Advertisement

ಫೇಲ್‌ ಇಲ್ಲದ ಎಸ್ಸೆಸ್ಸೆಲ್ಸಿಪರೀಕ್ಷೆ ಇಂದಿನಿಂದ

07:54 PM Jul 19, 2021 | Team Udayavani |

ಮೈಸೂರು: ಕೊರೊನಾ 2ನೇ ಅಲೆ ಹಿನ್ನೆಲೆಉನುತ್ತೀರ್ಣ ಇಲ್ಲದ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಂದಿನಿಂದನಡೆಯಲಿದ್ದು, ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆಸಕಲ ಸಿದ್ಧತೆ ಮಾಡಿಕೊಂಡಿವೆ.ಜು.19 ಹಾಗೂ ಜು.21ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆನಡೆಯಲಿದ್ದು, ಕೊರೊನಾ ಸೋಂಕು ಹರಡದಂತೆತಡೆಯಲು ಮುಂಜಾಗ್ರತಾ ಕ್ರಮವಾಗಿ ಸಿದ್ಧತೆನಡೆಸಲಾಗಿದೆ.

Advertisement

ಜಿಲ್ಲೆಯಲ್ಲಿ ಒಟ್ಟು 237 ಪರೀûಾಕೇಂದ್ರಗಳಿದ್ದು, 38,989 ವಿದ್ಯಾರ್ಥಿಗಳು ಪರೀಕ್ಷೆಬರೆಯಲಿದ್ದಾರೆ. ಪರೀûಾ ಕೇಂದ್ರಗಳ ಬಳಿಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿಮಾಡಲಾಗಿದೆ.ರೆಗ್ಯುಲರ್‌ 37.474, ಖಾಸಗಿ-1081, ವಿಶೇಷಮಕ್ಕಳು-434 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಂದೊಂದುಕೊಠಡಿಗೆ12 ವಿದ್ಯಾರ್ಥಿಗಳಿಗೆಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.ಪರೀûಾ ಪ್ರಕ್ರಿಯೆಗೆ 6,684 ಸಿಬ್ಬಂದಿ ನಿಯೋಜಿಸಲಾಗಿದ್ದು, ಕೇಂದ್ರಗಳ ಸುತ್ತಮುತ್ತಲಿರುವ ಜೆರಾಕ್ಸ್‌ಅಂಗಡಿ, ಕೆಫೆ, ಕಂಪ್ಯೂಟರ್‌ ಕೇಂದ್ರಗಳನ್ನು ನಿಷೇಧಿಸಲಾಗಿದೆ. ಪರೀಕ್ಷಾ  ಕೇಂದ್ರದ ಬಳಿ ಗುಂಪುಗೂಡುವುದು, ನಿಲ್ಲುವುದು ಮತ್ತು ವಾಹನಗಳನ್ನುಪಾಕಿಂìಗ್‌ಗೂ ನಿಷೇಧಿಸಲಾಗಿದೆ.

ಕೊರೊನಾ ಮಾರ್ಗಸೂಚಿ ಪಾಲನೆ: ಮಾಸ್ಕ್,ಸ್ಯಾನಿಟೈಸರ್‌ಗಳನ್ನು ಈಗಾಗಲೇ ಪ್ರತೀ ಪರೀûಾಕೇಂದ್ರಕ್ಕೂ ನೀಡಲಾಗಿದೆ. ಪರೀಕ್ಷೆಗೆ ಬರುವವಿದ್ಯಾರ್ಥಿಗಳನ್ನು ಥರ್ಮಲ್‌ ಸ್ಕಾ Âನರ್‌ ಮತ್ತು ಪಲ್ಸ್‌ಆಕ್ಷಿಮೀಟರ್‌ ಮೂಲಕ ಪರೀಕ್ಷಿಸಲಾಗುತ್ತದೆ. ಪರೀûಾಕೇಂದ್ರಗಳಲ್ಲಿ ಕನಿಷ್ಠ ಇಬ್ಬರು ಆರೋಗ್ಯ ಸಿಬ್ಬಂದಿನೇಮಕ ಮಾಡಲಾಗಿದೆ. ಜತೆಗೆ ತಾಲೂಕಿಗೊಂದುಆ್ಯಂಬುಲೆನ್ಸ್‌ ಹಾಗೂ ವೈದ್ಯಕೀಯ ತಂಡ ಪೂರ್ವಸಿದ್ಧತೆಯೊಂದಿಗೆ ತಯಾರಾಗಿರಲಿದೆ.ಹೋಂ ಕ್ವಾರಂಟೈನ್‌ನಲ್ಲಿರುವ ವಿದ್ಯಾರ್ಥಿಗಳನ್ನುಗುರುತಿಸಿ ಅವರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಿ,ಪ್ರತ್ಯೇಕವಾಗಿ ಪರೀಕ್ಷೆ ಬರೆಸಲಾಗುತ್ತದೆ. ಯಾವುದೇಅಕ್ರಮ ನಡೆಯದಂತೆ ತಡೆಯುವ ನಿಟ್ಟಿನಲ್ಲಿಕೇಂದ್ರದಬಳಿ ಪೊಲೀಸರನ್ನು ನಿಯೋಜಿಸಲಾಗುತ್ತದೆ

Advertisement

Udayavani is now on Telegram. Click here to join our channel and stay updated with the latest news.

Next