Advertisement

T20 ವೈಟ್‌ವಾಶ್‌ ಭೀತಿಯಲ್ಲಿ ಶ್ರೀಲಂಕಾ: ಹ್ಯಾಟ್ರಿಕ್‌ ಸಾಧಿಸುವ ಹುರುಪಿನಲ್ಲಿ ಭಾರತ ತಂಡ

11:08 PM Jul 29, 2024 | Team Udayavani |

ಪಲ್ಲೆಕೆಲೆ: ನೂತನ ಕೋಚ್‌ ಗೌತಮ್‌ ಗಂಭೀರ್‌ ಹಾಗೂ ನೂತನ ನಾಯಕ ಸೂರ್ಯಕುಮಾರ್‌ ಯಾದವ್‌ ಅವರ ಜುಗಲ್ಬಂದಿ ಶ್ರೀಲಂಕಾದಲ್ಲಿ ಚೆನ್ನಾಗಿಯೇ ವಕೌìಟ್‌ ಆದಂತಿದೆ. ಮೊದಲೆರಡೂ ಟಿ20 ಪಂದ್ಯಗಳಲ್ಲಿ ಒಲಿದ ಗೆಲುವೇ ಇದಕ್ಕೆ ಸಾಕ್ಷಿ. ಮಂಗಳವಾರ 3ನೇ ಹಾಗೂ ಅಂತಿಮ ಮುಖಾಮುಖಿ ಏರ್ಪಡಲಿದ್ದು, ಇದನ್ನೂ ಗೆದ್ದು ವೈಟ್‌ವಾಶ್‌ ಸಾಧಿಸುವುದು ಭಾರತದ ಗುರಿ.

Advertisement

ಶ್ರೀಲಂಕಾ ವನಿತೆಯರು ಚೊಚ್ಚಲ ಏಷ್ಯಾ ಕಪ್‌ ಗೆದ್ದು ಸಂಭ್ರಮಾಚ ರಣೆ ನಡೆಸುತ್ತಿದ್ದ ವೇಳೆಯಲ್ಲೇ ಅಲ್ಲಿನ ಪುರುಷರ ತಂಡ ಟಿ20 ಸರಣಿ ಕಳೆದುಕೊಂಡ ಸಂಕಟ ಅನುಭವಿ ಸುತ್ತಿತ್ತು. ಇನ್ನೀಗ ಕ್ಲೀನ್‌ಸಿÌàಪ್‌ ಸಂಕಟ ದಿಂದ ಪಾರಾಗಿ ಅಷ್ಟರ ಮಟ್ಟಿಗೆ ಪ್ರತಿಷ್ಠೆ ಉಳಿಸಿಕೊಳ್ಳುವುದೊಂದೇ ಚರಿತ ಅಸಲಂಕ ಪಡೆಯ ಮುಂದಿನ ಮಾರ್ಗವಾಗಿದೆ.

ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ರವೀಂದ್ರ ಜಡೇಜ ಅವರ ನಿವೃತ್ತಿ ಬಳಿಕ ನೂತನ ಸ್ವರೂಪದ ತಂಡವನ್ನು ಕಟ್ಟಿಕೊಂಡು ದ್ವೀಪರಾಷ್ಟ್ರಕ್ಕೆ ಬಂದಿಳಿದ ಟೀಮ್‌ ಇಂಡಿಯಾ ಈವರೆಗೆ ಯಶಸ್ಸಿನ ಪಥದಲ್ಲೇ ಸಾಗಿದೆ. ಮೊದಲ ಪಂದ್ಯವನ್ನು 43 ರನ್ನುಗಳಿಂದ, ರವಿವಾರದ ಮಳೆಪೀಡಿತ ದ್ವಿತೀಯ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದ ಸಂಭ್ರಮ ಭಾರತದ್ದಾಗಿದೆ. ಇದೇ ಲಯದಲ್ಲಿ ಸಾಗಿದರೆ ಮಂಗಳವಾರವೂ ಗೆಲುವಿನ ಬಾವುಟ ಹಾರಿಸುವುದು ಅಸಾಧ್ಯವೇನಲ್ಲ.

ವಿಶ್ವ ಚಾಂಪಿಯನ್‌ ಖ್ಯಾತಿಯ ಭಾರತ ಎಲ್ಲ ವಿಭಾಗಗಳಲ್ಲೂ ಬಲಾಡ್ಯವಾಗಿ ಗೋಚರಿಸಿದೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಅಮೋಘ ಮಟ್ಟದಲ್ಲಿದೆ. ಮೊದಲ ಪಂದ್ಯದಲ್ಲಿ 7ಕ್ಕೆ 213 ರನ್‌ ಪೇರಿಸಿದ ಬಳಿಕ, ಮುನ್ನುಗ್ಗುತಿದ್ದ ಲಂಕೆಗೆ ಬಲವಾದ ಕಡಿವಾಣ ಹಾಕಿತ್ತು. ಒಂದು ವಿಕೆಟಿಗೆ 140 ರನ್‌ ಗಳಿಸಿ ಗೆಲುವಿನ ಸಾಧ್ಯತೆಯನ್ನು ತೆರೆದಿರಿಸಿದ್ದ ಶ್ರೀಲಂಕಾ 170ಕ್ಕೆ ಆಲೌಟ್‌ ಆಗಿತ್ತು.

ದ್ವಿತೀಯ ಪಂದ್ಯದಲ್ಲೂ ಲಂಕಾ ಬ್ಯಾಟಿಂಗ್‌ ಉತ್ತಮ ಸ್ಥಿತಿಯಲ್ಲಿತ್ತು. ಒಂದು ಹಂತದಲ್ಲಿ 2ಕ್ಕೆ 130 ರನ್‌ ಬಾರಿಸಿ ಓಟ ಬೆಳೆಸಿತ್ತು. ಅಂತಿಮವಾಗಿ ಗಳಿಸಿದ್ದು 9ಕ್ಕೆ 161 ರನ್‌ ಮಾತ್ರ. ಈ ಎರಡೂ ಸಂದರ್ಭಗಳಲ್ಲಿ ಆತಿಥೇಯರ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದ ಭಾರತದ ಬೌಲರ್‌ಗಳಿಗೆ ಹ್ಯಾಟ್ಸ್‌ ಆಫ್ ಹೇಳಲೇಬೇಕು. ಅರ್ಷದೀಪ್‌, ಅಕ್ಷರ್‌, ಬಿಷ್ಣೋಯಿ, ಪಾಂಡ್ಯ, ಪರಾಗ್‌ ಈ ಯಶಸ್ಸಿನ ಪಾಲುದಾರರು.

Advertisement

ಭಾರತದ ಬ್ಯಾಟಿಂಗ್‌ ಸರದಿ ಬಲಿಷ್ಠವಾಗಿ ಗೋಚರಿಸಿದೆ. ನಾಯಕ ಸೂರ್ಯ ಒತ್ತಡರಹಿತವಾಗಿ ಬ್ಯಾಟ್‌ ಬೀಸುತ್ತಿರುವುದು ಪ್ಲಸ್‌ ಪಾಯಿಂಟ್‌. ಕ್ರಮವಾಗಿ 58 ಹಾಗೂ 26 ರನ್‌ ಹೊಡೆದಿದ್ದಾರೆ. ಜೈಸ್ವಾಲ್‌, ಗಿಲ್‌, ಪಂತ್‌, ಪಾಂಡ್ಯ ಕೂಡ ಮುನ್ನುಗ್ಗಿ ಬಾರಿಸುತ್ತಿದ್ದಾರೆ.

ಕುತ್ತಿಗೆ ನೋವಿಗೊಳಗಾಗಿದ್ದ ಶುಭಮನ್‌ ಗಿಲ್‌ ಬದಲು ಅವಕಾಶ ಪಡೆದ ಸಂಜು ಸ್ಯಾಮ್ಸನ್‌ ರವಿವಾರದ ಮಳೆ ಪಂದ್ಯದಲ್ಲಿ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದ್ದೊಂದು ಹಿನ್ನಡೆ. ಬ್ಯಾಟಿಂಗ್‌ಗಾಗಿ ಸಂಜು ಒಂದು ಗಂಟೆಗೂ ಅಧಿಕ ಸಮಯ ಕಾದ ಬಳಿಕ, ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್‌ ಕಳೆದುಕೊಂಡಿದ್ದರು.

ಸಾಂಘಿ  ಹೋರಾಟ ಅಗತ್ಯ
ಶ್ರೀಲಂಕಾದ ಬೌಲಿಂಗ್‌ ನಿಜಕ್ಕೂ ವೈವಿಧ್ಯಮಯ. ತೀಕ್ಷಣ, ಪತಿರಣ, ಹಸರಂಗ, ಶಣಕ ವೆರೈಟಿ ತಂದಿತ್ತಿದ್ದಾರೆ. ಆದರೆ ಭಾರತದೆದುರು ಇವರ ಎಸೆತಗಳು ದಿಕ್ಕು ತಪ್ಪಿರುವುದು ವಿಪರ್ಯಾಸ! ಬ್ಯಾಟಿಂಗ್‌ನಲ್ಲಿ ಪಥುಮ್‌ ನಿಸ್ಸಂಕ (111 ರನ್‌) ಮತ್ತು ಕುಸಲ್‌ ಪೆರೆರ (73) ಮಾತ್ರವೇ ಸಿಡಿದಿದ್ದಾರೆ. ತಂಡ ಸಾಂಘಿಕ ಹೋರಾಟ ನೀಡುವುದು ಅತ್ಯಗತ್ಯ.

ಅಭ್ಯಾಸ ಆರಂಭಿಸಿದ ರೋಹಿತ್‌, ಕೊಹ್ಲಿ
ಕೊಲಂಬೊ: ಶ್ರೀಲಂಕಾದ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಗಾಗಿ ನಾಯಕ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಮೊದಲಾದವರು ಸೋಮವಾರ ಕೊಲಂಬೊದಲ್ಲಿ ಅಭ್ಯಾಸ ಆರಂಭಿಸಿದರು. 3 ಪಂದ್ಯಗಳ ಸರಣಿ ಆ. 2ರಂದು ಆರಂಭವಾಗಲಿದೆ.

ಭಾರತದ ಏಕದಿನ ತಂಡದ ಸದಸ್ಯರು ರವಿವಾರ ಕೊಲಂಬೊಗೆ ಆಗಮಿಸಿ ದ್ದರು. ಕುಲದೀಪ್‌ ಯಾದವ್‌, ಹರ್ಷಿತ್‌ ರಾಣಾ, ಶ್ರೇಯಸ್‌ ಅಯ್ಯರ್‌ ಕೂಡ ಅಭ್ಯಾಸದಲ್ಲಿ ಕಾಣಿಸಿಕೊಂಡರು. ಸರಣಿಯ ಮೂರೂ ಪಂದ್ಯಗಳು ಇಲ್ಲಿನ “ಆರ್‌. ಪ್ರೇಮದಾಸ ಸ್ಟೇಡಿಯಂ’ನಲ್ಲಿ ನಡೆಯಲಿವೆ (ಆ. 2, 4 ಮತ್ತು 7).

ಆರಂಭ: ರಾತ್ರಿ 7.00  ಪ್ರಸಾರ: ಸೋನಿ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next