Advertisement

ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ:ಮುಂಬಯಿ ಪ್ರವಾಸ ಸಮಾರೋಪ

04:16 PM Aug 05, 2018 | Team Udayavani |

ನವಿಮುಂಬಯಿ: ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ  ಆಶ್ರಯದಲ್ಲಿ ಶ್ರೀ ಮಹಾಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ಮಂಡಳಿ ಕಾಟಿಪಳ್ಳ, ಸುರತ್ಕಲ್‌ ಇದರ ವರ್ಷದ ಮುಂಬಯಿ ಪ್ರವಾಸದ ಸರಣಿ ಯಕ್ಷಗಾನ ಪ್ರದರ್ಶನದ ಸಮಾರೋಪ ಸಮಾರಂಭವು ಆ. 1 ರಂದು ಅಪರಾಹ್ನ ಘನ್ಸೋಲಿಯ ಶ್ರೀ ಮೂಕಾಂಬಿಕಾ ಮಂದಿರದ ಸಭಾಂಗಣದಲ್ಲಿ ನಡೆಯಿತು.

Advertisement

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಇವರು ಮಾತನಾಡಿ, ಶ್ರೀ ಕ್ಷೇತ್ರದ ಸನ್ನಿದಾನದಲ್ಲಿ ಈಗಾಗಲೇ ಪ್ರಸ್ತುತ ವರ್ಷ 36 ಯಕ್ಷಗಾನ ಪ್ರದರ್ಶನಗಳ ದಿನಾಂಕವನ್ನು ನಿಗಧಿಪಡಿಸಿಕೊಳ್ಳಲಾಗಿದೆ. ಇದೀಗ ಅಜೆಕಾರು ಕಲಾಭಿಮಾನಿ ಬಳಗದ ಆಶ್ರಯದಲ್ಲಿ ನಡೆದ ಸರಣಿ ಯಕ್ಷಗಾನ ಪ್ರದರ್ಶನವು ದೇವಿಯ ಸನ್ನಿಧಾನದಲ್ಲಿ ಸಮಾರೋಪ ಕಂಡಿರುವುದು ಹೆಮ್ಮೆ ಎನಿಸುತ್ತಿದೆ. ಇಲ್ಲಿ ನಡೆಯುವ ಎಲ್ಲಾ ಯಕ್ಷಗಾನ ಪ್ರದರ್ಶನಗಳು ದಾನಿಗಳ ತುಂಬು ಹೃದಯದ ಸಹಕಾರದಿಂದ ನಡೆಯುತ್ತಿದೆ. ಇದು ದೇವಿಯ ಆಶೀರ್ವಾದ ಎಂದೆ ಹೇಳಬಹುದು. ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಕಲಾಸೇವೆ ನಿಜವಾಗಿಯೂ ಶ್ಲಾಘನೀಯ. ಪ್ರತೀ ವರ್ಷ ತವರೂರ ಯಕ್ಷಗಾನ, ತಾಳಮದ್ದಳೆ ತಂಡಗಳನ್ನು ಕರೆತಂದು ಸರಣಿ ಪ್ರದರ್ಶನವನ್ನು  ನೀಡುವುದು ಮಾತ್ರವಲ್ಲ ಅರ್ಹ ಕಲಾವಿದರನ್ನು ಗೌರವ ಧನದೊಂದಿಗೆ ಸತ್ಕರಿಸುತ್ತಿರುವುದು ಅವರ ಹೃದಯವಂತಿಕೆಗೆ ಸಾಕ್ಷಿಯಾಗಿದೆ. ಅವರಿಗೆ ನಿರಂತರ ಕಲಾಸೇವೆ ಮಾಡುವ ಶಕ್ತಿಯನ್ನು ದೇವಿಯು ಕರುಣಿಸಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ ಸದಾಶಿವ ಶೆಟ್ಟಿ ಅವರು ಮಾತನಾಡಿ, ಯಕ್ಷಗಾನ ಪ್ರದರ್ಶನಗಳಿಗೆ ಕಲಾ ರಸಿಕರು, ಕಲಾ ಪ್ರೋತ್ಸಾಹಕರ ಹಾಗೂ ದಾನಿಗಳೆಲ್ಲರ ಒಮ್ಮತದ ಸಹಕಾರವಿರಲಿ ಎಂದರು. ಇನ್ನೋ ರ್ವ ಅತಿಥಿ ನವಿಮುಂಬಯಿ ಹೊಟೇಲ್‌ ಓನರ್ ಅಸೋಸಿಯೇಶನ್‌ ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ ಅವರು ಮಾತನಾಡಿ, ಮುಂಬಯಿಯಲ್ಲಿ ಯಕ್ಷಗಾ ನವನ್ನು ಉಳಿಸಿ-ಬೆಳೆಸುವಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಪಾತ್ರ ಮಹತ್ತರವಾಗಿದೆ. ಈ ಮಹಿಳಾ ತಂಡದ ಪ್ರತಿಭೆಗಳನ್ನು ಕಂಡಾಗ ಸಂತೋಷವಾಗುತ್ತಿದೆ. ಯಕ್ಷಗಾನದಲ್ಲಿ ಮಹಿಳೆಯರ ಪಾತ್ರ ಏನೆಂಬುವುದನ್ನು ಇವರು ತೋರಿಸಿಕೊಟ್ಟಿದ್ದಾರೆ ಎಂದರು.
ಉದ್ಯಮಿ ಕರುಣಾಕರ ಶೆಟ್ಟಿ ನಿಟ್ಟೆ ಇವರು ಮಾತನಾಡಿ, ಈ ಮಕ್ಕಳ ಮತ್ತು ಮಹಿಳಾ ಕಲಾವಿದೆಯರ ಪ್ರತಿಭೆಯು ಇತರರಿಗೆ ಮಾದರಿಯಾಗಿದೆ. ಇಂತಹ ಕಲಾ ಬಳಗಕ್ಕೆ ಕಲಾರಸಿಕರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದು ನುಡಿದರು.ಇದೇ ಸಂದರ್ಭದಲ್ಲಿ ಕಲಾ ಪೋಷಕರಾದ ಆನಂದ ಬಂಗೇರ ಬಜ್ಪೆ, ಮೇಳದ ಪ್ರಬುದ್ಧ ಕಲಾವಿದೆಯರುಗಳಾದ ಮಾಲತಿ ವೆಂಕಟೇಶ್‌ ಮತ್ತು ಸಾಯಿ ಸುಮಾ ಅವರನ್ನು ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರದೊಂದಿಗೆ ಸಮ್ಮಾನಿಸಿ ಗೌರವಿಸಲಾಯಿತು. ಶ್ರೀ ಮೂಕಾಂಬಿಕಾ ಮಂದಿರದ ವತಿಯಿಂದ ಯಕ್ಷಗಾನ ಮಂಡಳಿಯ ನಿರ್ದೇಶಕಿ ಪೂರ್ಣಿಮಾ ಯತೀಶ್‌ ರೈ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರನ್ನು ಮಂಡಳಿಯ ಕಲಾವಿದರು ಗೌರವಿಸಿದರು.ವೇದಿಕೆಯಲ್ಲಿ ಅತಿಥಿಗಳಾಗಿ ಸಿಬಿಡಿ ಹೊಟೇಲ್‌ ಉದ್ಯಮಿ ಸಂಜೀವ ಎನ್‌. ಶೆಟ್ಟಿ, ಉದ್ಯಮಿ ಕಾಪು ಬೈರುಗುತ್ತಿನ ಗುತ್ತಿನಾರ್‌ ರಮೇಶ್‌ ಎಸ್‌. ಶೆಟ್ಟಿ, ಉದ್ಯಮಿ ಚಂದ್ರಶೇಖರ್‌ ಎಸ್‌. ಶೆಟ್ಟಿ, ಹೆಗ್ಗಡೆ ಸೇವಾ ಸಂಘ ಮುಂಬಯಿ ಅಧ್ಯಕ್ಷ ವಿಜಯ ಬಿ. ಹೆಗ್ಡೆ, ನೆರೂಲ್‌ ಉದ್ಯಮಿ ರಮೇಶ್‌ ಶೆಟ್ಟಿ, ಅಜೆಕಾರು ಬಾಲಕೃಷ್ಣ ಶೆಟ್ಟಿ, ಮುಲುಂಡ್‌ ಉದ್ಯಮಿ ಸುರೇಶ್‌ ಶೆಟ್ಟಿ ಕಡಂದಲೆ ಅವರು ಉಪಸ್ಥಿತರಿದ್ದರು. ಅತಿಥಿಗಳನ್ನು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಸ್ವಾಗತಿಸಿದರು. ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀ ಮಹಾಗಣಪತಿ ಮಕ್ಕಳ  ಮತ್ತು ಮಹಿಳಾ ಯಕ್ಷಗಾನ ಮಂಡಳಿಯ ಕಲಾವಿದರಿಂದ ಶ್ರೀ ದೇವಿ ಮಹಾತೆ¾ ಯಕ್ಷಗಾನ ಪ್ರದರ್ಶನಗೊಂಡಿತು. 

ಯಕ್ಷಗಾನ ಪ್ರದರ್ಶನವನ್ನು ನೀಡುತ್ತಿದ್ದ ನನ್ನನ್ನು ಹಾಗೂ ನಮ್ಮ ಬಳಗದವರನ್ನು ಮುಂಬಯಿಗೆ ಪರಿಚಯಿಸಿದ ಕೀರ್ತಿ ಬಾಲಕೃಷ್ಣ ಶೆಟ್ಟಿ ಅಜೆಕಾರು ಅವರಿಗೆ ಸಲ್ಲುತ್ತದೆ. ಅವರಿಗೆ ನಾನು ಸದಾ ಋಣಿಯಾಗಿದ್ದೇನೆ. ಮುಂಬಯಿ ಕಲಾರಸಿಕರು ತೋರುತ್ತಿರುವ ಪ್ರೀತಿ, ಗೌರವ, ಅಭಿಮಾನಕ್ಕೆ ಅಭಾರಿಯಾಗಿದ್ದೇನೆ
ಪೂರ್ಣಿಮಾ ಯತೀಶ್‌ ರೈ 
ನಿರ್ದೇಶಕಿ : ಶ್ರೀ ಮಹಾಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ಮಂಡಳಿ

ಗಂಡು ಕಲೆಯಾದ ಯಕ್ಷಗಾನ ಪ್ರಸ್ತುತ ಕೇವಲ ಪುರುಷರಿಗೆ ಮಾತ್ರವಲ್ಲ ಮಹಿಳೆಯರಿಗೂ ಒಲಿದು ಬಂದಿರುವುದು ಸಂತೋಷದ ಸಂಗತಿಯಾಗಿದೆ. ಈ ಮಂಡಳಿಯಲ್ಲಿ ಅಪ್ರತಿಮ ಪ್ರತಿಭೆಗಳಿದ್ದು, ಇವರಿಗೆ ಮುಂಬಯಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ. ನನ್ನನ್ನು ಗುರುತಿಸಿ ಸಮ್ಮಾನಿಸಿದ ನಿಮಗೆಲ್ಲರಿಗೂ ಕೃತಜ್ಞತೆಗಳು 
 ಆನಂದ ಬಂಗೇರ ಬಜ್ಪೆ ಸಮ್ಮಾನಿತರು

Advertisement

ಈ ಮಹಾನಗರದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅನುವು ಮಾಡಿಕೊಟ್ಟ ಬಾಲಕೃಷ್ಣ ಶೆಟ್ಟಿ ಹಾಗೂ ನಮ್ಮ ಮೇಳದ ನಿರ್ದೇಶಕಿ ಪೂರ್ಣಿಮಾ ಯತೀಶ್‌ ರೈ ಅವರಿಗೆ ನಾನು ಚಿರಋಣಿಯಾಗಿದ್ದೇನೆ. ಮುಂಬಯಿ ಕಲಾರಸಿಕರು, ಕಲಾಬಾಂಧವರಿಗೆ ನನ್ನ ವಂದನೆಗಳು
 – ಸಾಯಿ ಸುಮಾ ಸಮ್ಮಾನಿತೆ

ಚಿತ್ರ-ವರದಿ : ಸುಭಾಶ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next