Advertisement

ಸರ್ಕಾರಿ ವೈದ್ಯಕೀಯ ಕಾಲೇಜ್‌ ಆರಂಭಿಸಿ

01:43 PM Nov 03, 2020 | Suhan S |

ಬಾಗಲಕೋಟೆ: ಜಿಲ್ಲೆಗೆ ಮಂಜೂರಾದ ಸರಕಾರಿ ವೈದ್ಯಕೀಯ ಕಾಲೇಜನ್ನು ರಾಜ್ಯ ಸರ್ಕಾರ ಶೀಘ್ರ ಪ್ರಾರಂಭ ಮಾಡಬೇಕು. ಮತ್ತು ಜಿಲ್ಲೆಯಲ್ಲಿ ನಿರುದ್ಯೋಗಿಯಾಗಿರುವ ಯುವಕ-ಯುವತಿಯರಿಗೆ ಉದ್ಯೋಗ ಸೃಷ್ಟಿ ಮಾಡಲು ಜಿಲ್ಲೆಯಲ್ಲಿ ಉದ್ಯಮ ಆರಂಭಿಸಬೇಕು ಎಂದು ಕರವೇ ಜಿಲ್ಲಾ ಅಧ್ಯಕ್ಷ ರಮೇಶ ಬದೂ°ರ ಒತ್ತಾಯಿಸಿದರು.

Advertisement

ನಗರದ ಹೊಳೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಮತ್ತು ಕೋವಿಡ್ ಯೋಧರಿಗೆ (ವಾರಿಯರ್ಸ್‌) ಕೃತಜ್ಞತಾರ್ಪಣೆ ಹಾಗೂ ಗಾಯನ ಲೋಕದ ದಿಗ್ಗಜ ದಿ| ಎಸ್‌.ಪಿ. ಬಾಲಸುಬ್ರಮಣ್ಯಂ ಅವರಿಗೆ ಗಾನ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸದಾ ಒಂದಿಲ್ಲೊಂದು ಕಾರ್ಯಕ್ರಮವನ್ನು ಏರ್ಪಡಿಸುತ್ತಾ, ರೈತರಿಗೆ ಅನ್ಯಾಯವಾದಾಗ ರೈತರ ಪರವಾಗಿ ಹೋರಾಟ ಮಾಡಿ ಅವರಿಗೆ ಧೈರ್ಯತುಂಬುವ ಕೆಲಸ ಮಾಡುತ್ತಿದೆ. ನಾಡು-ನುಡಿ ಜಲ, ಸಂರಕ್ಷಣೆಗೆ ಸದಾ ಟೊಂಕ ಕಟ್ಟಿ ನಿಲ್ಲುತ್ತದೆ ಎಂದು ಹೇಳಿದರು.

ಡಾ| ಸರೋಜಿನಿ ಮಹಿಷಿ ವರದಿಯನ್ವಯ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ, ನಂಜುಡಪ್ಪ ವರದಿಯನ್ನು ರಾಜ್ಯದ ಅಭಿವೃದ್ಧಿಯಲ್ಲಿ ಅಸಮಾನತೆ ತೊಲಗಿಸಲು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಿಗೆ ಹೆಚ್ಚು ಒತ್ತು ಕೊಡಬೇಕು ಎಂದು ಹಕ್ಕೊತ್ತಾಯ ಮಾಡಿದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ|ಎಂ.ಪಿ. ನಾಡಗೌಡ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಕಂಕಣಬದ್ಧರಾಗಿ ದುಡಿಯಬೇಕು. ಕಳೆದ 50 ವರ್ಷಗಳಿಂದ ಕನ್ನಡ ಸಂಘದ ತೇರು ಹಿರಿಯರು ಎಳದುಕೊಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಯುವಕರು ಸಜ್ಜಾಗಬೇಕು ಎಂದರು.

ಸಿದ್ದನಕೊಳ್ಳದ ಸಿದ್ದಶ್ರೀ ಮಠದ ಶ್ರೀಡಾ|ಶಿವಕುಮಾರಸ್ವಾಮೀಜಿ ಉತ್ತರ ಕರ್ನಾಟಕದ ಹಲವಾರು ಪ್ರತಿಭೆಗಳನ್ನು ಗುರುತಿಸಿ ಚಲನಚಿತ್ರ ರಂಗಕ್ಕೆ ಸೇರ್ಪಡೆ ಮಾಡಿದ ಏಕೈಕ ಮಠ ಅದು ಸಿದ್ದನಕೊಳ್ಳದ ಸಿದ್ದಶ್ರೀ ಮಠ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಹೇಳಿದರು.

Advertisement

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವಪ್ರಭು ಸರನಾಡನಾಡಗೌಡ, ಕರವೇ ರಾಜ್ಯ ಉಪಾಧ್ಯಕ್ಷ ಎಚ್‌.ಸೋಂಪುರ ಮಾತನಾಡಿದರು. ಸಮಾರಂಭದಲ್ಲಿ ಕೋವಿಡ್ ವಾರಿಯರ್ಸ್‌ಗಳಾದ ವೈದರು, ಆರಕ್ಷಕರು, ಆಶಾ ಕಾರ್ಯಕರ್ತೆಯರು ಹಾಗೂ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ವೈದ್ಯ ಡಾ| ಸೊನ್ನದ, ಜಿಲ್ಲಾ ಆರೋಗ್ಯಾಧಿಕಾರಿ ಅನಂತ ದೇಸಾಯಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಪ್ರಕಾಶ ಬಿರಾದಾರ ಮಾತನಾಡಿದರು. ಕರವೇ ಯುವ ಘಟಕದ ಧಾರವಾಡ ಜಿಲ್ಲಾಧ್ಯಕ್ಷ ಸಾಗರ ಗಾಯಕವಾಡ, ಕರವೇ ಧಾರವಾಡ ಜಿಲಾಧ್ಯಕ್ಷ ರುದ್ರೇಶ ಹೆಳವರ, ರಾಜ್ಯ ಸಂಚಾಲಕ ಹನಮಂತಪ್ಪ ಮೇಟಿ, ಹನಮಂತ ಅಬ್ಬಗೇರಿ, ಪ್ರಕಾಶ ಮುಧೋಳ, ಪತ್ರಕರ್ತ ಹಾಗೂ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಅಧ್ಯಕ್ಷ ಆನಂದ ಜಿಗಜಿನ್ನಿ, ಬಿಜೆಪಿಯ ಯುವ ಮುಖಂಡ ಸಂತೋಷಹೊಕ್ರಾಣಿ, ನಗಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ನಿರ್ದೇಶಕ ರಾಜು ನಾಯ್ಕರ, ಕರವೇ ಕಾರ್ಯಕರ್ತರಾದ ಬಸವರಾಜ ಅಂಬಿಗೇರ, ಬಸವರಾಜ ಧರ್ಮಂತಿ ಉಪಸ್ಥಿತರಿದ್ದರು. ಶಿಕ್ಷಕ ಶ್ರೇಯಾಂಕ ಕೋಲಾರ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next