Advertisement

ICC ಚಾಂಪಿಯನ್ಸ್‌ ಟ್ರೋಫಿ ಪಾಕ್‌ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !

10:57 PM Jan 08, 2025 | Team Udayavani |

ಲಾಹೋರ್‌: ಪ್ರತಿಷ್ಠಿತ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾ ವಳಿಯ ಆತಿಥ್ಯ ವಹಿಸಲು ಐಸಿಸಿ ಮುಂದೆ ಹಟಹಿಡಿದು ಕುಳಿತ್ತಿದ್ದ ಪಾಕಿಸ್ಥಾನ ವೀಗ ಜಾಗತಿಕ ಕ್ರಿಕೆಟ್‌ ಮುಂದೆ ತೀವ್ರ ಮುಜುಗರಕ್ಕೆ ಸಿಲುಕುವ ಸಾಧ್ಯತೆಯೊಂದು ಗೋಚರಿಸಿದೆ. ಲಾಹೋರ್‌, ರಾವಲ್ಪಿಂಡಿ ಮತ್ತು ಕರಾಚಿಯಲ್ಲಿ ಪಂದ್ಯಗಳು ನಡೆಯಲಿದ್ದು, ಇಲ್ಲಿನ ಕ್ರೀಡಾಂಗಣಗಳು ಇನ್ನೂ ಸಿದ್ಧವಾಗಿಲ್ಲದಿರುವುದೇ ಇದಕ್ಕೆ ಕಾರಣ. ಹೀಗಾಗಿ ಇಡೀ ಪಂದ್ಯಾವಳಿ ಯುಎಇಗೆ ಸ್ಥಳಾಂತರಗೊಳ್ಳ ಬಹುದೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

Advertisement

ಆದರೆ ಇದಕ್ಕೆ ತೇಪೆ ಹಚ್ಚಲು ಪ್ರಯತ್ನಿಸಿರುವ ಪಿಸಿಬಿ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್‌ ತಂಡ ಗಳನ್ನು ಒಳಗೊಂಡ ತ್ರಿಕೋನ ಸರಣಿ ಯನ್ನು ಮುಲ್ತಾನ್‌ನಿಂದ ಕರಾಚಿ ಮತ್ತು ಲಾಹೋರ್‌ಗೆ ಸ್ಥಳಾಂತರಿಸಿದೆ. ಕರಾಚಿ, ಲಾಹೋರ್‌ ಕ್ರೀಡಾಂ ಗಣಗಳು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸಿದ್ಧಗೊಂಡಿವೆ ಎಂಬುದನ್ನು ಬಿಂಬಿಸುವುದು ಪಿಸಿಬಿಯ ಉದ್ದೇಶವಾಗಿದೆ ಎಂದು ತರ್ಕಿಸ ಲಾಗುತ್ತಿದೆ.

ಪಂದ್ಯಾವಳಿಗೆ ಉಳಿದಿರುವುದು 40 ದಿನ ಮಾತ್ರ. 25 ದಿನಗಳ ಒಳಗೆ ಕಾಮಗಾರಿಯನ್ನು ಮುಗಿಸಲು ಗಡುವು ನೀಡಲಾಗಿದೆ. ಆದರೆ ಅಷ್ಟರಲ್ಲಿ ಈ ಕ್ರೀಡಾಂಗಣಗಳ ಕಾಮಗಾರಿ ಪೂರ್ತಿಗೊಳ್ಳುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ.

ಯಾವುದಕ್ಕೂ ಐಸಿಸಿ ಅಧಿಕಾರಿಗಳು ಇದನ್ನು ಪರಿಶೀಲಿಸಿದ ಬಳಿಕ ಸ್ಪಷ್ಟ ಚಿತ್ರಣ ವೊಂದು ಲಭಿಸಬಹುದು. ಮುಂದಿನ ವಾರ ಐಸಿಸಿಯ ಅಧಿ ಕಾರಿ ಗಳ ತಂಡವೊಂದು ಕರಾಚಿ, ಲಾಹೋರ್‌ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳಿಗೆ ಭೇಟಿ ನೀಡಲಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next