“ಹ್ಯಾಪಿ ನ್ಯೂ ಇಯರ್’ ಸಿನಿಮಾ ಮೂಲಕ ಬಿ.ಸಿ.ಪಾಟೀಲ್ ನಿರ್ಮಾಣಕ್ಕೆ ವಾಪಾಸ್ ಆಗುವುದರ ಜೊತೆಗೆ ತಮ್ಮ ಮಗಳನ್ನು ಚಿತ್ರರಂಗಕ್ಕೆ ಕರೆತಂದಿದ್ದಾರೆ. ಅದು ನಾಯಕಿಯಾಗಿ. ಹೌದು, ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಈ ಚಿತ್ರದ ಮೂಲಕ ನಾಯಕಿಯಾಗಿ ಲಾಂಚ್ ಆಗಿದ್ದಾರೆ.
“ಹ್ಯಾಪಿ ನ್ಯೂ ಇಯರ್’ ಚಿತ್ರದಲ್ಲಿ ಸೃಷ್ಟಿ ಪಾಟೀಲ್‌ಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ನಟಿಯಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಳ್ಳುವಂತಹ ಪಾತ್ರವಂತೆ. ಹಾಗಾಗಿಯೇ ಸೃಷ್ಟಿ ಖುಷಿಯಾಗಿದ್ದಾರೆ. ಇಲ್ಲಿ ಸೃಷ್ಟಿಗೆ ತುಂಬಾ ಇಂಡಿಪೆಂಡೆಂಟ್ ಹುಡುಗಿಯ ಪಾತ್ರ ಸಿಕ್ಕಿದೆಯಂತೆ.
“ತುಂಬಾ ಲೈವಿಯಾಗಿರುವ ಪಾತ್ರ. ಮೊದಲ ಚಿತ್ರದಲ್ಲೇ ಈ ತರಹದ ಒಂದು ಪಾತ್ರ ಸಿಕ್ಕ ಬಗ್ಗೆ ಖುಷಿ ಇದೆ. ಲೈಫ್ ಅನ್ನು ಬೇರೆ ತರಹ ನೋಡುವ ಪಾತ್ರವದು. ಸ್ವತಂತ್ರಳಾಗಿ ಓಡಾಡಿಕೊಂಡಿರುವ ಪಾತ್ರ. ನನ್ನ ಸ್ಟಫ್ ತೋರಿಸಲು ಇಲ್ಲಿ ಒಳ್ಳೆಯ ಅವಕಾಶ ಸಿಕ್ಕಿದೆ’ ಎಂದು ತನ್ನ ಪಾತ್ರದ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ ಸೃಷ್ಟಿ.
ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಮೊದಲ ಪ್ರತಿ ಕೂಡಾ ಬಂದಿದೆ. ಆದರೆ, ಸೃಷ್ಟಿ ಪಾಟೀಲ್‌ಗೆ ಮಾತ್ರ ಅದನ್ನು ನೋಡುವ ಅವಕಾಶ ಸಿಕ್ಕಿಲ್ಲ. ನಿರ್ದೇಶಕ ಪನ್ನಗಭರಣ ಸೃಷ್ಟಿಗೆ ಮೊದಲ ಪ್ರತಿ ತೋರಿಸಿಲ್ಲ. “ನೀವು ನಟಿಯಾಗಿ ನಿಮ್ಮ ಕೆಲಸವನ್ನು ಚೆನ್ನಾಗಿ ಮಾಡಿದ್ದೀರಿ. ಅದನ್ನು ನೀವು ಈಗಲೇ ನೋಡಬಾರದು.
ತೆರೆಮೇಲೆ ನೋಡುವವರೆಗೆ ಎಕ್ಸೆ„ಟ್‌ಮೆಂಟ್ ಉಳಿಸಿಕೊಳ್ಳಿ’ ಎಂದರಂತೆ. ಹಾಗಾಗಿ ಸೃಷ್ಟಿ ಪಾಟೀಲ್‌ಗೆ ಸಿನಿಮಾ ನೋಡುವ ಅವಕಾಶ ಇನ್ನೂ ಸಿಕ್ಕಿಲ್ಲ. ಮಗಳ ಮೊದಲ ಸಿನಿಮಾ ಎಂದಾಗ ಸಹಜವಾಗಿಯೇ ಪಾಲಕರಿಗೆ ಟೆನನ್ ಇದ್ದೇ ಇರುತ್ತದೆ. ಮಗಳು ಹೇಗೆ ನಟಿಸುತ್ತಾಳ್ಳೋ ಎಂದು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ.
ಸೃಷ್ಟಿ ಪಾಟೀಲ್ ವಿಷಯದಲ್ಲೂ ಅದು ಮುಂದುವರಿದಿದೆ. ಸಿನಿಮಾದುದ್ದಕ್ಕೂ ಜೊತೆಗಿದ್ದ ಬಿ.ಸಿ.ಪಾಟೀಲ್, ಸಾಕಷ್ಟು ಸಲಹೆ- ಸೂಚನೆಗಳ ಮೂಲಕ ಇವರ ನಟನೆಯನ್ನು ತಿದ್ದಿಕೊಳ್ಳಲು ಸಹಾಯ ಮಾಡಿದರಂತೆ. ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ, ಶ್ರೀಶ ಕೂದುವಳ್ಳಿ ಛಾಯಾಗ್ರಹಣವಿದೆ. ಬೆಂಗಳೂರು ಸುತ್ತಮುತ್ತ ಹಾಗೂ ಮಲೇಷ್ಯಾದಲ್ಲಿ ಚಿತ್ರೀಕರಣ ನಡೆದಿದೆ.