Advertisement

ODI World Cup 2023: ಅಭ್ಯಾಸ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದ ಸ್ಟಾರ್ಕ್; ವಿಡಿಯೋ ನೋಡಿ

02:41 PM Oct 03, 2023 | Team Udayavani |

ತಿರುವನಂತಪುರಂ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಕ್ರೀಡಾಕೂಟಕ್ಕೆ ಸಿದ್ದತೆ ನಡೆಸುತ್ತಿರುವ ಆಸ್ಟ್ರೇಲಿಯಾ ತಂಡವು ಶನಿವಾರ ಅಭ್ಯಾಸ ಪಂದ್ಯವಾಡಿದೆ. ನೆದರ್ಲ್ಯಾಂಡ್ ವಿರುದ್ದ ತಿರುವನಂತಪುರಂನಲ್ಲಿ ನಡೆದ ಪಂದ್ಯಕ್ಕೆ ಮಳೆ ಅಡ್ಡಿಯಾದರೂ ಆಸೀಸ್ ಸಿಕ್ಕ ಸಮಯದಲ್ಲಿ ಮೇಲಗೈ ಸಾಧಿಸಿತು.

Advertisement

ಈ ಪಂದ್ಯದಲ್ಲಿ ಆಸೀಸ್ ಪ್ರಮುಖ ವೇಗಿ ಮಿಚೆಲ್ ಸ್ಟಾರ್ಕ್ ಅವರು ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರು. ಮೊದಲ ಓವರ್ ನ ಕೊನೆಯ ಎರಡು ಎಸೆತ ಮತ್ತು ತನ್ನ ಎರಡನೇ ಓವರ್ ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಮಿಚ್ ಸ್ಟಾರ್ಕ್ ನೆದರ್ಲ್ಯಾಂಡ್ ಬೌಲರ್ ಗಳಿಗೆ ಸಿಂಹಸ್ವಪ್ನರಾಗಿ ಕಾಡಿದರು. ಎಲ್ಲಾ ಮೂರು ವಿಕೆಟ್ ಗಳು ಬೌಲ್ಡ್ ರೂಪದಲ್ಲಿ ಬಂದಿದ್ದು ವಿಶೇಷ.

ಇನ್ನಿಂಗ್ಸ್ ನ ಮೊದಲ ಓವರ್ ನ ಐದನೇ ಬಾಲ್ ನಲ್ಲಿ ಡಚ್ ಆರಂಭಿಕ ಆಟಗಾರ ಮ್ಯಾಕ್ಸ್ ಒ’ಡೌಡ್ ಬೌಲ್ಡ್ ಆದರು. ಇನ್ ಸ್ವಿಂಗ್ ಆಗಿ ಬಂದ ಚೆಂಡು ಮಧ್ಯದ ಸ್ಟಂಪ್ ಎಗರಿಸಿತು.

ಓವರ್ ನ ಕೊನೆಯ ಎಸೆತ ಎದುರಿಸಲು ಬಂದ ವೆಸ್ಲಿ ಬರ್ರೆಸಿ ಅವರು ಗೋಲ್ಡನ್ ಡಕ್ ಗೆ ಬಲಿಯಾದರು. ಮತ್ತೊಂದು ಇನ್ ಸ್ವಿಂಗರ್ ಎಸೆದ ಸ್ಟಾರ್ಕ್ ಈ ಬಾರಿ ಆಫ್ ಸ್ಟಂಪ್ ಎಗರಿಸಿದರು.

ಇನ್ನಿಂಗ್ ನ 2.1 ಓವರ್ ನಲ್ಲಿ ಸ್ಟಾರ್ಕ್ ಗೆ ಹ್ಯಾಟ್ರಿಕ್ ಅವಕಾಶ ಮುಂದಿತ್ತು. ಸ್ಟ್ರೈಕ್ ನಲ್ಲಿದ್ದ ಬಾಸ್ ಡಿಲೀಡ್ ಅವರಿಗೆ ಫಾಸ್ಟ್ ಇನ್ ಸ್ವಿಂಗರ್ ಯಾರ್ಕರ್ ಎಸೆದ ಸ್ಟಾರ್ಕ್ ಮಧ್ಯದ ಸ್ಟಂಪ್ ಗಾಳಿಯಲ್ಲಿ ಹಾರುವಂತೆ ಮಾಡಿದರು. ಈ ಮೂಲಕ ಅಭ್ಯಾಸ ಪಂದ್ಯದಲ್ಲೇ ಹ್ಯಾಟ್ರಿಕ್ ಪಡೆದು ಬೀಗಿದರು.

Advertisement

ಗಾಯದ ಕಾರಣದಿಂದ ಹಲವು ಕಾಲದಿಂದ ಮೈದಾನದಿಂದ ಹೊರಗಿದ್ದ ಮಿಚ್ ಸ್ಟಾರ್ಕ್ ಸರಿಯಾದ ಸಮಯಕ್ಕೆ ತನ್ನ ಆಗಮನವನ್ನು ಸಾರಿದ್ದಾರೆ. ಈ ಬಾರಿಯ ವಿಶ್ವಕಪ್ ನಲ್ಲಿ ತನ್ನ ಖದರ್ ತೋರಿಸುವುದನ್ನು ಆರಂಭದಲ್ಲೇ ಹ್ಯಾಟ್ರಿಕ್ ಮೂಲಕ ಘೋಷಿಸಿಕೊಂಡಿದ್ದಾರೆ.

ಮಳೆಯ ಕಾರಣದಿಂದ ತಲಾ 23 ಓವರ್ ಗಳಿಗೆ ನಿಗದಿ ಪಡಿಸಲಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ಏಳು ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಆದರೆ ನೆದರ್ಲ್ಯಾಂಡ್ ತಂಡವು 14.2 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 84 ರನ್ ಗಳಿಸಿದ್ದ ವೇಳೆ ಮತ್ತೆ ಮಳೆ ಬಂದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next