Advertisement
ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ನಿಗದಿತ ಬಸ್‌ಗಳು ಆಚರಣೆಯಲ್ಲಿರುವ ಮಾರ್ಗಗಳಲ್ಲಿ ಪ್ರವೇಶ ಪತ್ರದೊಂದಿಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಪರೀಕ್ಷಾ ಸಮಯದಲ್ಲಿ ಸಾಂದರ್ಭಿಕ ಒಪ್ಪಂದದ ಮೇರೆಗೆ ಬಸ್‌ಗಳನ್ನು ನಿರ್ಧಿಷ್ಟ ಮಾರ್ಗಕ್ಕೆ ಕೋರಿದಲ್ಲಿ ಸಿಬ್ಬಂದಿ ವೆಚ್ಚ ಹಾಗೂ ಡೀಸೆಲ್‌ವೆಚ್ಚವನ್ನು ಭರಿಸಿಕೊಂಡು ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.ಎಸ್‌ಎಸ್‌ಎಲ್‌ಸಿ ಪರೀಕ್ಷಾ ದಿನದಂದು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಚರಣೆಗೊಳಿಸುವ ಮಾರ್ಗಗಳಲ್ಲಿ ಒದಗಿಸುವ ಹೆಚ್ಚುವರಿ ಬಸ್‌ಗಳಿಗೆ ವಿಶೇಷ ದರಗಳಂತೆ ಪ್ರತಿ ಬಸ್‌ಗೆ 5 ಸಾವಿರ ರೂ. (ಇಂಧನ ವೆಚ್ಚ ಮಾತ್ರ) ದರ ವಿಧಿಸಲು ತೀರ್ಮಾನಿಸಲಾಗುತ್ತದೆ.
ಜೂನ್ 18ರಂದು ನಡೆದ ದ್ವಿತೀಯ ಪಿಯುಸಿ ಆಂಗ್ಲ ಭಾಷಾ ಪರೀಕ್ಷೆಯ ಪರೀಕ್ಷಾ ಕೆಂದ್ರಗಳಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗಾಗಿ ಉಪಯೋಗಿಸಿದ ಥರ್ಮಲ್ ಗನ್‌ಗಳನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಲ್ಲಿ ಉಪಯೋಗಿಸಲಾಗುತ್ತದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರುಗಳಿಗೆ ಥರ್ಮಲ್ ಗನ್ ಹಸ್ತಾಂತರಿಸಿ ಪರೀಕ್ಷೆ ಮುಗಿದ ಬಳಿಕ ಹಿಂಪಡೆಯುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.