Advertisement
ನಗರದ ವಯ್ನಾಲಿ ಕಾವಲ್‌ನಲ್ಲಿರುವ ತಿರುಪತಿ ತಿರುಮಲ ದೇವಸ್ಥಾನ ಆವರಣದಲ್ಲಿ ಭಾನುವಾರ ಮಲ್ಲೇಶ್ವರ ಬ್ರಾಹ್ಮಣ ಮಹಾಸಭಾ ಪುರಂದರದಾಸ ಮತ್ತು ತ್ಯಾಗರಾಜರ ಆರಾಧನೆ ಹಾಗೂ ಕನಕದಾಸ ಜಯಂತಿ ಮತ್ತು ವಾಗ್ಗೇಯಕಾರರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ “ವಿಪ್ರಶಕ್ತಿ-ಮಹಾಶಕ್ತಿ’ಯಲ್ಲಿ ಸಾನ್ನಿಧ್ಯ ವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣರ ಬಗ್ಗೆ ಇತರರಿಗೆ ಯಾವುದೇ ದ್ವೇಷ ಇಲ್ಲ. ಆದರೆ, ಕೆಲ ಬುದ್ಧಿಜೀವಿಗಳು ಬ್ರಾಹ್ಮಣರು ಮತ್ತು ಉಳಿದವರ ನಡುವೆ ದ್ವೇಷದ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
Related Articles
ವೀರಶೈವ ಮತ್ತು ಲಿಂಗಾಯತರು ಇಬ್ಬರೂ ಒಂದೇ ಹಾಗೂ ಇವೆರಡೂ ಹಿಂದೂ ಧರ್ಮದ ಭಾಗವೇ ಆಗಿವೆ. ತಾವು ಹಿಂದೂಗಳಲ್ಲ ಎಂದು ಹೇಳಲು ಇಬ್ಬರಿಗೂ ಯಾವುದೇ ಅಧಿಕಾರ ಇಲ್ಲ ಎಂದು ಪೇಜಾವರಶ್ರೀ ಸ್ಪಷ್ಟಪಡಿಸಿದರು.
Advertisement
ಲಿಂಗಾಯತರು ಇಷ್ಟಲಿಂಗ ಪೂಜೆ ಮಾಡುತ್ತಾರೆ. ಆ ಇಷ್ಟಲಿಂಗವೂ ಶಿವನ ಪ್ರತಿಮೆಯಾಗಿದೆ. ಆ ಶಿವ ಹಿಂದೂಗಳ ಆರಾಧ್ಯದೈವ. ಹಾಗಾಗಿ, ತಾವು ಹಿಂದೂಗಳಲ್ಲ ಎಂದು ಹೇಳಿಕೊಳ್ಳುವ ಅಧಿಕಾರವೇ ಲಿಂಗಾಯತರಿಗೆ ಇಲ್ಲ. ಅಲ್ಲದೆ, ವೈದಿಕರಲ್ಲಿ ವಿವಿಧ ಪಂಥಗಳಿದ್ದರೂ ಅವರೆಲ್ಲರೂ ಬ್ರಾಹ್ಮಣರಾಗಿದ್ದಾರೆ. ಅದೇ ರೀತಿ, ಲಿಂಗಾಯತ-ವೀರಶೈವರಲ್ಲಿ ಆಚರಣೆಗಳು ಬೇರೆ ಬೇರೆ ಆಗಿದ್ದರೂ ಅವೆರಡೂ ಒಂದೇ ಹಾಗೂ ಹಿಂದೂಗಳೇ ಎಂದು ಪುನರುತ್ಛರಿಸಿದರು. ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಮತ್ತು ಬ್ರಾಹ್ಮರು ಒಟ್ಟಾಗಬೇಕು. ಈ “ಮುಷ್ಠಿ’ (ಒಗ್ಗಟ್ಟು) ಮತ್ತೂಬ್ಬರನ್ನು ಹಣಿಯಲು ಅಲ್ಲ. ಸನಾತನ ಧರ್ಮ ರಕ್ಷಣೆಗೆ. ದ್ವೆ„ತ, ಅದ್ವೆ„ತ ಮತ್ತು ವಿಶಿಷ್ಟಾದ್ವೆ„ತ ಎಂದು ಬೇರೆ ಬೇರೆ ಮತಗಳಿರಬಹುದು. ಆದರೆ, ಅವೆಲ್ಲವುಗಳಿಗೂ ಮೂಲ ಒಂದೇ. ಹಿಂದೂ ಎಂಬ ಮಹಾಗೋಡೆ ಕುಸಿಯದಂತೆ ಎಲ್ಲರೂ ಎಚ್ಚರ ವಹಿಸಬೇಕು ಎಂದರು.
ಮಲ್ಲೇಶ್ವರದಲ್ಲಿ ಡಾ.ಅಶ್ವತ್ಥನಾರಾಯಣ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಕ್ಷೇತ್ರದಲ್ಲಿ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ, ಆ ಸಮುದಾಯದವರಿಗೂ ಅವಕಾಶ ನೀಡಬೇಕು.– ಬಿಜೆಪಿ ಟಿಕೆಟ್ ಆಕಾಂಕ್ಷಿ ಪ್ರಕಾಶ್ ಅಯ್ಯಂಗಾರ್