ಕೊಲಂಬೊ: ಕಳೆದ ಜುಲೈನಲ್ಲಿ ಪ್ರತಿಭಟನಾಕಾರರು ತಮ್ಮ ನಿವಾಸಕ್ಕೆ ಮುತ್ತಿಗೆ ಹಾಕುತ್ತಿದ್ದಂತೆ ದೇಶ ಬಿಟ್ಟು ಪರಾರಿಯಾಗಿದ್ದ ಶ್ರೀಲಂಕಾದ ಆಗಿನ ಅಧ್ಯಕ್ಷ (ಪ್ರಸ್ತುತ ಮಾಜಿ) ಗೋಟಬಯ ರಾಜಪಕ್ಸ ಅವರು ತವರಿಗೆ ಮರಳಿದ್ದಾರೆ.
ದೇಶ ತೊರೆದ ಏಳು ವಾರಗಳ ಬಳಿಕ ಗೋಟಬಯ ರಾಜಪಕ್ಸ ತವರಿಗೆ ಮರಳಿದ್ದಾರೆ. ಕಳೆದ ಜುಲೈನಲ್ಲಿ ಅವರು ಪರಾರಿಯಾಗಿದ್ದರು.
ಶುಕ್ರವಾರ ತಡರಾತ್ರಿ ಬ್ಯಾಂಕಾಂಕ್ ನಿಂದ ಸಿಂಗಾಪುರ ಮಾರ್ಗವಾಗಿ ಕೊಲಂಬೊದ ಭಂಡಾರನಾಯಿಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜಪಕ್ಸ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಅವರ ಪಕ್ಷದ ಶಾಸಕರು ಸ್ವಾಗತಿಸಿದ್ದು, ಬಳಿಕ ಬಿಗಿ ಭದ್ರತೆಯಲ್ಲಿ ತೆರಳಿದರು. ಮಾಜಿ ಅಧ್ಯಕ್ಷರಿಗೆ ನೀಡಲಾಗುವ ಸರ್ಕಾರಿ ಬಂಗಲೆಯಲ್ಲಿ ಅವರು ಉಳಿದುಕೊಂಡಿದ್ದಾರೆ.
ಇದನ್ನೂ ಓದಿ:ಬಿಲ್ ಗೇಟ್ಸ್ ಗೆ ನೋಟಿಸ್ ಜಾರಿ ಮಾಡಿದ ಬಾಂಬೆ ಹೈಕೋರ್ಟ್
ಜುಲೈ 13ರಂದು ಗೋಟಬಯ ರಾಜಪಕ್ಸ, ಅವರ ಪತ್ನಿ ಮತ್ತು ಇಬ್ಬರು ಅಂಗರಕ್ಷಕರು ವಾಯಪಡೆ ವಿಮಾನದಲ್ಲಿ ದೇಶ ತೊರೆದು, ಮಾಲ್ಡೀವ್ಸ್ ತಲುಪಿದ್ದರು. ಅಲ್ಲಿಂದಲೇ ಅವರು ಶ್ರೀಲಂಕಾ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಾದ ಎರಡು ವಾರಗಳ ಬಳಿಕ ಅವರು ಥಾಯ್ಲೆಂಡ್ ಗೆ ತೆರಳಿದ್ದರು.
ಗೋಟಬಯ ರಾಜಪಕ್ಸ ವಿರುದ್ಧ ಯಾವುದೇ ಕೋರ್ಟ್ ಕೇಸ್ ಅಥವಾ ಬಂಧನ ವಾರಂಟ್ ಇಲ್ಲ. ಈ ಹಿಂದೆ ಇದ್ದ ಭ್ರಷ್ಟಾಚಾರ ಪ್ರಕರಣವು 2019ರಲ್ಲಿ ಅವರು ಅಧ್ಯಕ್ಷರಾದಾಗ ವಜಾ ಆಗಿತ್ತು.