Advertisement

SSLC Result ಪೇಟೆಲಿದ್ದೂ ಹಳ್ಳಿ ಶಾಲೆಯಿಂದ ರ‍್ಯಾಂಕ್ ಪಡೆದ ಹುಡುಗಿ!

10:28 PM May 08, 2023 | Team Udayavani |

ಶಿರಸಿ: ವಾಸ್ತವ್ಯ ಪೇಟೆಯಲ್ಲಿ, ಆದರೆ, ಹೈಸ್ಕೂಲ್‌ಗೆ ಹೋಗುವದು ಹಳ್ಳಿಗೆ! ಯಾವುದೇ ಟ್ಯೂಶನಗೂ ಹೋಗದೇ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದು ವಿದ್ಯಾರ್ಥಿನಿ ಸೌಜನ್ಯ ವಿನಾಯಕ ಹೆಗಡೆ ದಾಖಲೆ ಮಾಡಿದ್ದಾಳೆ. ಹಳ್ಳಿ ಮಕ್ಕಳು ಶಿಕ್ಷಣಕ್ಕಾಗಿ ಪೇಟೆಗೆ ತೆರಳಿದರೆ ಈಕೆ ಕುಳವೆ ಬರೂರು ಜನತಾ ವಿದ್ಯಾಲಯಕ್ಕೆ ತೆರಳಿ ಈ ಸಾಧನೆ ಮಾಡಿದ್ದಾಳೆ.

Advertisement

625ಕ್ಕೆ 623 ಅಂಕ ಪಡೆದ ಈಕೆ ವಿನಾಯಕ ಹೆಗಡೆ ಗುಬ್ಬಿಗದ್ದೆ, ಪ್ರಿಯಲಕ್ಷ್ಮೀ ಅವರ ಪುತ್ರಿ. ಕನ್ನಡ 125, ಸಂಸ್ಕೃತ, ಗಣಿತ, ವಿಜ್ಞಾನದಲ್ಲಿ ಶೇ.100 ಅಂಕ ಪಡೆದು ಸಾಧನೆ ಮಾಡಿದ್ದಾಳೆ, ನಿರಂತರ ಓದು, ಶಿಕ್ಷಕರ ಪ್ರೋತ್ಸಾಹ ಈ ಸಾಧನೆಗೆ ಕಾರಣ ಎನ್ನುತ್ತಾಳೆ ಸೌಜನ್ಯ. ರಾಜ್ಯಕ್ಕೆ ಮೂರನೇ ರ‍್ಯಾಂಕ್, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಸಾಹಿತ್ಯಾಸಕ್ತ ಹುಡುಗನಿಗೆ 621 ಅಂಕ!

ಇದೇ ಪ್ರೌಢ ಶಾಲೆಯ ಯುವ ಕವಿ ದರ್ಶನ ಜಯಂತ ಭಟ್ಟ 625 ಕ್ಕೆ 621 ಅಂಕ ಪೆದು ಸಾಧನೆ
ಮಾಡಿದ್ದಾನೆ. ದರ್ಶನಗೆ ಕನ್ನಡಕ್ಕೆ ೧೨೫, ಗಣಿತಕ್ಕೆ ೧೦೦, ಸಮಾಜ ವಿಜ್ಷಾಣಕ್ಕೆ 100 ಅಂಕ ಪಡೆದಿದ್ದಾನೆ. ದರ್ಶನ್ ಹೆಗಡೆ ರಾಜ್ಯಕ್ಕೆ ಐದನೇ ರ‍್ಯಾಂಕ್ ಪಡೆದಿದ್ದಾನೆ. ಪ್ರಗತಿ ಪರ ಕೃಷಿಕ ಕಬಗಾರಿನ ಜಯಂತ ಭಟ್ಟ ಅವರ ಪುತ್ರ ದರ್ಶನ್ ಈ ಸಾಧನೆ ಮಾಡಿದ್ದು, ಹಳ್ಳಿ ಹುಡುಗನೊಬ್ಬ, ಹಳ್ಳಿ ಶಾಲೆಯ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಾಗುವಂತೆ ಆಗಿದ್ದಾನೆ. ದಿನಕರ ದೇಸಾಯಿ ಕನಸಿನ ಜನತಾ ವಿದ್ಯಾಲಯದಲ್ಲಿ ಇಬ್ಬರು ರಾಜ್ಯ ಮಟ್ಟದ ರ‍್ಯಾಂಕ್ ಪಡೆದಿದ್ದುದು ವಿಶೇಷವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next