Advertisement

1st Test Match: ಬಾಂಗ್ಲಾದೇಶ ವಿರುದ್ಧ ಲಂಕೆಗೆ 328 ರನ್‌ ಗೆಲುವು

12:03 AM Mar 26, 2024 | Team Udayavani |

ಬಾಂಗ್ಲಾದೇಶ: ಆತಿಥೇಯ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯವನ್ನು ಶ್ರೀಲಂಕಾ 328 ರನ್ನುಗಳ ಭಾರೀ ಅಂತರದಿಂದ ಜಯಿಸಿದೆ. 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Advertisement

ಗೆಲುವಿಗೆ 511 ರನ್ನುಗಳ ಕಠಿನ ಗುರಿ ಪಡೆದಿದ್ದ ಬಾಂಗ್ಲಾದೇಶ, 3ನೇ ದಿನದಾಟದ ಅಂತ್ಯಕ್ಕೆ 47ಕ್ಕೆ 5 ವಿಕೆಟ್‌ ಕಳೆದುಕೊಂಡು ದೊಡ್ಡ ಸೋಲಿನತ್ತ ಮುಖ ಮಾಡಿತ್ತು. ಸೋಮವಾರ ಬ್ಯಾಟಿಂಗ್‌ ಮುಂದುವರಿಸಿ 182ಕ್ಕೆ ಆಲೌಟ್‌ ಆಯಿತು. ಕಸುನ್‌ ರಜಿತ 5 ವಿಕೆಟ್‌ ಉಡಾಯಿಸಿದರು.

ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಲಂಕಾ ನಾಯಕ ಧನಂಜಯ ಡಿಸಿಲ್ವ (102 ಮತ್ತು 108 ರನ್‌) ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-280 ಮತ್ತು 418. ಬಾಂಗ್ಲಾದೇಶ-188 ಮತ್ತು 182.

Advertisement

Udayavani is now on Telegram. Click here to join our channel and stay updated with the latest news.

Next