ಗಾಲೆ: ಶ್ರೀಲಂಕಾ ಎದುರಿನ ಗಾಲೆ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಪಾಕಿಸ್ಥಾನದ ಬ್ಯಾಟರ್ ಫವಾದ್ ಆಲಂ ವಿಶಿಷ್ಟ ದಾಖಲೆಯೊಂದನ್ನು ಬರೆದಿದ್ದಾರೆ.
ಟೆಸ್ಟ್ ಪದಾರ್ಪಣೆಗೈದು 13 ವರ್ಷಗಳ ಬಳಿಕ ಸಾವಿರ ರನ್ ಪೂರ್ತಿಗೊಳಿಸಿದ್ದಾರೆ. ಇದು ಸಾವಿರ ರನ್ ಪೂರೈಸಲು ತೆಗೆದುಕೊಂಡ ಅತೀ ಹೆಚ್ಚಿನ ಅವಧಿಯಾಗಿದೆ.
ಆಲಂ 2009ರಲ್ಲಿ ಶ್ರೀಲಂಕಾ ಪ್ರವಾಸದ ವೇಳೆ ಟೆಸ್ಟ್ ಪದಾರ್ಪಣೆ ಮಾಡಿದ್ದರು. ಈ ಅವಧಿಯಲ್ಲಿ ಆಡಿದ್ದು 3 ಟೆಸ್ಟ್ ಮಾತ್ರ. 4ನೇ ಟೆಸ್ಟ್ ಆಡಲು ಬರೋಬ್ಬರಿ 11 ವರ್ಷ ಕಾಯಬೇಕಾಯಿತು. ಅದು 2020ರ ಇಂಗ್ಲೆಂಡ್ ಪ್ರವಾಸದಲ್ಲಿ ಆಡಲಾದ ಸರಣಿಯಾಗಿತ್ತು. ಅನಂತರ ತಂಡದ ಖಾಯಂ ಸದಸ್ಯನಾಗಿ ಕಾಣಿಸಿಕೊಂಡರು.
ಪಾಕ್ ಕುಸಿತ
ದ್ವಿತೀಯ ದಿನದ ಆಟದಲ್ಲಿ ಪಾಕಿಸ್ಥಾನ ಬ್ಯಾಟಿಂಗ್ ಕುಸಿತ ಅನುಭವಿಸಿದೆ. ಶ್ರೀಲಂಕಾದ 378 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ 7 ವಿಕೆಟಿಗೆ 191 ರನ್ ಗಳಿಸಿದೆ.