Advertisement
ಶೈಕ್ಷಣಿಕ ವರ್ಷ ಮುಗಿಯುವ ಹಂತಕ್ಕೆ ಬಂದಿದೆ. ಯೂನಿಫಾರ್ಮ್ ಹೊಂದಿಸುವ, ಪುಸ್ತಕ, ಪೆನ್ನು ಪೆನ್ಸಿಲುಗಳ ಖರೀದಿ ಭರಾಟೆ, ಬೈಂಡ್ ಹಾಕುವ ತರಾತುರಿ ಯಾವುದೂ ಇಲ್ಲದೇ ಒಂದು ಮಟ್ಟಕ್ಕೆ ನಿರಾಳವಾಗಿದೆ. ಯಾವುದೂ ಸಮಸ್ಯೆಯಿಲ್ಲ, ತಲೆನೋವಿಲ್ಲ. ಎಲ್ಲ ಮನೆಯಲ್ಲೂ ಶಾಲೆಯ ಜತೆ ಜತೆಗೇ ಶುರುವಾಗುವ ಮತ್ತು ಸಂಜೆ ಎಲ್ಲೋ ಒಂದೆಡೆ ಸೇರುವ ಅಷ್ಟೂ ಜನ ಅಮ್ಮಂದಿರ ಒಂದೇ ಸಮಸ್ಯೆ ಎಂದರೆ ಲಂಚ್ ಬಾಕ್ಸ್ ಖಾಲಿ ಆಗ್ತಿಲ್ಲ. ಬಹುಶಃ ಇದು ಈ ತಲೆಮಾರಿನ ಎಲ್ಲಾ ಅಮ್ಮಂದಿರನ್ನು ಕಾಡುವ ಪ್ರಶ್ನೆ.
Related Articles
Advertisement
ಇಂಥವೊಂದಷ್ಟನ್ನು ಪ್ರಯತ್ನ ಮಾಡುವುದು ಜಾಣತನ. ಜತೆಗೆ ಆಯ್ಕೆಯನ್ನೂ ಮಕ್ಕಳಿಗೆ ಬಿಟ್ಟು ನಿಂಗಿಷ್ಟವಾದ್ದನ್ನ ಕೊಡಿಸೋದು ನಮ್ಮ ಕೆಲಸ; ಅದರೊಳಗೆ ಇರೋದನ್ನ ಪೂರ್ತಿ ಖಾಲಿ ಮಾಡೋದು ನಿನ್ನ ಕೆಲಸ ಎಂಬ ಜವಾಬ್ದಾರಿಯನ್ನೂ ಅವರಿಗೇ ವಹಿಸಿ ನೋಡಬಹುದು. ಬೆಳಗ್ಗಿನ ತಿಂಡಿಯನ್ನೇ ಮಧ್ಯಾಹ್ನಕ್ಕೂ ಹಾಕುವುದು ಅಮ್ಮನ ಕೆಲಸ ಸುಲಭ ಮಾಡೀತು ಆದರೆ ಮಕ್ಕಳಿಗದು ಬೋರ್ ಅನಿಸೀತು. ಸಾಧ್ಯವಾದಷ್ಟೂ ಬೇರೇನಾದರೂ ಹಾಕುವುದು ಆರೋಗ್ಯ, ವೈವಿಧ್ಯತೆ ಎರಡೂ ದೃಷ್ಟಿಯಿಂದ ಒಳ್ಳೆಯದು. ಅನ್ನ ಸಾಂಬಾರ್ ಕಲಸಿ ತುಂಬಿಸುವ ಬದಲು ಬೇರೆ ಬೇರೆಯೇ ಹಾಕಿ ಕೊಟ್ಟರೆ ರುಚಿಯೂ ಹೆಚ್ಚು, ಅಲ್ಲದೇ ತಮಗೆ ಬೇಕಾದ ಹಾಗೆ ಮಕ್ಕಳು ಕಲಸಿಕೊಳ್ಳಲೂ ಸಾಧ್ಯ.
ಸ್ನಾಕÕ… ಬ್ರೇಕ್ ಅಥವಾ ಶಾರ್ಟ್ ಬ್ರೇಕ್ ಸಮಯಕ್ಕೆ ಬರೀ ಬಿಸ್ಕೆಟ… ಹಾಕುವ ಬದಲು ತರಕಾರಿ ಅಥವಾ ಹಣ್ಣುಗಳ ಸಲಾಡ್ ಕಳಿಸಬಹುದು. ಮೊಳಕೆ ಕಾಳುಗಳು, ಹಸಿಯಾಗಿ ತಿನ್ನಬಹುದಾದ ತರಕಾರಿ ಹೋಳುಗಳು, ಒಂದ್ನಾಲ್ಕು ದಾಳಿಂಬೆ ಬೀಜ ಸೇರಿಸಿ ಚೂರೇ ಚೂರು ಉಪ್ಪು ಸೇರಿಸಿ ಕೊಟ್ಟರೆ ಅದರ ರುಚಿ ಇನ್ಯಾವುದಕ್ಕೂ ಸಾಟಿಯಿಲ್ಲ. ಜತೆಗೇ ಇದು ತುಂಬಾ ಉತ್ಕೃಷ್ಟ ಗುಣಮಟ್ಟದ ಆಹಾರವೂ ಕೂಡ.
ಇನ್ನು ದೋಸೆ ಮಾಡುವಾಗ ಒಂದಷ್ಟು ಹಿಟ್ಟಿಗೆ ಒಂದು ಮುಷ್ಟಿ ಬೀಟ…ರೂಟ… ತುರಿದು ಹಾಕಿದರೆ ಯಾವತ್ತಿನ ಬೋರಿಂಗ್ ಬಿಳಿ ದೋಸೆ ಬದಲು ಪಿಂಕ್ ದೋಸೆ ನೋಡಲು, ತಿನ್ನಲು ಎರಡಕ್ಕೂ ಸೈ. ಇಡ್ಲಿ, ಪಡ್ಡು ಮುಂತಾದ ಹಬೆಯಲ್ಲಿ ಬೇಯಿಸುವಂಥ¨ªಾದರೆ ಟೊಮ್ಯಾಟೋ ಚಕ್ರದಂತೆ ಹೆಚ್ಚಿ ಅದರ ಮೇಲಿಟ್ಟು ಬೇಯಿಸಿದರೆ ನೋಡುವಾಗಲೇ ತಿನ್ನಬೇಕೆನಿಸುತ್ತದೆ. ಯಾವ್ಯಾವುದಕ್ಕೆಲ್ಲ ಸಾಧ್ಯವೋ ಅವಕ್ಕೆಲ್ಲ ಸಣ್ಣಗೆ ಹೆಚ್ಚಿದ ಸೊಪ್ಪು, ಚೂರು ಕಾಯಿ ತುರಿ, ಒಣ ಹಣ್ಣುಗಳು ಇಂಥವನ್ನೆಲ್ಲ ಸೇರಿಸಿ ಬೇಯಿಸುವುದು, ಬಣ್ಣ ಕೊಡಲು ಅರಶಿನ, ಬೀಟ…ರೂಟ…, ಕ್ಯಾರೆಟ… ಪೇÓr… ಮುಂತಾದ ನೈಸರ್ಗಿಕವಾದ್ದನ್ನೇ ಹಾಕುವುದರಿಂದ ಆರೋಗ್ಯ ಆನಂದ ಎರಡೂ ವೃದ್ಧಿಸುತ್ತದೆ.
ಅನ್ನದ ಐಟಂಗಳಾದ ಬಾತ್, ಪಲಾವ್, ಪುಳಿಯೋಗರೆ ಮಾಡಿದರೆ ಅದರ ಜತೆಗೆ ಇನ್ನೇನಾದರೂ ಮನೆಯÇÉೇ ಮಾಡಿದ ಆರೋಗ್ಯ ಕೆಡಿಸದಂಥ ಕುರುಕಲು ಕಳಿಸಿದರೆ ಒಳ್ಳೆಯದು. ಮುಂಚಿನ ದಿನ ಹೆಪ್ಪು$ಹಾಕಿದ ಮೊಸರಿನ ಬದಲು ಹಾಲು ಮಜ್ಜಿಗೆ ಸೇರಿಸಿ ಡಬ್ಬಿಗೆ ತುಂಬಿಸಿದರೆ ಮಧ್ಯಾಹ್ನದ ಹೊತ್ತಿಗೆ ರುಚಿಯಾದ ಹುಳಿಯಿಲ್ಲದ ಮೊಸರಾಗುತ್ತದೆ. ಒಟ್ಟಿನಲ್ಲಿ ಆಹಾರ ಒಳ ಹೋಗಲೇಬೇಕು; ಬುತ್ತಿ ಖಾಲಿ ಆಗಲೇಬೇಕು. Healthy meal ಅನ್ನೋದು Happy meal ಕೂಡ ಆಗುವಂತೆ ನೋಡಿಕೊಂಡರೆ ಬಹುಶಃ ಮಕ್ಕಳ ಊಟದ ಸಮಸ್ಯೆ ಪೂರ್ಣ ಅಲ್ಲದೇ ಇದ್ದರೂ ಒಂದಷ್ಟು ಮಟ್ಟಿಗೆ ಪರಿಹಾರ ಕಂಡೀತು.
– ಶಮ, ನಂದಿಬೆಟ್ಟ