Advertisement

ಪುತ್ತಿಗೆ ಶ್ರೀಗಳ ಷಷ್ಟ್ಯಬ್ದ ಜನ್ಮ ನಕ್ಷತ್ರ ಸಂಭ್ರಮ

10:32 PM Aug 25, 2020 | mahesh |

ಉಡುಪಿ: ಭಗವಂತನು ಎಲ್ಲರಿಗೂ ಒಂದು ಉತ್ತಮ ಅವಕಾಶ ವನ್ನು ನೀಡುತ್ತಾನೆ. ಮತ್ತೆ ಮತ್ತೆ ಅಂತಹ ಅವಕಾಶಗಳು ಒದಗಲಾರದು. ಆದ್ದರಿಂದ ಅದನ್ನು ಸಂಶಯಪಡದೇ ಸದು ಪಯೋಗ ಪಡಿಸಿಕೊಳ್ಳಬೇಕು ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು. ತಮ್ಮ ಷಷ್ಟ್ಯಬ್ದ ಜನ್ಮನಕ್ಷತ್ರದ ಪ್ರಯುಕ್ತ ಮಾಣಿಯೂರು ಬಂಧು ವರ್ಗ, ಶ್ರೀ ಪುತ್ತಿಗೆ ವಿದ್ಯಾಪೀಠದ ಹಳೆ ವಿದ್ಯಾರ್ಥಿಗಳು ಮತ್ತು ಶ್ರೀ ಮಠದ ಸಿಬಂದಿ ವರ್ಗ ಪುತ್ತಿಗೆಯ ಮೂಲ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಗುರುವಂದನೆಯನ್ನು ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.

Advertisement

ಕಠಿನ ಪರಿಶ್ರಮದಿಂದ ಯಶಸ್ಸನ್ನು ಪಡೆದುಕೊಳ್ಳಬಹುದು. ಧೈರ್ಯದಿಂದ ಮುನ್ನುಗ್ಗಿ ಕಾರ್ಯವನ್ನು ಸಾಧಿಸುವ ಕಲೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಯಶಸ್ಸಿನ ಮೂಲವಾದ ಹೆತ್ತವರು ಮತ್ತು ಗುರುಗಳ ಸೇವೆಯನ್ನು ಎಂದಿಗೂ ಬಿಡಬಾರದು ಎಂದು ತಿಳಿಸಿದರು.

ಕಿರಿಯ ಯತಿ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಓಂಪ್ರಕಾಶ್‌ ಭಟ್‌ ಸಂಪಾದಿಸಿರುವ ಶ್ರೀಪಾದರ ಕೃತಿಗಳ ಪರಿಚಯಾತ್ಮಕವಾದ “ಕೃತಿ ಸ್ಮತಿ’ ಪುಸ್ತಕವನ್ನು ಶ್ರೀಗಳಿಗೆ ಸಮರ್ಪಿಸಲಾಯಿತು. ತಿರುಮಲ ಮೊದಲಾದ ಕ್ಷೇತ್ರಗಳ ಸನ್ನಿಧಿಯಿಂದ ತಂದ ಶೇಷಶಾಸ್ತ್ರ ಪ್ರಸಾದಗಳನ್ನು ನೀಡಲಾಯಿತು.

ದಿವಾನ ಎಂ. ನಾಗರಾಜ ಆಚಾರ್ಯ, ಎಂ. ಪ್ರಸನ್ನ ಆಚಾರ್ಯ ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ವಾನ್‌ ಬಿ. ಗೋಪಾಲಾಚಾರ್ಯ ನಿರೂಪಿಸಿದರು. ಜನ್ಮನಕ್ಷತ್ರ ಶಾಂತಿ, ನವಗ್ರಹ ಸಹಿತ ಶನಿಶಾಂತಿ, ಧನ್ವಂತರಿ ಹೋಮ, ವಿರಜಾಹೋಮ, ತಂತ್ರಸಾರ ಮಂತ್ರದ ಹೋಮಗಳೊಂದಿಗೆ ಸಂಸ್ಥಾ ನದ ದೇವರಿಗೆ ತುಳಸೀ ಲಕ್ಷಾರ್ಚನೆ ಕಾರ್ಯಕ್ರಮಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next