Advertisement
ಶಾಸಕ ಎ.ಮಂಜುನಾಥ್ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ, ರೆವಿನ್ಯೂ ಅಧಿಕಾರಿ ವೆಂಕಟೇಶ್‌ಹಾಗೂ ಇತರರು ರಥೋತ್ಸವಕ್ಕೆ ಶ್ರದ್ಧಾಭಕ್ತಿಯಿಂದಪೂಜೆ ಸಲ್ಲಿಸಿ ಚಾಲನೆ ನೀಡಿ ಭಕ್ತ ಸಾಗರರೊಡಗೂಡಿ ರಥ ಎಳೆದರು.ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಎಸೆದು ತಮ್ಮ ಭಕ್ತಿ ಇಚ್ಚಾನುಸಾರ ಸಮರ್ಪಿಸಿದರು.
Related Articles
Advertisement
ಜಾತ್ರಾ ಮಹೋತ್ಸವ ಎಂದ ಮೇಲೆ ಸಹಸ್ರಾರು ಭಕ್ತರುಭಾಗವಹಿಸುವುದು ಸಾಮಾನ್ಯ ವಾಗಿರುತ್ತದೆ. ಪೊಲೀಸರು ರಸ್ತೆ ಬದಿ ಇದ್ದ ವಾಹನ ಗಳನ್ನು ತೆಗೆಸಿ ಸುಗಮಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಪ್ರಾಣಿ, ಪಕ್ಷಿಗಳಿಲ್ಲದೇ ಬಣಗುಡುತ್ತಿರುವ ವನದಾಮ :
ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಕೆಂಪೇಗೌಡ ವನದಾಮದಲ್ಲಿ ಯಾವುದೇ ಪ್ರಾಣಿ, ಪಕ್ಷಿಗಳಿಲ್ಲದ ವನದಾಮ ಬಣಗುಡುತ್ತಿತ್ತು. ಕೆಂಪೇಗೌಡ ವನದಾಮಕ್ಕೆ ನೂರಾರು ಭಕ್ತರು ತಮ್ಮ ಮಕ್ಕಳೊಂದಿಗೆ ತೆರಳಿದ್ದವರಿಗೆ ನಿರಾಸೆ ಉಂಟಾಗಿತ್ತು. ಸುಂದರವಾದ ಪ್ರಕೃತಿ ದತ್ತ ಸಾವನದುರ್ಗ ಪ್ರವಾಸಿಗರ ಸ್ವರ್ಗಾ ಎಂದೇ ಕರೆಯಲಾಗಿದೆ.ಇಲ್ಲಿನ ಕೆಂಪೇಗೌಡ ವನದಾಮದಲ್ಲಿ ಯಾವುದೇ ಪ್ರಾಣಿ ಪಕ್ಷಿಗಳು ಇಲ್ಲಿದರುವುದು ನಿಜಕ್ಕೂ ವಿಪರ್ಯಾಸ.ಸಂಬಂಧಪಟ್ಟ ಪ್ರವಾಸೋದ್ಯಮ ಸಚಿವರು ಇತ್ತ ಗಮನಹರಿಸಿ ಪ್ರವಾಸಿಗರ ಅನುಕೂಲಕ್ಕಾಗಿ ಮೂಲ ಸೌಕರ್ಯಗಳನ್ನು ಒದಗಿಸಬೇಕು. ವನದಾಮ ಅಭಿವೃದ್ಧಿ ಪಡಿಸುವಂತೆ ನಾಗರಿಕರು ಆಗ್ರಹಿಸಿದರು.