ಮುಂಡಾಜೆ: ಕೋವಿಡ್ -19 ಆತಂಕ, ಮುನ್ನೆಚ್ಚರಿಕೆಗಳ ಮಧ್ಯೆಯೇ ಗ್ರಾಮೀಣ ಭಾಗಗಳಲ್ಲಿ ಕೃಷಿಕರು ಮಳೆ ಗಾಲದ ಕೃಷಿ ಕೆಲಸ ಆರಂಭಿಸಿದ್ದಾರೆ. ಆದರೆ ಕೆಲವು ಸ್ಥಳೀಯಾಡಳಿತಗಳು ಇನ್ನೂ ಮಳೆಗಾಲದ ಕಾಮಗಾರಿ ಬಗ್ಗೆ ಯೋಚಿಸಿಲ್ಲ. ಮುಂಡಾಜೆ, ಕಲ್ಮಂಜ, ನೆರಿಯ, ಮಿತ್ತಬಾಗಿಲು ಕಡಿರುದ್ಯಾವರ, ಮಲವಂತಿಗೆ, ಪಂಚಾಯತ್ ವ್ಯಾಪ್ತಿಗಳಲ್ಲಿ ಮಳೆಗಾಲದ ಕಾಲುವೆ, ಚರಂಡಿ ದುರಸ್ತಿ ಕಾಮಗಾರಿ ಇನ್ನೂ ಕೂಡ ಆರಂಭವಾಗಿಲ್ಲ.ಮಣ್ಣಿನ ರಸ್ತೆಗಳೇ ಅಧಿಕವಾಗಿರುವುದರಿಂದ ಮಳೆಗಾಲದಲ್ಲಿ ಸಂಚಾರ ದುಸ್ತರವಾಗಿದೆ.
ರೋಗಕ್ಕೆ ಆಹ್ವಾನ
ಮಳೆಯ ನೀರು, ಕಾಲುವೆ, ಚರಂಡಿ ದುರಸ್ತಿಯಾಗದೆ ಇರುವುದರಿಂದ ರಸ್ತೆ ಗಳಲ್ಲಿ ಅಲ್ಲಲ್ಲಿ ಸಂಗ್ರಹಗೊಳ್ಳುತ್ತಿದೆ. ಸಾಕಷ್ಟು ತ್ಯಾಜ್ಯ, ಪ್ಲಾಸ್ಟಿಕ್, ಬಾಟಲಿಗಳು ಕೂಡ ರಸ್ತೆಗಳ ಕಾಲುವೆಗಳಲ್ಲೇ ರಾಶಿ ಬಿದ್ದಿವೆ. ಇದು ಡೆಂಗ್ಯೂ, ಮಲೇರಿಯಾ ಸಾಂಕ್ರಾವಿುಕ ರೋಗಗಳಿಗೆ ಆಸ್ಪದವಾಗ ಲಿದೆ. ಕೆಲವು ಗ್ರಾಮಗಳಲ್ಲಿ ಈಗಾಗಲೇ ಡೆಂಗ್ಯೂ, ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ.
ಮಣ್ಣಿನ ರಸ್ತೆಗಳ ಅಂಚಿನಲ್ಲಿರುವ ಕಾಲುವೆಗಳು ರಸ್ತೆಗಿಂತ ಮೇಲ್ಭಾಗದಲ್ಲಿವೆ. ಇದರಿಂದ ಮಳೆ ನೀರು ರಸ್ತೆಗಳಲ್ಲಿ ಹರಿ ಯುತ್ತಿದೆ. ಕಾಲುವೆಗಳಲ್ಲಿ ತುಂಬಿರುವ ಕಸಕಡ್ಡಿ ಮಳೆ ನೀರು ಹರಿದು ಹೋಗದೆ ತೊಂದರೆಯಾಗುತ್ತಿದೆ. ಮರಳು ಸಾಗಾ ಟದ ಲಾರಿ, ಹಿಟಾಚಿ ಮೊದಲಾದ ಘನ ವಾಹನಗಳು ಸಂಚರಿಸುವುದರಿಂದ ಅನೇಕ ಕಡೆ ಸಂಪರ್ಕ ರಸ್ತೆಗಳಿಗೆ, ಚರಂಡಿ, ಮೋರಿಗಳಿಗೆ ಹಾನಿಯಾಗಿದೆ. ಈ ಪ್ರದೇಶಗಳ ಎಲ್ಲ ಸ್ಥಳೀಯ ಪಂಚಾಯತ್‌ಗಳು ತತ್‌ಕ್ಷಣ ಮಳೆಗಾಲದ ನಿರ್ವ ಹಣ ಕಾಮಗಾರಿ ಆರಂಭಿಸಿದರೆ ಮಳೆಗಾಲದ ಸಂಕಷ್ಟವನ್ನು ಆದಷ್ಟು ತಡೆ ಹಿಡಿಯಬಹುದು.
ಯೋಜನೆ ರೂಪಿಸಲಾಗಿದೆ
ಮಳೆಗಾಲದ ನಿರ್ವಹಣ ಕಾಮಗಾರಿಗಳ ಬಗ್ಗೆ ಯೋಜನೆ ರೂಪಿಸಿದ್ದು, ಮಳೆಗಾಲದಲ್ಲಿ ಸಂಚಾರಕ್ಕೆ ತೊಡಕು ಆಗದಂತೆ ಕೂಡಲೇ ಕಾಮಗಾರಿ ಆರಂಭಿಸಲಾಗುತ್ತದೆ.
- ಜಯಕೀರ್ತಿ, ಪಿಡಿಒ, ಮಿತ್ತಬಾಗಿಲು, ಗ್ರಾ.ಪಂ.
ಕಾಮಗಾರಿ ಆರಂಭ
ಮಳೆಗಾಲದಲ್ಲಿ ರಸ್ತೆ ಸಂಪರ್ಕಗಳಲ್ಲಿ ಯಾವುದೇ ವ್ಯತ್ಯಯ ಬಾರದಂತೆ, ನಮ್ಮ ಪಂಚಾಯತ್ ವತಿಯಿಂದ ಮಳೆಗಾಲದ ನಿರ್ವಹಣಾ ಕಾಮಗಾರಿ ಆರಂಭಿಸಲಾಗಿದೆ.
–
ಶೈಲಜಾ, ಅಧ್ಯಕ್ಷರು, ಚಾರ್ಮಾಡಿ ಗ್ರಾ.ಪಂ.