ಕ್ರೈಸ್ಟ್‌ಚರ್ಚ್: ನ್ಯೂಜಲ್ಯಾಂಡ್ ತಂಡದೆದುರಿನ ದ್ವಿತೀಯ ಟೆಸ್ಟ್‌ನಲ್ಲಿ ಶ್ರೀಲಂಕಾ ಮೊದಲ ದಿನವೇ 88 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಈ ಮೊದಲು ನ್ಯೂಜಿಲ್ಯಾಂಡ್ 178 ರನ್ನಿಗೆ ಆಲೌಟಾಗಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್ ತಂಡವು ಆರಂಭದಲ್ಲಿಯೇ ಕುಸಿಯಿತು. ಸುರಂಗ ಲಕ್ಮಲ್ ಮತ್ತು ಕುಮಾರ ಅವರ ಬಿಗು ದಾಳಿಯಿಂದ ಶ್ರೀಲಂಕಾ ಮೇಲುಗೈ ಸಾಧಿಸಿತು. 64 ರನ್ನಿಗೆ 6 ವಿಕೆಟ್ ಕಳೆದುಕೊಂಡು ಆತಿಥೇಯ ತಂಡ ಒದ್ದಾಡುತ್ತಿತ್ತು. ಈ ಹಂತದಲ್ಲಿ ಬಿಜೆ ವಾಟಿÉಂಗ್ ಅವರನ್ನು ಸೇರಿಕೊಂಡ ಟಿಮ್ ಸೌಥಿ ತಂಡವನ್ನು ಆಧರಿಸುವ ಪ್ರಯತ್ನಕ್ಕೆ ಮುಂದಾದರು.
ವಾಟಿÉಂಗ್ ಮತ್ತು ಸೌಥಿ 7ನೇ ವಿಕೆಟಿಗೆ 108 ರನ್ನುಗಳ ಜತೆಯಾಟ ನಡೆಸಿದ್ದರಿಂದ ನ್ಯೂಜಿಲ್ಯಾಂಡ್ ಸಾಧಾರಣ ಮೊತ್ತ ಪೇರಿಸುವಂತಾಯಿತು. ಏಕದಿನ ಶೈಲಿಯಲ್ಲಿ ಆಡಿದ ಸೌಥಿ 65 ಎಸೆತಗಳಿಂದ 68 ರನ್ ಹೊಡೆದರು. 6 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದ್ದರು. ಸೌಥಿ ಔಟಾದ ಬಳಿಕ ನ್ಯೂಜಿಲ್ಯಾಂಡ್ ಮತ್ತೆ ಕುಸಿಯಿತಲ್ಲದೇ 178 ರನ್ನಿಗೆ ಆಲೌಟಾಯಿತು. ಲಕ್ಮಲ್ 54 ರನ್ನಿಗೆ 5 ವಿಕೆಟ್ ಕಿತ್ತರೆ ಕುಮಾರ 49 ರನ್ನಿಗೆ 3 ವಿಕೆಟ್ ಪಡೆದರು.
ಇದಕ್ಕುತ್ತರವಾಗಿ ಶ್ರೀಲಂಕಾ ಕೂಡ ರನ್ ಗಳಿಸಲು ಒದ್ದಾಡುತ್ತಿದೆ. ಬೌಲಿಂಗ್‌ನಲ್ಲೂ ಮಿಂಚಿದ ಸೌಥಿ ಈಗಾಗಲೇ 3 ವಿಕೆಟ್ ಹಾರಿಸಿ ಲಂಕೆಗೆ ಪ್ರಬಲ ಹೊಡೆತ ನೀಡಿದ್ದಾರೆ. ದಿನದಾಟದ ಅಂತ್ಯಕ್ಕೆ 88 ರನ್ನಿಗೆ 4 ವಿಕೆಟ್ ಕಳೆದುಕೊಂಡ ಶ್ರೀಲಂಕಾ ಸಂಕಷ್ಟದಲ್ಲಿದೆ.
ಸಂಕ್ಷಿಪ್ತ ಸ್ಕೋರು: ನ್ಯೂಜಿಲ್ಯಾಂಡ್ 178 (ವಾಟಿÉಂಗ್ 46, ಟಿಮ್ ಸೌಥಿ 68, ಲಕ್ಮಲ್ 54ಕ್ಕೆ 5, ಕುಮಾರ 49ಕ್ಕೆ 3); ಶ್ರೀಲಂಕಾ 88ಕ್ಕೆ 4 (ಟಿಮ್ ಸೌಥಿ 29ಕ್ಕೆ 3).