Advertisement

ಆಸ್ಟ್ರೇಲಿಯ ಏಕದಿನ, ಟಿ-20 ತಂಡ ಪ್ರಕಟ: ಸ್ಟಾರ್ಕ್‌ ಭಾರತ ಪ್ರವಾಸಕ್ಕಿ

12:16 PM Aug 19, 2017 | Team Udayavani |

ಮೆಲ್ಬರ್ನ್: ಮುಂದಿನ ತಿಂಗಳು ಭಾರತ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯದ ಏಕದಿನ ಹಾಗೂ ಟಿ-20 ತಂಡಗಳನ್ನು ಶುಕ್ರವಾರ ಅಂತಿಮಗೊಳಿಸಲಾಗಿದೆ. ಬಲ ಪಾದದ ನೋವಿನಿಂದ ಇನ್ನೂ ಚೇತರಿಸಿಕೊಳ್ಳದ ಪ್ರಧಾನ ವೇಗಿ ಮಿಚೆಲ್‌ ಸ್ಟಾರ್ಕ್‌ ಈ ಸರಣಿಯಿಂದ ಹೊರಗುಳಿಯಲಿದ್ದಾರೆ.

Advertisement

ಜಿಂಬಾಬ್ವೆ ಮೂಲದ ಆಲ್‌ರೌಂಡರ್‌ ಹಿಲ್ಟನ್‌ ಕಾರ್ಟ್‌ರೈಟ್‌ ಏಕದಿನ ತಂಡದ ಹಾಗೂ ವೇಗಿ ಜಾಸನ್‌ ಬೆಹೆಡಾಫ್ì ಟಿ-20 ತಂಡದ ಹೊಸ ಮುಖಗಳಾಗಿದ್ದಾರೆ. ಆಲ್‌ರೌಂಡರ್‌ ಡೇನಿಯಲ್‌ ಕ್ರಿಸ್ಟಿಯನ್‌ ಅವರನ್ನು 3 ವರ್ಷಗಳ ಬಳಿಕ ಟಿ-20 ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕ್ರಿಸ್ಟಿಯನ್‌ 2014ರಲ್ಲಿ ಕೊನೆಯ ಸಲ ಆಸ್ಟ್ರೇಲಿಯವನ್ನು ಪ್ರತಿನಿಧಿಸಿದ್ದರು. 

ಇತ್ತಂಡಗಳಿಗೂ ಪ್ರತ್ಯೇಕ ವಿಕೆಟ್‌ ಕೀಪರ್‌ಗಳನ್ನು ಆಯ್ಕೆ ಮಾಡಲಾಗಿದೆ. ಏಕದಿನಕ್ಕೆ ಮ್ಯಾಥ್ಯೂ ವೇಡ್‌, ಟಿ-ಟ್ವೆಂಟಿಗೆ ಟಿಮ್‌ ಪೇಯ್ನ ಕೀಪರ್‌ಗಳಾಗಿರುತ್ತಾರೆ. ಸ್ಟೀವನ್‌ ಸ್ಮಿತ್‌ ಎರಡೂ ತಂಡಗಳ ನಾಯಕರಾಗಿದ್ದಾರೆ. ಆಲ್‌ರೌಂಡರ್‌ ಜೇಮ್ಸ್‌ ಫಾಕ್ನರ್‌, ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಆ್ಯಶrನ್‌ ಅಗರ್‌, ವೇಗಿ ನಥನ್‌ ಕೋಲ್ಡರ್‌ ನೈಲ್‌ ಕೂಡ ತಂಡಕ್ಕೆ ವಾಪಸಾಗಿದ್ದಾರೆ. ಇವರಲ್ಲಿ ಕೋಲ್ಟರ್‌ ನೈಲ್‌ ಬೆನ್ನುನೋವಿನಿಂದ ವಿಶ್ರಾಂತಿಯಲ್ಲಿದ್ದರು. ಈ ಸರಣಿಯ ವೇಳೆ 5 ಏಕದಿನ ಹಾಗೂ 3 ಟಿ-20 ಪಂದ್ಯಗಳನ್ನು ಆಡಲಾಗುವುದು. 

ಏಕದಿನ ತಂಡ
ಸ್ಟೀವನ್‌ ಸ್ಮಿತ್‌ (ನಾಯಕ), ಡೇವಿಡ್‌ ವಾರ್ನರ್‌, ಆ್ಯಶrನ್‌ ಅಗರ್‌, ಹಿಲ್ಟನ್‌ ಕಾರ್ಟ್‌ರೈಟ್‌, ನಥನ್‌ ಕೋಲ್ಟರ್‌ ನೈಲ್‌, ಪ್ಯಾಟ್‌ ಕಮಿನ್ಸ್‌, ಜೇಮ್ಸ್‌ ಫಾಕ್ನರ್‌, ಆರನ್‌ ಫಿಂಚ್‌, ಜೋಶ್‌ ಹ್ಯಾಝಲ್‌ವುಡ್‌, ಟ್ರ್ಯಾವಿಸ್‌ ಹೆಡ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೊಯಿನಿಸ್‌, ಮ್ಯಾಥ್ಯೂ ವೇಡ್‌, ಆ್ಯಡಂ ಝಂಪ.

ಟಿ-20 ತಂಡ
ಸ್ಟೀವನ್‌ ಸ್ಮಿತ್‌ (ನಾಯಕ), ಡೇವಿಡ್‌ ವಾರ್ನರ್‌, ಜಾಸನ್‌ ಬೆಹೆಡಾಫ್ì, ಡೇನಿಯಲ್‌ ಕ್ರಿಸ್ಟಿಯನ್‌, ನಥನ್‌ ಕೋಲ್ಟರ್‌ ನೈಲ್‌, ಪ್ಯಾಟ್‌ ಕಮಿನ್ಸ್‌, ಆರನ್‌ ಫಿಂಚ್‌, ಟ್ರ್ಯಾವಿಸ್‌ ಹೆಡ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮೊಸಸ್‌ ಹೆನ್ರಿಕ್ಸ್‌, ಟಿಮ್‌ ಪೇಯ್ನ, ಕೇನ್‌ ರಿಚರ್ಡ್‌ ಸನ್‌, ಆ್ಯಡಂ ಝಂಪ.

Advertisement
Advertisement

Udayavani is now on Telegram. Click here to join our channel and stay updated with the latest news.

Next