Advertisement

ಕಂಬಳ ಓಟದಲ್ಲಿ ಹೊಸ ದಾಖಲೆ ಬರೆದ ಶ್ರೀನಿವಾಸ ಗೌಡ

10:36 PM Mar 28, 2021 | Team Udayavani |

ಪುಂಜಾಲಕಟ್ಟೆ : ಕಂಬಳದ ವೇಗದ ಓಟಗಾರ ಖ್ಯಾತಿಯ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಅವರು ಬಂಟ್ವಾಳದ ಕಕ್ಯಪದವು ಮೈರಾ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳದಲ್ಲಿ ರವಿವಾರ ಹೊಸತ್ತೊಂದು ದಾಖಲೆ ಬರೆದಿದ್ದಾರೆ. 100 ಮೀ.ನಲ್ಲಿ ತನ್ನದೇ ಹೆಸರಿನಲ್ಲಿದ್ದ 8.96 ಸೆಕೆಂಡ್‌ಗಳ ದಾಖಲೆಯನ್ನು ಮುರಿದು 8.78 ಸೆಕೆಂಡ್‌ಗಳ ಹೊಸ ದಾಖಲೆ ಬರೆದಿದ್ದಾರೆ.

Advertisement

ಕಳೆದ ವಾರ ಬೆಳ್ತಂಗಡಿಯ ವೇಣೂರಿನಲ್ಲಿ ನಡೆದ ಕಂಬಳದಲ್ಲಿ ಅವರು 100 ಮೀ.ನ್ನು 8.96 ಸೆಕೆಂಡ್‌ಗಳ ದಾಖಲೆ ಬರೆದಿದ್ದರು.

ರವಿವಾರ ಮೈರಾದಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ ಶ್ರೀನಿವಾಸ ಗೌಡ ಅವರು ಮಿಜಾರು ಪ್ರಸಾದ್ ನಿಲಯ ಶಕ್ತಿಪ್ರಸಾದ್ ಶೆಟ್ಟಿ ಅವರ ಕೋಣಗಳನ್ನು ಓಡಿಸಿ 100 ಮೀ.ನ್ನು 8.78 ಸೆ.ಗಳಲ್ಲಿ ಓಡಿ ಹೊಸ ದಾಖಲೆ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next