Advertisement

ಇಸ್ಕಾನ್‌ನಲ್ಲಿ ಶ್ರೀಕೃಷ್ಣಬಲರಾಮ ರಥಯಾತ್ರೆ

06:36 AM Jan 20, 2019 | |

ಬೆಂಗಳೂರು: ರಾಜಾಜಿನಗರದ ವೆಸ್ಟ್‌ ಆಫ್ ಕಾರ್ಡ್‌ ರಸ್ತೆಯಲ್ಲಿರುವ ಇಸ್ಕಾನ್‌ ದೇವಸ್ಥಾನದಲ್ಲಿ ಶನಿವಾರ ಶ್ರೀಕೃಷ್ಣ ಬಲರಾಮ ರಥಯಾತ್ರೆ ಸಂಭ್ರಮ  ಭಕ್ತಿಪೂರ್ವಕವಾಗಿ ನಡೆಯಿತು. 34ನೇ ವಾರ್ಷಿಕ ಉತ್ಸವಕ್ಕೆ ಮಂತ್ರಾಲಯ ಮಠಾಧೀಶರಾದ ಸುಬುಧೇಂದ್ರ ತೀರ್ಥರು ಚಾಲನೆ ನೀಡಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದು, ಹರೇ ಕೃಷ್ಣ ಮಹಾಮಂತ್ರವನ್ನು ಜಪಿಸುತ್ತಾ ಆನಂದ ಸಾಗರದಲ್ಲಿ ಮಿಂದೆದ್ದರು.

Advertisement

ಶ್ರೀಕೃಷ್ಣಬಲರಾಮರ ಮೂರ್ತಿಯನ್ನು ಮಂದಿರದಿಂದ ಭವ್ಯ ಮೆರವಣಿಗೆಯಲ್ಲಿ ಕರೆತಂದು, ರಥದಲ್ಲಿ ಇರಿಸಿ, ಮಂದಿರದ ಸುತ್ತಲಿನ ರಸ್ತೆಯಲ್ಲಿ ರಥ ಸಾಗಿ ಬಂದಿದ್ದು, ಹಾದಿಯೂದ್ಧಕ್ಕೂ ಸಂಕೀರ್ತನೆ ಮತ್ತು ಪ್ರಸಾದ ವಿತರಣೆ ನಡೆಯಿತು. ರಥವನ್ನು ವರ್ಣರಂಜಿತವಾಗಿ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು.

ಸುಮಾರು ಐನೂರು ಜನರು ಒಮ್ಮೆಗೆ ರಥವನ್ನು ಎಳೆಯಬಹುದಾದ ವ್ಯವಸ್ಥೆ ಮಾಡಲಾಗಿದ್ದು, 26 ಅಡಿ ಎತ್ತರದ ಆಧೂನಿಕ ಹಾಗೂ ಸಾಂಪ್ರದಾಯಿಕ ಶೈಲಿಯ ರಥ ನಿರ್ಮಾಣ ಮಾಡಲಾಗಿತ್ತು. ರಥಯಾತ್ರೆಯ ನಂತರ ಪ್ರಸಾದ ವಿತರಣೆ ನಡೆಯಿತು. ಇಸ್ಕಾನ್‌ ಬೆಂಗಳೂರು ಅಧ್ಯಕ್ಷ ಮಧು ಪಂಡಿತ್‌ ದಾಸ, ಶಾಸಕ ಕೆ.ಗೋಪಾಲಯ್ಯ, ಉಪ ಮೇಯರ್‌ ಭದ್ರೇಗೌಡ ಮೊದಲಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next