Advertisement
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಜಕ ಸಂಘ ಮುಂಬಯಿ ಅಧ್ಯಕ್ಷ ಸತೀಶ್ ಸಾಲ್ಯಾನ್ ಇವರು, ಜಾತಿಗಿಂತ ನೀತಿ ಮಹತ್ವದ್ದಾಗಿದೆ. ನಿಸ್ವಾರ್ಥ ಭಾವನೆಯಿಂದ ಮಾನವನ ಏಳ್ಗೆಗಾಗಿ ತಮ್ಮಿಂದಾದಷ್ಟು ಸಹಕಾರವನ್ನು ನೀಡಿದಾಗ ಭಗವಂತ ಸದಾ ನಮ್ಮನ್ನು ರಕ್ಷಿಸುತ್ತಾನೆ. ಸಂಘಟನೆಯು ಶಿಸ್ತುಬದ್ಧವಾಗಿ, ಅಚ್ಚುಕಟ್ಟಾಗಿ ನಡೆಯಲು ಎಲ್ಲರೂ ಸಹಕರಿಸಬೇಕು. ಸಮಾಜದ ಋಣ ತೀರಿಸಲು ಸಮಾಜ ಸೇವೆಯೇ ಮುಖ್ಯ ವಾಗಿದೆ ಎಂದು ನುಡಿದು ನೂತನ ಶಾಖೆಗೆ ಶುಭಹಾರೈಸಿದರು.
Related Articles
Advertisement
ಮುಂಬಯಿಯಿಂದ ಆಗಮಿಸಿದ ಶ್ರೀ ರಜಕ ಸಂಘದ ಸುಮಿತಾ ಸಾಲ್ಯಾನ್, ದಯಾನಂದ ಸಾಲ್ಯಾನ್, ಸೀನ ಸಾಲ್ಯಾನ್, ಕುಮಾರ್ ಬಂಗೇರ, ಸಂಜೀವ ಎಕ್ಕಾರು , ರಮೇಶ್ ಪಲಿಮಾರು, ಪಾಂಡು ಮಡಿವಾಳ, ಸುದೇಶ್ ಸಾಲ್ಯಾನ್, ರಾಜಶ್ರೀ ಸಾಲ್ಯಾನ್, ಜಯ ಮಡಿವಾಳ, ಬಾಲಕೃಷ್ಣ ಸಾಲ್ಯಾನ್, ಶಶಿಧರ ಸಾಲ್ಯಾನ್, ರತ್ನಾಕರ ಕುಂದರ್, ಸಂತೋಷ್ ಸಾಲ್ಯಾನ್, ಸರಿತಾ ಕುಂದರ್ ಮೊದಲಾದವರು ಶುಭಹಾರೈಸಿದರು.
ನೂತನ ಅಧ್ಯಕ್ಷರಾಗಿ ನೇಮಕಗೊಂಡ ಧನಂಜಯ್ ಗುಜರನ್ ಇವರು ಮಾತನಾಡಿ, ಇಂತಹ ಸಮಾಜ ಸೇವೆ ಮಾಡುವ ಭಾಗ್ಯ ತನ್ನ ಪಾಲಿಗೆ ಲಭಿಸಿರುವುದು ಅತೀವ ಸಂತೋಷವಾಗುತ್ತಿದೆ. ತಾನು ಖಂಡಿತವಾಗಿಯೂ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿ ಶಾಖೆಯ ಅಭಿವೃದ್ಧಿಗೆ ಪುಣೆಯ ಸಮಾಜ ಬಾಂಧವರು ಸಂಪೂರ್ಣ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ ಎಂದು ನುಡಿದು ಕೃತಜ್ಞತೆ ಸಲ್ಲಿಸಿದರು.
ಲಘು ಉಪಾಹಾರದ ವ್ಯವಸ್ಥೆ ಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದ ಕಾರ್ಯದರ್ಶಿ ಅನಿಲ್ ಗುಜರನ್ ಅವರನ್ನು ಅಭಿನಂದಿಸಲಾಯಿತು. ಪುಣೆ ವಿವಿಧೆಡೆಗಳಿಂದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.