Advertisement

ಶ್ರೀಕೃಷ್ಣಮಠ: ದ್ವಿತೀಯ ಹಂತದ ದರ್ಶನ ಆರಂಭ

10:03 PM Nov 04, 2020 | mahesh |

ಉಡುಪಿ: ಶ್ರೀಕೃಷ್ಣಮಠದಲ್ಲಿ ವಿಸ್ತರಿತ ಸಮಯದಲ್ಲಿ ಎರಡನೆಯ ಹಂತವಾಗಿ ಭಕ್ತರಿಗೆ ಪ್ರವೇಶವನ್ನು ನ. 4ರಿಂದ ಕಲ್ಪಿಸಲಾಗಿದೆ.

Advertisement

ಎರಡನೆಯ ಹಂತದ ಶ್ರೀಕೃಷ್ಣ ದರ್ಶನ ಬೆಳಗ್ಗೆ 8.30ರಿಂದ 10 ಗಂಟೆ ವರೆಗೆ ಮತ್ತು ಅಪರಾಹ್ನ 2ರಿಂದ ಸಂಜೆ 6 ಗಂಟೆಯವರೆಗೆ ನಡೆಯಿತು.
ಈ ದರ್ಶನದ ವ್ಯವಸ್ಥೆ ಹಿಂದಿನ ದಿನ ರಾತ್ರಿ ಬಂದು ಉಳಿದುಕೊಳ್ಳುವ ಭಕ್ತರಿಗೆ ಅನುಕೂಲವಾಗಲಿದೆ. ಬೆಳಗ್ಗೆ ದರ್ಶನ ವನ್ನು ಮುಗಿಸಿ ಅವರು ತಮ್ಮ ಪ್ರಯಾಣ ವನ್ನು ಮುಂದುವರಿಸಬಹುದು. ಇಲ್ಲ ವಾದರೆ ಅಪರಾಹ್ನ 2 ಗಂಟೆವರೆಗೆ ಕಾಯ ಬೇಕಾಗುತ್ತಿತ್ತು. ಈಗ ಮಧ್ಯಾಹ್ನದವರೆಗೆ ಕಾಯುವ ಅವಶ್ಯಕತೆ ಇಲ್ಲ. ಸಂಜೆ ಆರು ಗಂಟೆಯೊಳಗೆ ಬಂದ ಭಕ್ತರು ದರ್ಶನ ಮುಗಿಸಿ ಮುಂದಿನ ಊರಿಗೆ ಪ್ರಯಾಣವನ್ನು ಮಾಡಬಹುದು.

2,000 ಪಾಸ್‌ಗೆ ಕೋರಿಕೆ
ಶ್ರೀಮಠದಿಂದ ಹೊರತರಲಾದ ಪಾಸ್‌ ಹೊಂದಿದ ಸ್ಥಳೀಯ ಭಕ್ತರಿಗೆ ಅನುಕೂಲ ವಾಗಲು ರಥಬೀದಿಯ ಮಹಾದ್ವಾರದ ಬಳಿಯಿಂದ ಬಿಡಲಾಗುತ್ತಿದೆ. ಈ ಪಾಸ್‌ ತೋರಿಸಿದರೆ ಎದುರಿನಿಂದಲೇ ಪ್ರವೇಶಾವಕಾಶ ಕಲ್ಪಿಸಲಾಗುತ್ತಿದೆ. ಇದುವರೆಗೆ ಸುಮಾರು 2,000 ಭಕ್ತರು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 1,600 ಪಾಸುಗಳು ಮುದ್ರಣವಾಗಿ ಬಂದಿದ್ದು ಸುಮಾರು 1,000 ಪಾಸುಗಳನ್ನು ವಿತರಿಸ ಲಾಗಿದೆ. ಉಳಿದ 600 ಪಾಸುಗಳ ವಿತರಣೆ ನಡೆಯುತ್ತಿದೆ. ಒಂದು ವೇಳೆ ಸ್ಥಳೀಯರು ಪಾಸು ಹೊಂದಿಲ್ಲದಿದ್ದರೆ ಯಾತ್ರಾರ್ಥಿಗಳು ಪ್ರವೇಶಿಸುವ ರಾಜಾಂಗಣದ ಬಳಿಯ ಮಾರ್ಗದಿಂದ ತೆರಳಿ ದರ್ಶನ ಪಡೆಯಬಹುದು.

ಕೊರೊನಾ ಸೋಂಕು ಆರಂಭವಾದ ಬಳಿಕ ಮಾ. 22ರಿಂದ ಭಕ್ತರ ದರ್ಶನವನ್ನು ಬಂದ್‌ ಮಾಡಲಾಗಿತ್ತು. ಸುಮಾರು ಆರು ತಿಂಗಳ ಬಳಿಕ ಸೆ. 28ರಿಂದ ಅಪರಾಹ್ನ 2ರಿಂದ ಸಂಜೆ 5 ಗಂಟೆಯವರೆಗೆ ಭಕ್ತರಿಗೆ ದೇವಸ್ಥಾನವನ್ನು ತೆರೆಯಲಾಯಿತು. ಈಗ ನ. 4ರಿಂದ ಎರಡನೆಯ ಹಂತದ ದರ್ಶನ ವ್ಯವಸ್ಥೆ ಆರಂಭಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next