Advertisement

ಎಸೆಸೆಲ್ಸಿ ಪರೀಕ್ಷಾ ಕೇಂದ್ರ ಹೆಚ್ಚಳ : ಕಳೆದ ವರ್ಷ 145; ಈ ವರ್ಷ 256

02:12 AM Jun 17, 2021 | Team Udayavani |

ಮಂಗಳೂರು: ಮುಂದಿನ ತಿಂಗಳು ಎರಡು ದಿನ ನಡೆಯಲಿರುವ ಎಸೆಸೆಲ್ಸಿ ಪರೀಕ್ಷೆಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಿದ್ಧತೆ ನಡೆಯುತ್ತಿದ್ದು, ಈ ವರ್ಷ 111 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಗಿದೆ.

Advertisement

ಕಳೆದ ವರ್ಷ ಉಭಯ ಜಿಲ್ಲೆಗಳಲ್ಲಿ 145 ಪರೀಕ್ಷಾ ಕೇಂದ್ರಗಳಿದ್ದರೆ ಈ ವರ್ಷ ಅವುಗಳ ಸಂಖ್ಯೆ 256 ಆಗಿದೆ. ಕೊರೊನಾ ಮುನ್ನೆಚ್ಚರಿಕೆಯಾಗಿ ಮತ್ತು ವಿದ್ಯಾರ್ಥಿಗಳ ವಾಸಸ್ಥಳಕ್ಕೆ ಹತ್ತಿರದಲ್ಲೇ ಕೇಂದ್ರಗಳಿರಬೇಕೆಂಬ ನೆಲೆಯಲ್ಲಿ ಈ ಕ್ರಮ. ಕಳೆದ ವರ್ಷ ದ.ಕ.ದಲ್ಲಿ 94 ಕೇಂದ್ರಗಳಿದ್ದರೆ ಈ ಬಾರಿ 179ಕ್ಕೆ ಏರಿದೆ. ಉಡುಪಿಯಲ್ಲಿ 51 ಇದ್ದ ಕೇಂದ್ರಗಳ ಸಂಖ್ಯೆ 77ಕ್ಕೇರಿದೆ.

ಈ ಬಾರಿ ಒಂದು ಕೋಣೆಯಲ್ಲಿ 12 ವಿದ್ಯಾರ್ಥಿಗಳಿಗೆ (ಕಳೆದ ವರ್ಷ 20) ಮಾತ್ರ ಅವಕಾಶ. ಒಂದು ಕೇಂದ್ರದಲ್ಲಿ ಹಿಂದೆ ಕನಿಷ್ಠ 250 (ಗರಿಷ್ಠ 850 ಇದ್ದರು) ವಿದ್ಯಾರ್ಥಿಗಳಿದ್ದರೆ ಈ ಬಾರಿ ಗರಿಷ್ಠ 250 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯಲಿದ್ದಾರೆ.

ಗಡಿ ಭಾಗ; ಬಿಇಒ ಹೆಗಲಿಗೆ
ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ಕೇರಳದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಹಿನ್ನೆಲೆಯಲ್ಲಿ ಅವರಿಗೆ ವಾಹನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಬಿಇಒ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಖಾಸಗಿ ಅಭ್ಯರ್ಥಿಗಳಿಗೆ ತಾಲೂಕಿನಲ್ಲಿ ಕೇಂದ್ರ
ಖಾಸಗಿ ಅಭ್ಯರ್ಥಿಗಳು ಜಿಲ್ಲಾ ಕೇಂದ್ರದಲ್ಲಿ ಪರೀಕ್ಷೆ ಬರೆಯ ಬೇಕೆಂಬ ನಿಯಮವಿತ್ತು. ಈ ಬಾರಿ ಆಯಾ ತಾಲೂಕು ಕೇಂದ್ರದಲ್ಲೇ ಅವಕಾಶವಿದೆ. ಕರಾವಳಿ ಜಿಲ್ಲೆಯಲ್ಲಿ ಶಿಕ್ಷಣ ಪಡೆದು ಲಾಕ್‌ಡೌನ್‌ ಕಾರಣ ಹೊರಜಿಲ್ಲೆಯಲ್ಲಿರುವ ವಿದ್ಯಾರ್ಥಿಗಳಿಗೆ ಅಲ್ಲಿನ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ.

Advertisement

ಈ ಬಾರಿ ಸರಳವಾಗಿ ಎರಡು ದಿನ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಎಲ್ಲÉ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲಾಗುವುದು.
-ಮಲ್ಲೇಸ್ವಾಮಿ, ಎನ್‌.ಎಚ್‌. ನಾಗೂರ, ದ.ಕ., ಉಡುಪಿ ಡಿಡಿಪಿಐಗಳು

Advertisement

Udayavani is now on Telegram. Click here to join our channel and stay updated with the latest news.

Next