Advertisement
ಉಡುಪಿ ಜಿ. ಪಂ. ಸಹಕಾರದೊಂದಿಗೆ ನವಚೇತನ ಯುವಕ ಮಂಡಲ ಮತ್ತು ನವಚೇತನ ಯುವತಿ ಮಂಡಲ ಕಟ್ಟೆಗುಡ್ಡೆ ಸಂಯುಕ್ತಾಶ್ರಯದಲ್ಲಿ ಆ. 20ರಂದು ನಡೆದ ಸ್ವತ್ಛತೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದೇ ವೇಳೆ ಪರಿಸರ ಸಂರಕ್ಷಣೆ ಹಾಗೂ ಸ್ವತ್ಛ ಉಡುಪಿ ಮಿಷನ್ ಕೌಂಟ್‌ಡೌನ್ ಕಾರ್ಯಕ್ರಮದಡಿ ಕೃಷ್ಣ ಮಾರುತಿ ಜನತಾ ಕಾಲನಿಯ ಮನೆಗಳಿಗೆ ಪ್ಲಾಸ್ಟಿಕ್ ಬಕೆಟ್, ಕಾಂಪೋಸ್ಟ್ ಪೈಪ್‌ಗ್ಳನ್ನು ವಿತರಿಸಲಾಯಿತು.
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮಾತನಾಡಿ, ಯುವಕ ಮಂಡಲಗಳು ತಮ್ಮ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸಿ, ಸೂಕ್ತ ರೀತಿಯಲ್ಲಿ ವಿಂಗಡಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು. ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಕುರಿತು ಸಕ್ರಿಯವಾಗಿ ಕಾರ್ಯ ನಿರ್ವಹಿಸಿದರೆ 3-4 ತಿಂಗಳಲ್ಲಿ ಮಾದರಿ ಪಂಚಾಯತ್ ರೂಪಿಸಲು ಸಾಧ್ಯ ಎಂದರು. ಕಡೆಕಾರು ಗ್ರಾ. ಪಂ. ಅಧ್ಯಕ್ಷ ರಘುನಾಥ ಕೋಟ್ಯಾನ್, ಜಿ. ಪಂ. ಸಿಇಒ ಶಿವಾನಂದ ಕಾಪಶಿ, ಜಿ. ಪಂ. ಮುಖ್ಯ ಯೋಜನಾಧಿಕಾರಿ ಎ. ಶ್ರೀನಿವಾಸ್ ರಾವ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ, ನೆಹರು ಯುವ ಕೇಂದ್ರದ ವಿಲ್‌ಫ್ರೆಡ್ ಡಿ’ಸೋಜಾ, ನವಚೇತನ ಯುವತಿ ಮಂಡಲದ ಅಧ್ಯಕ್ಷೆ ಶಾರದಾ ಉಪಸ್ಥಿತರಿದ್ದರು. ಮಂಡಲದ ಅಧ್ಯಕ್ಷ ಗಿರೀಶ್ ಕುಮಾರ್ ಸ್ವಾಗತಿಸಿದರು. ಪ್ಲಾಸ್ಟಿಕ್ ರಹಿತ ವಿವಾಹ
ಇಡೀ ಜಿಲ್ಲೆಗೆ ಮಾದರಿ ಎನ್ನುವಂತೆ ಇದೇ ಸೆ. 3 ರಂದು ನವಚೇತನ ಯುವಕ ಮಂಡಲದ ಸದಸ್ಯರೊಬ್ಬರ ವಿವಾಹವು ಪ್ಲಾಸ್ಟಿಕ್ ರಹಿತವಾಗಿ ನಡೆಯಲಿದೆ. ಅದೇ ರೀತಿ ಜಿಲ್ಲೆಯ ಯುವಕ ಮತ್ತು ಯುವತಿ ಮಂಡಳಗಳು ಸ್ವತ್ಛತಾ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವುದರ ಮೂಲಕ ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸುವವಂತೆ ದಿನಕರ ಬಾಬು ಕರೆ ನೀಡಿದರು.