ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ಮಂಡಳಿ ಮತ್ತು ಆಟಗಾರರ ನಡುವಿನ ವೇತನ ಬಿಕ್ಕಟ್ಟು ಮುಂದುವರಿದಿದೆ. ಆದರೆ ಕೆಲವು ಮಾತುಕತೆಗಳ ನಂತರ ವಾರ್ಷಿಕ ವೇತನ ಗುತ್ತಿಗೆ ಇಲ್ಲದೆಯೇ ಇಂಗ್ಲೆಂಡ್ ಸರಣಿಗೆ ತೆರಳಲು ಲಂಕಾ ಆಟಗಾರರು ಒಪ್ಪಿಗೆ ಸೂಚಿಸಿದ್ದಾರೆ.
ಕಳೆದ ತಿಂಗಳು ಲಂಕಾ ಕ್ರಿಕೆಟ್ ಮಂಡಳಿ ಆಟಗಾರರ ವಾರ್ಷಿಕ ಗುತ್ತಿಗೆ ಪ್ರಕಟಿಸಿತ್ತು. ಆದರೆ ಆ್ಯಂಜಲೋ ಮ್ಯಾಥ್ಯೂಸ್, ದಿನೇಶ್ ಚಾಂಡಿಮಾಲ್ ಸೇರಿದಂತೆ ಹಲವು ಹಿರಿಯ ಆಟಗಾರರು ಇದಕ್ಕೆ ಸಹಿ ಹಾಕಲು ನಿರಾಕರಿಸಿದ್ದರು.
ಕಾಂಟ್ರಾಕ್ಸ್ ಗೆ ಸಹಿ ಹಾಕದೆ ಆಟಗಾರರು ಇಂಗ್ಲೆಂಡ್ ಸರಣಿ ಆಡಲಿದ್ದಾರೆ. ಆಟಗಾರರ ವೇತನ ವಿಚಾರ ಮುಂದುವರಿಯಲಿದೆ. ಆದರೆ ದೇಶವನ್ನು ಪ್ರತಿನಿಧಿಸುವುದು ಮೊದಲ ಆದ್ಯತೆ. ಹಾಗಾಗಿ ಇಂಗ್ಲೆಂಡ್ ಸರಣಿಯಲ್ಲಿ ಆಡಲಿದ್ದಾರೆ ಎಂದು ಆಟಗಾರರ ಪರ ವಕೀಲ ನಿಶಾನ್ ಪ್ರೇಮತಿರತ್ನೆ ಹೇಳಿದ್ದಾರೆ.
ಇದನ್ನೂ ಓದಿ:ಇಂಗ್ಲೆಂಡ್ ನ ಮತ್ತೋರ್ವ ಆಟಗಾರನ ಮೇಲೆ ರೇಸಿಸ್ಟ್ ಟ್ವೀಟ್ ತೂಗುಗತ್ತಿ! ಇಸಿಬಿಯಿಂದ ತನಿಖೆ
ಜೂನ್ 23ರಿಂದ ಇಂಗ್ಲೆಂಡ್ – ಲಂಕಾ ಸರಣಿ ಆರಂಭವಾಗಲಿದೆ. ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳು ನಡೆಯಲಿದೆ. ಮಂಗಳವಾರ ಲಂಕಾ ಆಟಗಾರರು ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದ್ದಾರೆ.