ಮಂಡ್ಯ: ಕೊರೊನಾ ಸೋಂಕಿನ 3ನೇ ಅಲೆಯಭೀತಿಯ ನಡುವೆಯೂ ರಾಜ್ಯಾದ್ಯಂತ 9 ಮತ್ತು10ನೇ ತರಗತಿ ಮಕ್ಕಳಿಗೆ ಆ.23ರಿಂದ ಭೌತಿಕ ಶಾಲೆಆರಂಭಿಸಲು ಸರ್ಕಾರ ಸೂಚಿಸಿದ್ದು, ಅದರಂತೆಜಿಲ್ಲೆಯಲ್ಲಿಯೂ ಶಾಲೆಗಳನ್ನು ತೆರೆಯಲು ಎಲ್ಲರೀತಿಯ ಕೋವಿಡ್ ಮುಂಜಾಗ್ರತೆ ಕ್ರಮ ಕೈಗೊಳ್ಳಲುಸಾರ್ವಜನಿಕ ಶಿಕ್ಷಣ ಇಲಾಖೆ ಸಜಾjಗಿದೆ.
ಅಗತ್ಯ ಸಿದ್ಧತೆ: ಜಿಲ್ಲೆಯಲ್ಲಿ ಎಲ್ಲ ಪ್ರೌಢಶಾಲೆಗಳಿಗೆ ಸೂಚನೆ ನೀಡಲಾಗಿದ್ದು,ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತಿದೆ. ಶಾಲೆಗಳ ಆವರಣದಲ್ಲಿಸ್ವತ್ಛತೆ, ಸ್ಯಾನಿಟೈಸರ್, ಶೌಚಾಲಯ,ಬಿಸಿ ನೀರಿನ ವ್ಯವಸ್ಥೆ, ಥರ್ಮಲ್‌ಸ್ಕಾ Âನಿಂಗ್, ಕಡ್ಡಾಯ ಮಾಸ್ಕ್,ಸಾಮಾಜಿಕ ಅಂತರ ಕಾಪಾಡಿಕೊಳ್ಳಲುಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.
454 ಪ್ರೌಢ ಶಾಲೆಗಳು: ಜಿಲ್ಲೆಯಲ್ಲಿ ಒಟ್ಟು 454ಪ್ರೌಢ ಶಾಲೆಗಳಿವೆ. ಇದರಲ್ಲಿ 213 ಸರ್ಕಾರಿ, 26ಬಿಸಿಎಂ, 97 ಅನುದಾನಿತ ಹಾಗೂ 118 ಅನುದಾನರಹಿತ ಶಾಲೆಗಳಿವೆ. ಎಲ್ಲ ಶಾಲೆಗಳಲ್ಲೂ ಅಗತ್ಯ ಸಿದ್ಧತೆಮಾಡಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಸೂಚಿಸಿದ್ದು, ಮುಂಜಾಗ್ರತೆ ಕ್ರಮಗಳುಆರಂಭಗೊಂಡಿವೆ.42,938 ವಿದ್ಯಾರ್ಥಿಗಳು: ಜಿಲ್ಲೆಯಲ್ಲಿ 9 ಮತ್ತು10ನೇ ತರಗತಿಗೆ ಒಟ್ಟು 42,938 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದರಲ್ಲಿ 21,941ವಿದ್ಯಾರ್ಥಿಗಳು 9ನೇ ತರಗತಿಗೆ ದಾಖಲಾಗಿದ್ದರೆ,20,997 ವಿದ್ಯಾರ್ಥಿಗಳು 10ನೇ ತರಗತಿಗೆನೋಂದಣಿಯಾಗಿದ್ದಾರೆ.
ಒಂದು ಕೊಠಡಿಗೆ 15 ವಿದ್ಯಾರ್ಥಿಗಳು:ತರಗತಿಯಲ್ಲಿ ದೈಹಿಕ ಅಂತರ ಕಾಪಾಡುವದೃಷ್ಟಿಯಿಂದ ಒಂದು ಕೊಠಡಿಯಲ್ಲಿ 15ರಿಂದ 20ಮಂದಿವಿದ್ಯಾರ್ಥಿಗಳಿಗೆಅವಕಾಶನೀಡಲಾಗುವುದು.ಅದಕ್ಕಾಗಿ ಶಿಕ್ಷಕರು 15 ಹಾಗೂ 20 ಮಂದಿವಿದ್ಯಾರ್ಥಿಗಳ ರಚನೆ ಮಾಡಿಕೊಂಡು ಕೊಠಡಿಗಳಅಗತ್ಯಗನುಗುಣವಾಗಿ ತರಗತಿ ನಡೆಸಲು ಸಿದ್ಧತೆಮಾಡಿಕೊಳ್ಳಲಾಗುತ್ತಿದೆ.ಶೇ.0.34 ಪಾಸಿಟಿವಿಟಿ ದರ: ಜಿಲ್ಲೆಯಲ್ಲಿ ಪ್ರಸ್ತುತಕೋವಿಡ್ ಸೋಂಕಿತರ ಪಾಸಿಟಿವಿಟಿ ದರ ಶೇ.0.34ಇದ್ದು, ಸದ್ಯ ಕೊರೊನಾ ನಿಯಂತ್ರಣದಲ್ಲಿದೆ.ಬೆರಳೆಣಿಕೆ ಮಂದಿ ಮಕ್ಕಳಿಗೆ ಜ್ವರ, ನೆಗಡಿಯಂಥಲಕ್ಷಣಗಳು ಕಂಡು ಬಂದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದೆ.
ಪೋಷಕರಿಗೆ ಮಾಹಿತಿ: ಶಾಲೆ ತೆರೆಯುವ ಬಗ್ಗೆಈಗಾಗಲೇ ಪೋಷಕರಿಗ ೆ ಮಾಹಿತಿ ನೀಡಲಾಗು ತ್ತಿದೆ.ಪ್ರಸ್ತುತ ಆನ್‌ಲೈನ್ ತರಗತಿ ನಡೆಯುತ್ತಿರುವುದರಿಂದ ಪೋಷಕರ ಅಭಿಪ್ರಾಯ ಕೇÙ ಲಾಗುತ್ತಿದೆ. ಅಲ್ಲದೆ, ಶಿಕ್ಷಕರು ಖುದ್ದಾಗಿ ಮ® ೆಗ ಳಿಗ ೆಭೇಟಿ ನೀಡಿ ಪೋಷಕರಿಗೆ ಮಕ Rಳನು ° ಶಾಲೆಗೆಕಳುಹಿಸುವ ಬಗ್ಗೆ ಹಾಗೂ ಶಾಲೆಯಲ್ಲಿ ಕೈಗೊಂಡಿರುವ ಕ ೋವಿಡ್ ಮುಂಜಾಗ್ರತೆ ಬಗ್ಗೆ ಅರಿವುಮೂಡಿಸಲಾಗುತ್ತಿದೆ.ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆ ಪೋಷಕರೇನಿರ್ಧಾರ ಮಾಡಬಹುದಾಗಿದ್ದು, ಮನೆಯಲ್ಲಿಯೇಆನ್‌ಲೈನ್ ಕ್ಲಾಸ್, ಟಿವಿಯಲ್ಲಿ ಪ್ರಸಾರವಾಗುವತರಗತಿಗಳ ಅಭ್ಯಾಸ ಮಾಡಿಸುತ್ತೇವೆ ಎಂದುಮನೆಯಲ್ಲಿಯೇ ಉಳಿಸಿಕೊಂಡರೆ ಅಂಥವರುಶಾಲೆಗೆಕಳುಹಿಸುವ ಅವಶ್ಯಕತೆ ಇರುವುದಿಲ್ಲ.
ಎಚ್.ಶಿವರಾಜು