Advertisement

373 ಶಾಲೆಗಳಲ್ಲಿ ಆಂಗ್ಲ ತರಗತಿ ಆರಂಭಕ್ಕೆ ಅಸ್ತು; 2ನೇ ಹಂತದ ತರಗತಿ ಆರಂಭಕ್ಕೆ ಅಂಗೀಕಾರ

01:10 AM Sep 09, 2024 | Team Udayavani |

ಚಿಕ್ಕಬಳ್ಳಾಪುರ: ರಾಜ್ಯ ಸರಕಾರ ಎರಡನೇ ಹಂತದಲ್ಲಿ ರಾಜ್ಯದ 373 ಸರಕಾರಿ ಪ್ರಾಥಮಿಕ ಶಾಲೆಗಳನ್ನು ಗುರುತಿಸಿ, 1ನೇ ತರಗತಿಯಿಂದ ಹಾಲಿ ನಡೆಯುತ್ತಿರುವ ಕನ್ನಡ ಹಾಗೂ ಇತರ ಮಾಧ್ಯಮಗಳ ಜತೆಗೆ ಹೊಸದಾಗಿ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸುವಂತೆ ಆದೇಶ ಹೊರಡಿಸಿದೆ.

Advertisement

2024-25ರ ಶೈಕ್ಷಣಿಕ ಸಾಲಿನಲ್ಲಿ 1,419 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಮೊದಲ ಹಂತದಲ್ಲಿ ಅನುಮತಿ ನೀಡಿದ್ದ ಸರಕಾರವು ಈಗ 2ನೇ ಹಂತದಲ್ಲಿ 373 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಕ್ಕೆ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಅನು ಮೋದನೆ ನೀಡಿದೆ.

ಕಳೆದ ಫೆಬ್ರವರಿ ತಿಂಗಳಲ್ಲಿ ಸರಕಾರ ಮಂಡಿಸಿದ ಆಯವ್ಯಯದಲ್ಲಿ ರಾಜ್ಯಾದ್ಯಂತ 2 ಸಾವಿರ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸುವುದಾಗಿ ಸಿಎಂ ಘೋಷಿಸಿದ್ದರು. ಆದರಂತೆ ಮೊದಲ ಹಂತದಲ್ಲಿ 1,419 ಹಾಗೂ 2ನೇ ಹಂತದಲ್ಲಿ 372 ಶಾಲೆ ಗಳ ಸಹಿತ ಈಗ ಒಟ್ಟು 1,791 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳು ನಡೆಸಲು ಅನುಮತಿ ನೀಡಿದಂತಾಗಿದೆ. ಆಂಗ್ಲ ಮಾಧ್ಯಮ ತರಗತಿ ಗಳನ್ನು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಪ್ರಾರಂಭಿಸಲು ಆದೇಶಿಸಿದೆ.

ಕರಾವಳಿಯಲ್ಲಿ ಎಷ್ಟು?
ದಕ್ಷಿಣ ಕನ್ನಡ-08
ಉಡುಪಿ-01

 

Advertisement
Advertisement

Udayavani is now on Telegram. Click here to join our channel and stay updated with the latest news.

Next