Advertisement
ಜಿಲ್ಲೆಯಲ್ಲಿ ಒಟ್ಟು 28,638 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 25,052 ಮಂದಿ ಉತ್ತೀರ್ಣರಾಗಿದ್ದಾರೆ.
Related Articles
Advertisement
ಉಡುಪಿ: ಐದು ವಿದ್ಯಾರ್ಥಿಗಳಿಗೆ 625 ಅಂಕಉಡುಪಿ, ಮೇ 19: ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 14,016 ವಿದ್ಯಾರ್ಥಿಗಳಲ್ಲಿ 12,267 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 1,749 ವಿದ್ಯಾರ್ಥಿಗಳು ಅನುತ್ತೀರ್ಣ ರಾಗಿದ್ದಾರೆ.
13,672 ಶಾಲಾ ವಿದ್ಯಾರ್ಥಿಗಳಲ್ಲಿ (ರೆಗ್ಯೂಲರ್) 12,231 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 89.46ರಷ್ಟು ಫಲಿತಾಂಶ ಬಂದಿದೆ. 297 ಖಾಸಗಿ ವಿದ್ಯಾರ್ಥಿಗಳಲ್ಲಿ 27 ಮಂದಿ ತೇರ್ಗಡೆ ಯಾಗಿದ್ದು, ಶೇ. 9.09ರಷ್ಟು ಫಲಿತಾಂಶ ದಾಖಲಾಗಿದೆ. 31 ರೆಗ್ಯೂಲರ್ ಪುನರಾವರ್ತಿ ವಿದ್ಯಾರ್ಥಿಗಳಲ್ಲಿ 8 (ಶೇ. 25.81) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 16 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿ ಉತ್ತೀರ್ಣರಾಗಿದ್ದು ಶೇ. 6.25ರಷ್ಟು ಫಲಿತಾಂಶ ಬಂದಿದೆ. ಈ ವರ್ಷವೂ ಎ ಶ್ರೇಣಿ
ಕಳೆದ ಎರಡು ವರ್ಷದಿಂದ ಜಿಲ್ಲಾವಾರು ರ್‍ಯಾಂಕ್ ಘೋಷಣೆ ಮಾಡದೆ ಶ್ರೇಣಿ ನೀಡಲಾಗುತ್ತಿದೆ. ಉಡುಪಿ ಜಿಲ್ಲೆಯು ಕಳೆದ ವರ್ಷದಂತೆ ಈ ವರ್ಷವೂ ಎ ಶ್ರೇಣಿ ಪಡೆದುಕೊಂಡಿದೆ. 2018-19ರಲ್ಲಿ 2ನೇ ಸ್ಥಾನ, 2017-18, 2016-17ರಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿತ್ತು. ಕಳೆದ ಐದು ವರ್ಷದಲ್ಲಿ ಜಿಲ್ಲೆಯು ಎಸೆಸೆಲ್ಸಿ ಫಲಿತಾಂಶದಲ್ಲಿ ಸಮಾತೋಲನ ಕಾಯ್ದುಕೊಂಡು ಬರುತ್ತಿದೆ. 2015-16ರಿಂದ ಈಚೆಗೆ ಕ್ರಮವಾಗಿ ಶೇ. 89.64, ಶೇ. 84.23, ಶೇ. 88.18, ಶೇ. 89.49, ಶೇ. 89.98, ಶೇ. 100 (ಕೊರೊನಾದಿಂದ ಎಲ್ಲ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲಾಗಿತ್ತು), ಶೇ. 89.46ರಷ್ಟು ಫಲಿತಾಂಶ ದಾಖಲಾಗಿದೆ. ಶಾಲಾವಾರು ಫಲಿತಾಂಶ
13 ಸರಕಾರಿ, 2 ಅನುದಾನಿತ ಹಾಗೂ 26 ಅನುದಾನ ರಹಿತ ಪ್ರೌಢಶಾಲೆಗಳು ಶೇ. 100ರಷ್ಟು ಫಲಿತಾಂಶ ಪಡೆದಿವೆ. 38 ಶಾಲೆಗಳು ಶೇ. 95ಕ್ಕಿಂತ ಹೆಚ್ಚು, 65 ಶಾಲೆಗಳು ಶೇ. 90ಕ್ಕಿಂತ ಅಧಿಕ, 66 ಶಾಲೆಗಳು ಶೇ. 80ಕ್ಕಿಂತ ಹೆಚ್ಚು, 32 ಶಾಲೆಗಳು ಶೇ. 70ಕ್ಕಿಂತ ಅಧಿಕ, 14 ಶಾಲೆಗಳು ಶೇ. 60ಕ್ಕಿಂತ ಹೆಚ್ಚು, 8 ಶಾಲೆಗಳು ಶೇ. 50ಕ್ಕಿಂತ ಅಧಿಕ ಹಾಗೂ 2 ಶಾಲೆಗಳು ಮಾತ್ರ ಶೇ. 50ಕ್ಕಿಂತ ಕಡಿಮೆ ಫಲಿತಾಂಶ ಪಡೆದಿವೆ. ಶೂನ್ಯ ಫಲಿತಾಂಶದ ಯಾವುದೇ ಶಾಲೆ ಜಿಲ್ಲೆಯಲ್ಲಿ ಇಲ್ಲ.