ಕೊಲಂಬೊ: ಪ್ರಸ್ತುತ ಇಡೀ ಶ್ರೀಲಂಕಾ ದೇಶವೇ ಅತ್ಯಂತ ಬಡತನದಲ್ಲಿದೆ. ಇಂತಹ ಹೊತ್ತಿನಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮಾತ್ರ ಒಂದು ಸಂತಸದ ಸುದ್ದಿ ಹೇಳಿದೆ. ಆ ಕ್ರಿಕೆಟ್ ಮಂಡಳಿ 2022ರಲ್ಲಿ 630 ಕೋಟಿ ರೂ. ಆದಾಯ ಗಳಿಸಿದೆ. ಇದು ಅದರ ಚರಿತ್ರೆಯಲ್ಲೇ ಗರಿಷ್ಠ ನಿವ್ವಳ ಆದಾಯ!
ವಸ್ತುಸ್ಥಿತಿಯಲ್ಲಿ ಕಳೆದವರ್ಷ ಏಷ್ಯಾಕಪ್ ನಂತರ ಶ್ರೀಲಂಕಾ ತಂಡ ಕ್ರಿಕೆಟ್‌ನಲ್ಲಿ ಸುಧಾರಿಸಿಕೊಳ್ಳುತ್ತಿದೆ. ಅದು ಪಾಕನ್ನು ಸೋಲಿಸಿ ಏಷ್ಯಾಕಪ್ ಟಿ20ಯನ್ನು ಗೆದ್ದುಕೊಂಡಿದೆ. ಅದಾದ ನಂತರ ಸ್ವಲ್ಪಸ್ವಲ್ಪವೇ ಪರಿಸ್ಥಿತಿ ಸುಧಾರಿಸುತ್ತಿದೆ. ಅದಕ್ಕಿಂತ ಮುನ್ನ ತಂಡದ ಪ್ರದರ್ಶನ ಪಾತಾಳಕ್ಕಿಳಿದಿತ್ತು.
ಇದನ್ನೂ ಓದಿ:ವನಿತಾ ಪ್ರೀಮಿಯರ್ ಲೀಗ್ ಗೆ ದಿನಗಣನೆ; ನೂತನ ಜೆರ್ಸಿ ಬಿಡುಗಡೆ ಮಾಡಿದ ಮುಂಬೈ ಇಂಡಿಯನ್ಸ್
ಬರೀ ಅಷ್ಟೇ ಅಲ್ಲ ಮಂಡಳಿ ವಿರುದ್ಧವೇ ಆಟಗಾರರು ದಂಗೆದ್ದಿದ್ದರು. ವೇತನ ಸಾಲುತ್ತಿಲ್ಲ ಎಂದು ಹಲವು ಪ್ರಮುಖ ಆಟಗಾರರು ಕ್ರಿಕೆಟನ್ನು ತ್ಯಜಿಸಿದ್ದರು. ಶ್ರೀಲಂಕಾ ಕ್ರಿಕೆಟ್ ಸುಧಾರಿ ಸಲು ಸಾಧ್ಯವೇ ಇಲ್ಲ ಎನ್ನುವ ಹಂತದಲ್ಲಿ ತಂಡದ ಪ್ರದರ್ಶನವೂ ವೃದ್ಧಿಯಾಗಿದೆ. ಲಾಭವೂ ಹೆಚ್ಚಿದೆ. ಈ ಆದಾಯ ನಾಲ್ಕು ಮೂಲಗಳಿಂದ ಹರಿದುಬಂದಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಂದ, ದೇಶೀಯ ಕ್ರಿಕೆಟ್‌ನಿಂದ, ಪ್ರಾಯೋಜಕತ್ವ ಒಪ್ಪಂದಗಳಿಂದ, ಐಸಿಸಿ ತನ್ನ ಸದಸ್ಯ ರಾಷ್ಟ್ರಗಳಿಗೆ ನೀಡುವ ಮೊತ್ತದಿಂದ ಲಂಕಾ ಮಂಡಳಿ ಮೇಲಿನ ಮೊತ್ತವನ್ನು ಗಳಿಸಿದೆ.