Advertisement

ಇಂಗ್ಲೆಂಡ್‌ 2-0 ಕ್ಲೀನ್‌ ಸ್ವೀಪ್‌ ಸಾಹಸ

12:08 AM Jan 26, 2021 | Team Udayavani |

ಗಾಲೆ: ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಮತ್ತೂಮ್ಮೆ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಶ್‌ ಅನುಭವಿಸಿದ ಶ್ರೀಲಂಕಾ ತವರಲ್ಲೇ ತೀವ್ರ ಮುಖಭಂಗಕ್ಕೀಡಾಗಿದೆ. ಗಾಲೆಯಲ್ಲಿ ನಡೆದ 2ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಜೋ ರೂಟ್‌ ಬಳಗ ಸರಣಿಯನ್ನು 2-0 ಅಂತರದಿಂದ ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡಿತು.

Advertisement

ಸರಣಿಯಲ್ಲಿ ಹಿಂದಿದ್ದ ಶ್ರೀಲಂಕಾಕ್ಕೆ ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಉತ್ತಮ ಅವಕಾಶವಿತ್ತು. ಆದರೆ 37 ರನ್‌ ಮುನ್ನಡೆಯ ಹೊರತಾಗಿಯೂ ದ್ವಿತೀಯ ಸರದಿಯಲ್ಲಿ ಆಂಗ್ಲರ ಸ್ಪಿನ್‌ ದಾಳಿಗೆ ತತ್ತರಿಸಿ 126ಕ್ಕೆ ಕುಸಿಯಿತು. 164 ರನ್‌ ಗುರಿ ಪಡೆದ ಇಂಗ್ಲೆಂಡ್‌ 4 ವಿಕೆಟ್‌ ಕಳೆದುಕೊಂಡು ಜಯಭೇರಿ ಮೊಳಗಿಸಿತು. 2019ರ ಪ್ರವಾಸದ ವೇಳೆ ಇಂಗ್ಲೆಂಡ್‌ 3-0 ಅಂತರದಿಂದ ಲಂಕೆಗೆ ವೈಟ್‌ವಾಶ್‌ ಮಾಡಿತ್ತು.

ಈ ಫ‌ಲಿತಾಂಶದಿಂದ ಇಂಗ್ಲೆಂಡ್‌ ಮುಂಬರುವ ಭಾರತದೆದುರಿನ 4 ಪಂದ್ಯಗಳ ಟೆಸ್ಟ್‌ ಸರಣಿಗೆ ಹೊಸ ಹುರುಪಿನಿಂದ ಸಜ್ಜಾಯಿತು. ಹಾಗೆಯೇ ರೂಟ್‌ ಬಳಗದ ಈ ಪರಾಕ್ರಮ ಕೊಹ್ಲಿ ಪಡೆಯ ಪಾಲಿಗೊಂದು ಎಚ್ಚರಿಕೆಯ ಗಂಟೆಯೂ ಹೌದು.

15 ವಿಕೆಟ್‌ ಪತನ :

ಸೋಮವಾರದ 4ನೇ ದಿನದ ಆಟ 15 ವಿಕೆಟ್‌ ಪತನಕ್ಕೆ ಸಾಕ್ಷಿಯಾಯಿತು. 9ಕ್ಕೆ 339 ರನ್‌ ಗಳಿಸಿದ್ದ ಇಂಗ್ಲೆಂಡ್‌ 344ಕ್ಕೆ ಇನ್ನಿಂಗ್ಸ್‌ ಮುಗಿಸಿತು. ಬಳಿಕ ಘಾತಕ ಸ್ಪಿನ್‌ ದಾಳಿ ಸಂಘಟಿಸಿದ ಡಾಮ್‌ ಬೆಸ್‌ ಮತ್ತು ಜಾಕ್‌ ಲೀಚ್‌ ಲಂಕೆಗೆ ಏಳYತಿ ಇಲ್ಲದಂತೆ ಮಾಡಿದರು. ಇಬ್ಬರೂ 4 ವಿಕೆಟ್‌ ಕಿತ್ತರು. ಉಳಿದೆರಡು ವಿಕೆಟ್‌ ರೂಟ್‌ ಪಾಲಾಯಿತು. ಹೀಗೆ ಲಂಕೆಯ ಎಲ್ಲ 10 ವಿಕೆಟ್‌ ಸ್ಪಿನ್ನರ್‌ಗಳೇ ಸೇರಿಕೊಂಡು ಉಡಾಯಿಸಿದರು.

Advertisement

10ನೇ ಕ್ರಮಾಂಕದಲ್ಲಿ ಆಡಲಿಳಿದ ಎಂಬುಲ್ದೇನಿಯ ಅವರ 40 ರನ್‌ ಲಂಕಾ ಸರದಿಯ ಗರಿಷ್ಠ ವೈಯಕ್ತಿಕ ಮೊತ್ತವಾಗಿತ್ತು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-381 ಮತ್ತು 126 (ಎಂಬುಲ್ದೇನಿಯ 40, ರಮೇಶ್‌ ಮೆಂಡಿಸ್‌ 16, ಕುಸಲ್‌ ಪೆರೆರ 14, ಬೆಸ್‌ 49ಕ್ಕೆ 4, ಲೀಚ್‌ 59ಕ್ಕೆ 4, ರೂಟ್‌ ಸೊನ್ನೆಗೆ 2). ಇಂಗ್ಲೆಂಡ್‌-344 ಮತ್ತು 4 ವಿಕೆಟಿಗೆ 164 (ಸಿಬ್ಲಿ ಔಟಾಗದೆ 56, ಬಟ್ಲರ್‌ ಔಟಾಗದೆ 46, ಎಂಬುಲೆªàನಿಯ 73ಕ್ಕೆ 3). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಜೋ ರೂಟ್‌.

Advertisement

Udayavani is now on Telegram. Click here to join our channel and stay updated with the latest news.

Next