Advertisement

11 ಜಿಲ್ಲೆಗಳಲ್ಲಿ ಕುಂಟುತ್ತ ಸಾಗಿದೆ ಕೇಂದ್ರ ಪುರಸ್ಕೃತ ಯೋಜನೆ

10:09 AM Jun 18, 2017 | Team Udayavani |

ಬೆಂಗಳೂರು: ರಾಷ್ಟ್ರೀಯ ಆಯುಷ್‌ ಮಿಷನ್‌ ಅಡಿಯಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ಜಾರಿಯಲ್ಲಿರುವ ಕೇಂದ್ರ ಪುರಸ್ಕೃತ “ಔಷಧೀಯ ಬೆಳೆಗಳ ಪ್ರದೇಶ ವಿಸ್ತರಣೆ’ ಯೋಜನೆಗೆ ಗ್ರಹಣ ಹಿಡಿದಿದೆ.

Advertisement

ಪಾರಂಪರಿಕ ದೇಶಿ ವೈದ್ಯಕೀಯ ಪದ್ಧತಿ ಉಳಿಯಬೇಕಾದರೆ, ಔಷಧೀಯ ಗುಣಗಳಿರುವ ಬೆಳೆಗಳು ಹೆಚ್ಚಾಗಬೇಕು.
ಅದಕ್ಕಾಗಿ ಔಷಧೀಯ ಬೆಳೆ ಬೆಳೆಯುವ ಪ್ರದೇಶದ ವಿಸ್ತರಣೆ ಆಗಬೇಕು. ಅದಕ್ಕಾಗಿ ರಾಷ್ಟ್ರೀಯ ಆಯುಷ್‌ ಮಿಷನ್‌ “ಔಷಧೀಯ ಬೆಳೆಗಳ ಪ್ರದೇಶ ವಿಸ್ತರಣೆ’ ಯೋಜನೆ ಜಾರಿಗೆ ತಂದಿದೆ. ಆದರೆ, ರಾಜ್ಯದಲ್ಲಿ 2016-17ನೇ ಸಾಲಿನಲ್ಲಿ ಈ ಯೋಜನೆ ನಿರೀಕ್ಷಿತ ಗುರಿ ಮುಟ್ಟುವಲ್ಲಿ ವಿಫ‌ಲವಾಗಿದೆ.

ಕೋಲಾರ, ಗದಗ, ಚಾಮರಾಜನಗರ, ಬಳ್ಳಾರಿ, ತುಮಕೂರು, ಉಡುಪಿ, ಮೈಸೂರು, ರಾಮನಗರ, ಬೀದರ್‌, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಜಾರಿಯಲ್ಲಿದೆ. ಈ ಜಿಲ್ಲೆಗಳಲ್ಲಿ ಶ್ರೀಗಂಧ, ರಕ್ತಚಂದನ, ಅಶ್ವಗಂಧ, ತುಳಸಿ, ಬಜೆ ಮುಂತಾದ 10 ಬಗೆಯ ಔಷಧೀಯ ಬೆಳೆಗಳನ್ನು ಬೆಳೆಯಲಾಗುತ್ತದೆ. 2016-17ನೇ ಸಾಲಿನಲ್ಲಿ 113.17 ಲಕ್ಷ ರೂ. ವೆಚ್ಚದಲ್ಲಿ 504.25 ಹೆಕ್ಟೇರ್‌ ಪ್ರದೇಶದ ವಿಸ್ತರಣೆಗೆ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಆಗಿದ್ದು, 392.56 ಹೆಕ್ಟೇರ್‌ ಮಾತ್ರ. 

ಔಷಧೀಯ ಬೆಳೆ ಪ್ರದೇಶ ವಿಸ್ತರಣೆ
ಯೋಜನೆಯಡಿ ರಾಷ್ಟ್ರೀಯ ಆಯುಷ್‌ ಮಿಷನ್‌ 2016-17ನೇ ಸಾಲಿನಲ್ಲಿ 113.17 ಲಕ್ಷ ವೆಚ್ಚದಲ್ಲಿ 504.25 ಹೆಕ್ಟೇರ್‌ ಪ್ರದೇಶ ವಿಸ್ತರಣೆಗೆ ಅನುಮೋದನೆ ನೀಡಿತ್ತು. ಆದರೆ, ಪ್ರಸ್ತಕ ಸಾಲಿನಲ್ಲಿ ಮಳೆ ಅಭಾವದಿಂದ ನಿಗದಿತ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಹಾಗಾಗಿ 392 ಹೆಕ್ಟೇರ್‌ ಪ್ರದೇಶ ವಿಸ್ತರಣೆ ಗುರಿ ಸಾಧಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ (ಜೈವಿಕ ತಂತ್ರಜ್ಞಾನ) ಜಂಟಿ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

2016 -17ನೇ ಸಾಲಿನಲ್ಲಿ ಕೋಲಾರ ಜಿಲ್ಲೆಯಲ್ಲಿ 57 ಹೆಕ್ಟೇರ್‌ ಪ್ರದೇಶ ವಿಸ್ತರಣೆಯ ಗುರಿ ಇಟ್ಟುಕೊಳ್ಳಲಾಗಿತ್ತು. ಅದರಲ್ಲಿ 30 ಹೆಕ್ಟೇರ್‌ ಗುರಿ ಸಾಧಿಸಲಾಗಿದೆ. ಗದಗ ಜಿಲ್ಲೆಯಲ್ಲಿ 100 ಹೆಕ್ಟೇರ್‌ ಪೈಕಿ 44 ಹೆಕ್ಟೇರ್‌, ತುಮಕೂರು 28
ಹೆಕ್ಟೇರ್‌ ಪೈಕಿ 22, ಮೈಸೂರಿನಲ್ಲಿ 5 ಹೆಕ್ಟೇರ್‌ನಲ್ಲಿ 0.84 ಹೆಕ್ಟೇರ್‌, ಬೀದರ್‌ನಲ್ಲಿ 38 ಹೆಕ್ಟೇರ್‌ನಲ್ಲಿ 20 ಹೆಕ್ಟೇರ್‌ ಪ್ರದೇಶ ಮಾತ್ರ ವಿಸ್ತರಣೆ ಆಗಿದೆ. ಚಾಮರಾನಗರ, ಬಳ್ಳಾರಿ, ರಾಮನಗರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ
ಭೌತಿಕ ಪ್ರಗತಿ ಸಮಾಧಾನಕರವಾಗಿದೆ. ಆದರೆ, ಒಟ್ಟಾರೆ ಪ್ರಗತಿ ನೋಡಿದರೆ, ಕಳಪೆ ಸಾಧನೆ ಆಗಿರುವುದು ಸ್ಪಷ್ಟವಾಗುತ್ತದೆ.

Advertisement

ಹಣ ಬಿಡುಗಡೆ ವಿಳಂಬ: ಔಷಧೀಯ ಬೆಳೆಗಳ ಪ್ರದೇಶ ವಿಸ್ತರಣೆ ಯೋಜನೆ ಕೇಂದ್ರ ಪುರಸ್ಕೃತ ಕಾರ್ಯಕ್ರಮವಾಗಿದ್ದು, ರಾಷ್ಟ್ರೀಯ ಆಯುಷ್‌ ಮಿಷನ್‌ ಅಡಿಯಲ್ಲಿ ರಾಜ್ಯದ ತೋಟಗಾರಿಕೆ ಇಲಾಖೆ ಯೋಜನೆ ಕಾರ್ಯಗತಗೊಳಿಸುತ್ತಿದೆ.
ಕೇಂದ್ರದ ಶೇ.60 ಹಾಗೂ ರಾಜ್ಯದ ಶೇ.40 ಅನುಪಾತದ ಅನುದಾನ ಇದಕ್ಕೆ ಸಿಗುತ್ತಿದೆ. 2016-17ನೇ ಸಾಲಿನಲ್ಲಿ 823 ಹೆಕ್ಟೇರ್‌ ಪ್ರದೇಶ ವಿಸ್ತರಣೆ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಆದರೆ, ಬರಗಾಲದ ಹಿನ್ನೆಲೆಯಲ್ಲಿ 504 ಹೆಕ್ಟೇರ್‌ ಗುರಿ ನಿಗದಿಪಡಿಸಿ, ಅದರಲ್ಲಿ 392 ಹೆಕ್ಟೇರ್‌ ಭೌತಿಕ ಸಾಧನೆ ಮಾಡಲಾಗಿದೆ. ಈ ಪರಿಷ್ಕೃತ ಕ್ರಿಯಾ ಯೋಜನೆ ಸಲ್ಲಿಸಲಾಗಿದ್ದು, ಆಯುಷ್‌ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರದ
ಪಾಲಿನ ಶೇ.60ರಷ್ಟು ಅನುದಾನ ಈಗಾಗಲೇ ಆಯುಷ್‌ ಇಲಾಖೆಗೆ ಬಿಡುಗಡೆ ಆಗಿದ್ದು, ರಾಜ್ಯದ ಪಾಲಿನ ಶೇ.40ರಷ್ಟು ಹಣ ಬಿಡುಗಡೆ ಆಗಿಲ್ಲ. ಅದಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆರೋಗ್ಯ ಇಲಾಖೆಯ
ಅಧಿಕಾರಿಗಳು ಹೇಳುತ್ತಾರೆ. 

ರೈತರಿಗೆ ಸಿಗದ ಸಹಾಯಧನ
ಪ್ರತಿ ವರ್ಷ ಯೋಜನೆಯ ಅನುದಾನವು ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರ ರಾಷ್ಟ್ರೀಯ ತೋಟಗಾರಿಕೆ
ಮಿಷನ್‌ (ಎನ್‌ಎಚ್‌ಎಂ) ಅಥವಾ ಕರ್ನಾಟಕ ರಾಜ್ಯ ತೊಟಗಾರಿಕೆ ಅಭಿವೃದ್ಧಿ ಸಂಸ್ಥೆ (ಕೆಎಸ್‌ಎಚ್‌ಡಿಎ) ಖಾತೆಗೆ
ಜಮಾ ಆಗುತ್ತಿತ್ತು. ಆದರೆ, ಈಗ ಎನ್‌ಎಚ್‌ಎಂ ಖಾತೆ ರದ್ದುಗೊಳಿಸಲಾಗಿದೆ. ಅಲ್ಲದೇ ಕೆಎಸ್‌ ಎಚ್‌ಡಿಎ ಖಾತೆಯಲ್ಲಿ ಇತರೆ ಮೂಲದ ಅನುದಾನ ಜಮೆ ಮಾಡಲು ಅವಕಾಶ ಇರುವುದಿಲ್ಲ. ಆದ್ದರಿಂದ 2016-17 ನೇ ಸಾಲಿನಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲಿನ ಅನುದಾನ ಜಿಲ್ಲಾ ಉಪ ನಿರ್ದೇಶಕರಿಗೆ ಬಿಡುಗಡೆ ಮಾಡಿಲ್ಲ ಎಂದು ತೋಟಗಾರಿಕೆ
ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next