ವಾರ್ನರ್ ಪಾರ್ಕ್: ಕೆರಿಬಿಯನ್ ಪ್ರೀಮಿಯರ್ ಲೀಗ್ ನ ಫೈನಲ್ ಪಂದ್ಯ ಬುಧವಾರ ನಡೆದಿದ್ದು, ಈ ಬಾರಿ ಹೊಸ ತಂಡವೊಂದು ಚಾಂಪಿಯನ್ ಆಗಿದೆ. ಡ್ವೈನ್ ಬ್ರಾವೋ ನಾಯಕತ್ವದ ಸೈಂಟ್ ಕಿಟ್ಸ್ ಆ್ಯಂಡ್ ನೆವಿಸ್ ಪ್ಯಾಟ್ರಿಯಾಟ್ಸ್ ತಂಡವು ಅಂತಿಮ ಎಸೆತದಲ್ಲಿ ಜಯ ಸಾಧಿಸಿ ಮೊದಲ ಬಾರಿಗ ಸಿಪಿಎಲ್ ಟ್ರೋಫಿ ಗೆದ್ದಿದೆ.
ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸೈಂಟ್ ಲೂಸಿಯಾ ಕಿಂಗ್ಸ್ ತಂಡ ನಿಗದಿತ ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಗುರಿ ಬೆನ್ನತ್ತಿದ ಪ್ಯಾಟ್ರಿಯಾಟ್ಸ್ ತಂಡ ಭರ್ತಿ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು.
ಕಿಂಗ್ಸ್ ಪರ ರಖೀಮ್ ಕಾರ್ನವಾಲ್ 43 ರನ್ ಗಳಿಸಿದರೆ, ರೋಸ್ಟನ್ ಚೇಸ್ 43 ರನ್ ಮತ್ತು ಕೀಮೊ ಪೌಲ್ 39 ರನ್ ಗಳಿಸಿದರು. ಪ್ಯಾಟ್ರಿಯಾಟ್ಸ್ ಪರ ಜೋಶುವಾ ಡಿ ಸಿಲ್ವಾ 37 ರನ್, ರುದರ್ ಫೋರ್ಡ್ 25 ರನ್ ಪೇರಿಸಿದರು. ಕೊನೆಯಲ್ಲಿ ಸಿಡಿದ ಡೊಮಿನಿಕ್ ಡ್ರೇಕ್ಸ್ ಕೇವಲ 24 ಎಸೆತಗಳಲ್ಲಿ ಅಜೇಯ 48 ರನ್ ಬಾರಿಸಿದರು.
ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಕಠಿಣ ನಿಯಮ: ಆ್ಯಶಸ್ ಸರಣಿಯಲ್ಲಿ ಆಡದಿರಲು ಇಂಗ್ಲೆಂಡ್ ಚಿಂತನೆ
ಡೊಮಿನಿಕ್ ಡ್ರೇಕ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸರಣಿಯುದ್ದಕ್ಕೂ ಆಲ್ ರೌಂಡ್ ಪ್ರದರ್ಶನ ತೋರಿದ ರೋಸ್ಟನ್ ಚೇಸ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.