Advertisement

ದೆಹಲಿಯ ಜೇಟ್ಲಿ ಕ್ರೀಡಾಂಗಣದಲ್ಲಿ ರೋಹಿತ್ ಗಾಗಿ ಕಾದಿದೆ ಈ ಎರಡು ದಾಖಲೆಗಳು

09:57 AM Nov 04, 2019 | Hari Prasad |

ನವದೆಹಲಿ: ಟೀಂ ಇಂಡಿಯಾ ಇಂದು ಬಾಂಗ್ಲಾದೇಶದ ವಿರುದ್ಧ ಪ್ರಥಮ ಟಿ20 ಪಂದ್ಯವನ್ನು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಡಳಿದೆ. ಭಾರತ ಕಳೆದ ಎಂಟು ಟಿ20 ಪಂದ್ಯಗಳಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ್ದು ಇಂದಿನ ಹೋರಾಟದಲ್ಲೂ ಬಾಂಗ್ಲಾ ಹುಲಿಗಳಿಗೆ ಮಣ್ಣು ಮುಕ್ಕಿಸಿದರೆ ಟಿ20 ಕಾದಾಟದಲ್ಲಿ ಭಾರತ ಬಾಂಗ್ಲಾ ವಿರುದ್ಧ ಸತತ 09 ಪಂದ್ಯಗಳನ್ನು ಗೆದ್ದಂತಾಗುತ್ತದೆ.

Advertisement

ಇನ್ನು ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಇನ್ ಫಾರ್ಮ್ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರು ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಶರ್ಮಾ ಅವರು ಇಂದಿನ ಪಂದ್ಯದಲ್ಲಿ ಎರಡು ವಿಶಿಷ್ಟ ದಾಖಲೆಗಳಿಗೆ ಸಾಕ್ಷಿಯಾಗುವ ಅವಕಾಶವನ್ನು ಹೊಂದಿದ್ದಾರೆ.

ಭಾರತದ ಪರ ಅತೀ ಹೆಚ್ಚು ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಲು ಶರ್ಮಾ ಅವರಿಗೆ ಇನ್ನೊಂದು ಪಂದ್ಯವಷ್ಟೇ ಉಳಿದಿದೆ. ಸದ್ಯ ಟಿಂ ಇಂಡಿಯಾದ ಮಾಜೀ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿದೆ. ಧೋನಿ ಅವರು  ಟೀಂ ಇಂಡಿಯಾ ಪರ 98 ಪಂದ್ಯಗಳನ್ನು ಆಡಿದ್ದಾರೆ ಮತ್ತು ರೋಹಿತ್ ಅವರು ಇಂದಿನ ಪಂದ್ಯವನ್ನು ಆಡುವ ಮೂಲಕ 99 ಪಂದ್ಯಗಳನ್ನು ಆಡಿದಂತಾಗುತ್ತದೆ.

ರೋಹಿತ್ ಶರ್ಮಾ ಅವರು 2007ರಲ್ಲಿ ಟಿ20 ವಿಶ್ವಕಪ್ ಮೂಲಕ ತಮ್ಮ ಪ್ರಥಮ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿದ್ದರು. ಸದ್ಯಕ್ಕೆ ವಿಶ್ವಕ್ರಿಕೆಟ್ ನಲ್ಲಿ ಅತೀ ಹೆಚ್ಚು ಅಂತಾರಾಷ್ಟ್ರೀಯ ಟಿ 20 ಪಂದ್ಯಗಳನ್ನು ಆಡಿರುವ ದಾಖಲೆ ಪಾಕಿಸ್ಥಾನದ ಶೊಯಬ್ ಮಲಿಕ್ ಅವರ ಹೆಸರಿನಲ್ಲಿದೆ ಮಲಿಕ್ ಅವರು 111 ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರ ನಂತರದ ಸ್ಥಾನದಲ್ಲಿರುವ ಶಾಹಿದ್ ಅಫ್ರಿದಿ ಅವರು 99 ಪಂದ್ಯಗಳನ್ನು ಆಡಿದ್ದಾರೆ.

ಇಂದಿನ ಪಂದ್ಯದಲ್ಲಿ ಇನ್ನೊಂದು ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳುವ ಅವಕಾಶವೂ ಶರ್ಮಾ ಅವರ ಪಾಲಿಗಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಲು ಶರ್ಮಾ ಅವರಿಗೆ ಕೇವಲ 08 ರನ್ನುಗಳ ಕೊರತೆಯಿದೆ. ಸದ್ಯಕ್ಕೆ ಈ ದಾಖಲೆ ಭಾರತೀಯ ಕ್ರಿಕೆಟ್ ತಂಡದ ಕಪ್ತಾನ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿದೆ.

Advertisement

ವಿರಾಟ್ ಕೊಹ್ಲಿ ಅವರು 72 ಟಿ20 ಪಂದ್ಯಗಳಿಂದ 2450 ರನ್ನುಗಳನ್ನು ಗಳಿಸಿದ್ದಾರೆ. ಶರ್ಮಾ ಅವರು 98 ಪಂದ್ಯಗಳನ್ನು ಆಡಿ 2443 ರನ್ನುಗಳನ್ನು ಗಳಿಸಿದ್ದಾರೆ.

ಬಾಂಗ್ಲಾ ಎದುರಿನ ಟಿ20 ಸರಣಿಗಾಗಿ ಕಪ್ತಾನ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿಯನ್ನು ನೀಡಲಾಗಿದ್ದು ರೋಹಿತ್ ಶರ್ಮಾ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಈ ಹಿಂದೆ ಏಷ್ಯಾ ಕಪ್ ನಲ್ಲೂ ಶರ್ಮಾ ಅವರು ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next