Advertisement

Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ

06:20 PM Nov 04, 2024 | Team Udayavani |

ತಂತಥಾ ಕೃಪಯಾವಿಷ್ಟಮಶ್ರುಪೂರ್ಣಾಕುಲೇಕ್ಷಣಮ್‌| ವಿಷೀದಂತಮಿದಂ ವಾಕ್ಯಮುವಾಚ ಮಧುಸೂದನಃ||
ಎರಡನೆಯ ಅಧ್ಯಾಯದಲ್ಲಿ ಸಂಜಯ ಹೇಳುವ ಮೊದಲ ಶ್ಲೋಕ. ಮಧುಸೂದನ ಎಂದು ಕೃಷ್ಣನನ್ನು ಕರೆದಿದ್ದಾನೆ. ಮಧು ಎಂಬ ರಾಕ್ಷಸನನ್ನು ಕೊಂದದ್ದಕ್ಕಾಗಿ ಈ ಹೆಸರು ಇದೆಯಾರೂ, ಇಲ್ಲಿ ಬೇರೆ ಅರ್ಥವಿದೆ.

Advertisement

ಮಧುವಾದದ್ದನ್ನು ನಾಶಮಾಡುವವನೀತ. ಸಿಹಿ ಮಾತಿಗೆ ಒಳಗಾಗದವ ಎಂದರ್ಥ. ಅರ್ಜುನನ ಮಾತನ್ನು ಇನ್ನಾರೋ ಹೇಳಿದ್ದರೆ “ಹೌದು ಮಾರಾಯಾ’ ಎಂದು ಒಪ್ಪಿಕೊಳ್ಳುವ ಸ್ಥಿತಿ ಬರುತ್ತಿತ್ತು. ಕೃಷ್ಣ ಅಂತಹವನಲ್ಲ. ಅರ್ಜುನನಿಗೆ ದುಃಖವೂ ಆಗಿದೆ, ಚಂಚಲವೂ ಆಗಿದೆ.

ಆತ ಗೊಂದಲದಲ್ಲಿದ್ದಾನೆ. ಇಲ್ಲಿ ಕೃಪಾ ಎಂಬ ಶಬ್ದವಿದೆ. ಒಂದೆಡೆ ಮೋಹ, ಇನ್ನೊಂದೆಡೆ ಕೃಪಾ. ದೊಡ್ಡವರಿಗೆ ಚಿಕ್ಕವರನ್ನು ಕಂಡಾಗ, ಬಲಿಷ್ಠರಿಗೆ ದುರ್ಬಲರನ್ನು ಕಂಡಾಗ ಕೃಪೆ ಬರುತ್ತದೆ. ಕೃಪೆ ಬರುವುದು ಇನ್ನೊಬ್ಬ ಕಷ್ಟದಲ್ಲಿರುವಾಗ. ಅವರು ಅಜ್ಞಾನದಲ್ಲಿದ್ದಾರೆ. ನನಗೆ ಈಗಲಾದರೂ ಜ್ಞಾನವಾಗಿದೆ ಎಂಬ ಭಾವ ಅರ್ಜುನನಿಗೆ ಇದೆ. ಎರಡೂ ಅಹಂಕಾರದ ಉತ್ಪನ್ನಗಳು.

ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್‌| ಅನಾರ್ಯಜುಷ್ಟಮಸ್ವಗ್ಯಮ್‌ ಅಕೀರ್ತಿಕರಮರ್ಜುನ|| ಗೀತೆಯಲ್ಲಿ ಕೃಷ್ಣನ ಮೊದಲ ಪ್ರತಿಕ್ರಿಯೆ ಇದು. ಕೃಷ್ಣನ ಮೊದಲ ಮಾತು ಇಡೀ ಚಿತ್ರಣವನ್ನು ಸೂಚಿಸುತ್ತದೆ.

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ

Advertisement

– ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ ಗೀತಾ ಮಂದಿರ,
ಉಡುಪಿ ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.

Next