Advertisement

ಲಂಕಾ ಕ್ರಿಕೆಟಿಗ ಜಯಸೂರ್ಯರಿಂದ ಸುಪಾರಿ ಅಡಕೆ ಅಕ್ರಮ ಸಾಗಣೆ?

06:15 AM Nov 23, 2018 | Team Udayavani |

ಕೊಲಂಬೊ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆಯ ಮೋಸದಾಟದ ತನಿಖೆಗೆ ಸಹಕರಿಸುತ್ತಿಲ್ಲವೆಂಬ ಟೀಕೆಗೊಳಗಾಗಿದ್ದ ಶ್ರೀಲಂಕಾದ ಕ್ರಿಕೆಟ್‌ ದಂತಕಥೆ ಸನತ್‌ ಜಯಸೂರ್ಯ ಈಗ ಇನ್ನೊಂದು ಬಿಕ್ಕಟ್ಟಿಗೆ ಸಿಲುಕಿದ್ದಾರೆ. 

Advertisement

ಇತ್ತೀಚೆಗೆ ಅವರು ಭಾರತಕ್ಕೆ ಹಾಳಾದ ಸುಪಾರಿ ಅಡಕೆಯನ್ನು ಅಕ್ರಮವಾಗಿ ಸಾಗಿಸಿದ್ದಾರೆಂಬ ಎಂಬ ಆರೋಪ ಕೇಳಿಬಂದಿದೆ. ಭಾರತದ ಕಂದಾಯ ಇಲಾಖೆ ನಾಗ್ಪುರದಲ್ಲಿ ನಡೆಸಿದ ದಾಳಿ ವೇಳೆ, ಲಕ್ಷಾಂತರ ರೂ. ಮೌಲ್ಯದ ಸುಪಾರಿ ಅಡಕೆ ನಾಗ್ಪುರದಲ್ಲಿ ಪತ್ತೆಯಾಗಿದೆ. ಇದರಲ್ಲಿ ಜಯಸೂರ್ಯ ಹೆಸರು ಬೆಳಕಿಗೆ ಬಂದಿದೆ. ಆದ್ದರಿಂದ ಕಂದಾಯ ಗುಪ್ತಚರ ಅಧಿಕಾರಿಗಳು ಜಯಸೂರ್ಯಗೆ ಮುಂಬೈಗೆ ಬಂದು ವಿಚಾರಣೆ ಎದುರಿಸಿ ಎಂದು ತಿಳಿಸಿದ್ದಾರೆ.

ಡಿ.2ರೊಳಗೆ ಇನ್ನಿಬ್ಬರು ಕ್ರಿಕೆಟಿಗರಿಗೆ ಸಮನ್ಸ್‌ ನೀಡುವ ಸಾಧ್ಯತೆಯಿದೆ. ಈ ಸುಪಾರಿ ಅಡಕೆಯನ್ನು ಇಂಡೋನೇಷ್ಯಾದಿಂದ ಶ್ರೀಲಂಕಾಕ್ಕೆ ತರಿಸಿ ಅಲ್ಲಿಂದ ಭಾರತಕ್ಕೆ ಕಳಿಸಿದ್ದಾರೆ. ಕ್ರಿಕೆಟಿಗರು ತಮ್ಮ ಪ್ರಭಾವ ಬಳಸಿ, ಅಕ್ರಮ ಕಂಪನಿ ಶುರು ಮಾಡಿ ಭಾರತಕ್ಕೆ ಅಡಕ್ಕೆ ರಫ್ತು ಮಾಡಲು ಅನುಮತಿ ಪಡೆದಿದ್ದಾರೆನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next