Advertisement

ಸಂಡೂರಿನಲ್ಲಿ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆ ಸುಗಮ

09:44 AM Jun 28, 2020 | Suhan S |

ಸಂಡೂರು: ಎಸ್‌ಎಸ್‌ಎಲ್‌ಸಿಯ ಎರಡನೇ ದಿನ ಗಣಿತ ಪರೀಕ್ಷೆ ನಡೆಯಿತು. 3351 ವಿದ್ಯಾರ್ಥಿಗಳು ಪರೀಕ್ಷೆ ಬರೆದರು ತಾಲೂಕಿನಾದ್ಯಂತ ಒಟ್ಟು 6 ಕೇಂದ್ರಗಳಲ್ಲಿ 3452 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 101 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ಬಿಇಒ ಡಾ.ಐ.ಅರ್‌. ಅಕ್ಕಿ ತಿಳಿಸಿದರು.

Advertisement

ತಾಲೂಕಿನಾದ್ಯಂತ ಒಟ್ಟು 6 ಕೇಂದ್ರ ಸ್ಥಾಪಿಸಲಾಗಿದೆ. ಟಿ.ಟಿ. 056 ಕೇಂದ್ರದಲ್ಲಿ 433, 2ನೇ ಕೇಂದ್ರದಲ್ಲಿ 454, 3ನೇ ಕೇಂದ್ರದಲ್ಲಿ 1277, 4ನೇ ಕೇಂದ್ರದಲ್ಲಿ 435, 5ನೇ ಕೇಂದ್ರದಲ್ಲಿ 320, 6ನೇ ಕೇಂದ್ರದಲ್ಲಿ 432 ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ವಿವರಿಸಿದರು.

ಪರೀಕ್ಷೆ ಸಮಯದಲ್ಲಿ ಕಂಟೇನ್ಮೆಂಟ್‌ ಝೋನ್‌ಗಳಿಂದ ಬಂದ 21 ವಿದ್ಯಾರ್ಥಿಗಳು ಹಾಜರಾಗಿದ್ದರು. ವಲಸೆ ವಿದ್ಯಾರ್ಥಿಗಳು ಸಹ ಪರೀಕ್ಷೆ ಬರೆದರು. ಅದರಲ್ಲಿ 54 ವಿದ್ಯಾರ್ಥಿಗಳು ಎಲ್ಲರೂ ಸಹ ಹಾಜರಾಗಿದ್ದರು. ಪರೀಕ್ಷೆಗಾಗಿ ಆರು ಜನ ಮುಖ್ಯ ಅಧೀಕ್ಷಕರು, 7 ಜನ ಉಪ ಅಧೀಕ್ಷಕರು, 6 ಅಧಿಧೀಕ್ಷಕರು, 3 ಮಾರ್ಗಾಧಿಕಾರಿಗಳು, 6 ಜನ ಸ್ಥಾನಿಕ ಜಾಗೃತದಳದ ಅಧಿಕಾರಿಗಳು, 7 ಜನ ಸಂಚಾರಿ ಜಾಗೃತದಳಾಧಿಕಾರಿಗಳು, 6 ಜನ ಮೊಬೈಲ್‌ ಸ್ವಾಧೀನಾಧಿಕಾರಿಗಳು, 24 ದೈಹಿಕ ಶಿಕ್ಷಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು, 218 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. 295 ಮೇಲ್ವಿಚಾರಕರು 22 ಸ್ಕೌಟ್ಸ್‌ ಶಿಕ್ಷಕರು, 75 ವಿದ್ಯಾರ್ಥಿಗಳು, 200 ಮಕ್ಕಳಿಗೆ ಒಂದರಂತೆ 17 ಹೆಲ್ತ್‌ ಡೆಸ್ಕ್ನಲ್ಲಿ ಆರೋಗ್ಯ ಸಿಬ್ಬಂದಿ ಪರೀಕ್ಷೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next