Advertisement

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

12:52 AM Nov 27, 2024 | Team Udayavani |

ಕಲಬುರಗಿ: “ವಕ್ಫ್ ನೋಟಿಸ್‌’ ವಿರುದ್ಧ ರಾಜ್ಯದ ಐದು ಜಿಲ್ಲೆಗಳಲ್ಲಿ “ಬಿಜೆಪಿಯ ಭಿನ್ನರ ಬಣ’ ಆಯೋಜಿಸಿರುವ 2ನೇ ದಿನದ ಜನಜಾಗೃತಿ ಜಾಥಾ ಮಂಗಳ ವಾರ ಕಲಬುರಗಿಯಲ್ಲಿ ನಡೆದಿದ್ದು, “ವಕ್ಫ್  ಕಾಯ್ದೆ ಕಿತ್ತು ಹಾಕಬೇಕೆಂಬುದೇ ನಮ್ಮ ಬೇಡಿಕೆ. ನಮ್ಮ ಹೋರಾಟ ಯಾವುದೇ ಕುಟುಂಬದ ವಿರುದ್ಧವಲ್ಲ’ ಎಂದು ಹೋರಾಟದ ನೇತೃತ್ವ ವಹಿಸಿರುವ ವಿಜಯ ಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

Advertisement

ಅಲ್ಲದೆ, ಪಕ್ಷದ ಅಧ್ಯಕ್ಷ ಸೇರಿ ಏನಾದರೂ ಆಗಬೇಕು ಎಂಬ ಉದ್ದೇಶವೂ ಇಲ್ಲ. ಯಾರು ಏನು ಬೇಕಾದರೂ ಹೇಳಲಿ. ಯಾರಧ್ದೋ ಮುಲಾಜಿಗೆ ಬಿದ್ದು, “ವಕ್ಫ್ ವಿರುದ್ಧ ಹೋರಾಟಕ್ಕೆ ಹೋಗಬೇಡಿ, ಈ ಹೋರಾಟ ನಮ್ಮದಲ್ಲ’ ಎಂದು ಹೇಳುವ ನೈತಿಕತೆ ಯಾರಿಗೂ ಇಲ್ಲ.

ಯಾರೂ ಭಯ ಪಡಬೇಡಿ. ಮುಂದಿನ ದಿನಗಳಲ್ಲಿ ನಾವೇ, ಈ ತಂಡದವರೇ ಸಿಎಂ ಆಗುವುದು ಖಚಿತ’ ಎಂದೂ ಯತ್ನಾಳ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟಿಕೆಟ್‌ ನೀಡುವ ಅಧಿಕಾರವೂ ನಮಗೆ ಮುಂದಿನ ದಿನಗಳಲ್ಲಿ ಟಿಕೆಟ್‌ ನೀಡುವ ಅಧಿಕಾರವೂ ನಮಗೇ ಬರಲಿದೆ. ನಮ್ಮ ತಂಡದವರು ಸಿಎಂ ಆದ ಅನಂತರ ಪ್ರಥಮ ಸಚಿವ ಸಂಪುಟ ಸಭೆಯಲ್ಲೇ ಅನೇಕ ವರ್ಷಗಳಿಂದ ಹಿಂದೂಗಳ ಮೇಲೆ ಹಾಕಿರುವ ಎಲ್ಲ ಕೇಸ್‌ಗಳನ್ನು ಹಿಂದಕ್ಕೆ ಪಡೆಯುತ್ತೇವೆ. ಅಲ್ಲದೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದರು.

ಡಿ. 2ರ ಅನಂತರ ವರದಿ
ರಾಜ್ಯದ ಮಠ-ಮಂದಿರಗಳು ಹಾಗೂ ರೈತರ ಜಮೀನಿನ ದಾಖಲೆಗಳಲ್ಲಿ ವಕ್ಫ್ ಎಂದು ನಮೂದಿ ಸಿರುವುದಕ್ಕೆ ಸಂಬಂ ಧಿಸಿ ಡಿ. 3 ಇಲ್ಲವೇ 4ರಂದು ದಿಲ್ಲಿಯಲ್ಲಿ ಜಗದಾಂಬಿಕಾ ಪಾಲ್‌ ನೇತೃತ್ವದ ಸಂಸತ್ತಿನ ಜಂಟಿ ಸಮಿತಿಗೆ ಮಧ್ಯಾಂತರ ವರದಿ ಸಲ್ಲಿಸಲಾಗುವುದು ಎಂದು ಯತ್ನಾಳ್‌ ತಿಳಿಸಿದರು.

Advertisement

“ಸಿ.ಟಿ. ರವಿ ಅವರನ್ನೇ ಕೇಳಿ’
ನಮ್ಮ ಹೋರಾಟ ವಕ್ಫ್ ಬೋರ್ಡ್‌ನಿಂದ ಅನ್ಯಾಯಕ್ಕೊಳಗಾದ ರೈತರು, ಮಠಾಧೀಶರ ಪರವಾಗಿದೆ. ಇದು ಯಾರ ವಿರುದ್ಧವೂ ಅಲ್ಲ. ಇದನ್ನು ಸಹಿಸದವರು ಏನೇನೋ ಹೇಳುತ್ತಾರೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಮಂಗಳವಾರ ರಾತ್ರಿ ಯಾದಗಿರಿಯಲ್ಲಿ ಹೇಳಿದರು. ಪಕ್ಷದ ವೇದಿಕೆಯಿಂದ ಹೋರಾಟ ನಡೆಸಬೇಕು ಎಂಬ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ರವಿ ನಿತ್ಯ ನಮ್ಮ ತಂಡದ ಜತೆ ದೂರವಾಣಿ ಮೂಲಕ ಮಾತನಾಡುತ್ತಾರೆ. ನಿಮ್ಮ ಹೋರಾಟ ಸತ್ಯದ ಪರ ಇದೆ ಎಂದು ನಮಗೆ ಹೇಳಿದ್ದರು, ಈಗೇಕೆ ಹೀಗೆ ಮಾತನಾಡಿದ್ದಾರೆ ಎಂದು ಅವರನ್ನೇ ಕೇಳಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next