Advertisement
ಕಳೆದ ವರ್ಷ ದ್ವೀಪದಲ್ಲಿ ಹಲವು ಅವಘಡಗಳು ಸಂಭವಿಸಿದ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲಾಡಳಿತ ಸುರಕ್ಷೆಗೆ ಹೆಚ್ಚಿನ ಮಹತ್ವ ನೀಡಿದೆ. ಪ್ರತಿಕೂಲ ಹವಾಮಾನದ ಕಾರಣದಿಂದಲೂ ದ್ವೀಪಯಾನ ಆರಂಭ ಸ್ವಲ್ಪ ವಿಳಂಬವಾಗಿತ್ತು ಎಂದು ಮಲ್ಪೆ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿಯಾಗಿರುವ ಉಡುಪಿ ನಗರಸಭೆಯ ಪೌರಾಯುಕ್ತ ಡಾ| ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಜಿಲ್ಲಾಡಳಿತದ ಆದೇಶದಂತೆ ಪ್ರವಾಸಿಗರು ಪ್ಲಾಸ್ಟಿಕ್ ಪರಿಕರಗಳಲ್ಲಿ ಪ್ಯಾಕ್ ಮಾಡಿರುವ ಆಹಾರ ಪದಾರ್ಥಗಳನ್ನು ಕೊಂಡೊಯ್ಯು ವಂತಿಲ್ಲ. ಪುಟ್ಟ ಮಕ್ಕಳ ಬಳಕೆಯ ಹಾಲಿನ ಬಾಟಲಿ ಇತ್ಯಾದಿಗಳನ್ನು ಒಯ್ಯಬಹುದಾಗಿದೆ. ಧೂಮಪಾನ, ಮದ್ಯಪಾನವನ್ನೂ ಕಡ್ಡಾಯವಾಗಿ ನಿಷೇಧಿಸಲಾಗಿದೆ. 7 ಕಡೆ ಸೆಲ್ಫಿ ಪಾಯಿಂಟ್
5 ಅಪಾಯಕಾರಿ ಸ್ಥಳಗಳಲ್ಲಿ ಎಚ್ಚರಿಕೆ ಫಲಕ ಮತ್ತು ಬಾವುಟಗಳನ್ನು ಹಾಕಲಾಗಿದೆ. ದ್ವೀಪದ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ 110 ಮೀ. ಉದ್ದ, 100 ಮೀ. ಅಗಲದಲ್ಲಿ ಸ್ವಿಮ್ಮಿಂಗ್ ಝೋನ್ ರಚಿಸಲಾಗಿದೆ. ಅಲ್ಲಿ ಮಾತ್ರ ಈಜಾಡಲು ಅವಕಾಶ. 4 ವಾಚ್ ಟವರ್ ನಿರ್ಮಿಸಿದ್ದು, ಪ್ರವಾಸಿಗರ ಮೇಲೆ ನಿಗಾ ಇಡಲಾಗುವುದು. ದ್ವೀಪಕ್ಕೆ ಸಾಗಲು ಬಂದರಿನ ಸೀವಾಕ್ ಪಾಯಿಂಟ್ ಬಳಿ ಪ್ರವಾಸಿಗರ ದೊಡ್ಡ ಬೋಟ್ ಮತ್ತು ಮಲ್ಪೆ ಬೀಚ್‌ನಿಂದ ಸ್ಪೀಡ್ ಬೋಟ್‌ಗಳ ಸೇವೆ ಇದೆ.