು ಅಧ್ಯಕ್ಷ ಡಾ.ಶ್ರೀರಾಮ ತಿಳಿಸಿದರು.
(ತೊಗಲು ಗೊಂಬೆಯಾಟ), ಬಳ್ಳಾರಿಯ ಕಾರೇಕಲ್ಲು ವೀರಾಪುರದ ರಂಗಾರೆಡ್ಡಿ ವೈ. (ದೊಡ್ಡಾಟ). 2017ರ ಸಾಲಿನ ವಾರ್ಷಿಕ ಪ್ರಶಸ್ತಿ: ಬೆಳಗಾವಿ ರಾಮದುರ್ಗ ತಾಲೂಕಿನ ಹೊಸಕೋಟಿಯ ಪಾರವ್ವ ತಳಗೇರಿ (ಶ್ರೀಕೃಷ್ಣ ಪಾರಿಜಾತ), ಬಾಗಲಕೋಟೆ ರಬಕವಿ-ಬನಹಟ್ಟಿ ನಾವಲಗಿ ಗ್ರಾಮದ ಚಂದ್ರವ್ವ ಗುಡ್ಲಮನಿ (ಶ್ರೀಕೃಷ್ಣ ಪಾರಿಜಾತ) ಹಾಗೂ ಹೊಸೂರ ಗ್ರಾಮದ ಕಲ್ಲಪ್ಪ ತೇಲಿ (ಸಣ್ಣಾಟ) ಬೆಳಗಾವಿಯ ಬಸಪ್ಪ ಕಲ್ಲಪ್ಪ ಕುಂಬಾರ (ಶ್ರೀಕೃಷ್ಣ ಪಾರಿಜಾತ) ಮತ್ತು ಬಸವರಾಜ ಖೇಮಲಾಪುರ
(ಸಣ್ಣಾಟ), ಹಾಸನದ ಎಸ್.ನಾಗರಾಜ (ತೊಗಲು ಗೊಂಬೆಯಾಟ), ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಹಾದಿಕೇರಿಯ ಎಚ್.ಬಿ. ರಮೇಶ (ದೊಡ್ಡಾಟ), ದಾವಣಗೆರೆ ಜಿಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಎಚ್.ಆರ್.ರೇವಣ್ಣ (ದೊಡ್ಡಾಟ),
ಧಾರವಾಡದ ತಿಮ್ಮರೆಡ್ಡಿ ಭೀಮರೆಡ್ಡಿ ಮೇಟಿ (ದೊಡ್ಡಾಟ), ಕಲಬುರಗಿಯ ಚಿತ್ತಾಪುರ ತಾಲೂಕಿನ ಕೊಲ್ಲೂರ ಗ್ರಾಮದ ರಾಮಲಿಂಗ ಪೇಟಿ(ದೊಡ್ಡಾಟ).
Related Articles
Advertisement
2018ರ ಸಾಲಿನ ವಾರ್ಷಿಕ ಪ್ರಶಸ್ತಿ: ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ತಳೇವಾಡದ ಶ್ರೀಶೈಲ ಹನಮಂತ ಬಳೂತಿ (ಶ್ರೀಕೃಷ್ಣ ಪಾರಿಜಾತ), ಬಾಗಲಕೋಟೆಯ ಮುಧೋಳ ತಾಲೂಕಿನ ದಾದನಟ್ಟಿಯ ಸಿದ್ದಪ್ಪ ಕುರಿ (ಶ್ರೀಕೃಷ್ಣ ಪಾರಿಜಾತ), ಬೆಳಗಾವಿಯ ದಸ್ತಗೀರ ಸಾಬ್ ಮೌಲಾಶೇಖ್ (ಶ್ರೀಕೃಷ್ಣ ಪಾರಿಜಾತ), ವಿಜಯ ಪುರ ಜಿಲ್ಲೆಯ ಸಾರವಾಡ ಗ್ರಾಮದ ಶಾಂತಾಪ್ಪ ಎಂ.ಕೋಟಿ (ಸಣ್ಣಾಟ), ಬೀದರ್‌ನ ಮಹಾದೇವಮ್ಮ (ಸಣ್ಣಾಟ), ರಾಮನಗರದ ಲಕ್ಷಮ್ಮ (ತೊಗಲು ಗೊಂಬೆಯಾಟ) ಹಾವೇರಿಯ ಶಂಕರ ಅರ್ಕಸಾಲಿ (ದೊಡ್ಡಾಟ), ಕೊಪ್ಪಳದ ಮುರನಾಳ ಗ್ರಾಮದ ಶಂಕ್ರಪ್ಪ ಕೊಪ್ಪಳ (ದೊಡ್ಡಾಟ), ರಾಯಚೂರಿನ ಸಣ್ಣಬಾಬು (ದೊಡ್ಡಾಟ),
ಯಾದಗಿರಿಯ ಬಸನಗೌಡ ಮಾಸ್ತರ ತಳವಾರಗೇರಿ (ದೊಡ್ಡಾಟ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರತ್ಯೇಕ ಅಕಾಡೆಮಿ ಸ್ಥಾಪನೆಯಾದ ಬಳಿಕ ಇದೇ ಮೊದಲ ಬಾರಿಗೆ 2017-18, 2018-19ನೇ ಸಾಲಿನ ವಾರ್ಷಿಕ ಹಾಗೂ ಗೌರವ ಪ್ರಶಸ್ತಿಗೆ ಒಟ್ಟು 30 ಜನ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಜನವರಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
● ಡಾ. ಶ್ರೀರಾಮ ಇಟ್ಟಣ್ಣವರ, ಅಧ್ಯಕ್ಷರು
ಕರ್ನಾಟಕ ಬಯಲಾಟ ಅಕಾಡೆಮಿ