Advertisement

ಕೈಮಗ್ಗದ ಸೀರೆ ಉಟ್ಟ ನಾಗಕನ್ನಿಕೆ, ಗ್ಯಾಸ್‌ಲೈಟ್‌ ಬೆಳಕು

11:45 PM Dec 31, 2021 | Team Udayavani |

ಉಡುಪಿ: ಶ್ರೀಕೃಷ್ಣಮಠದಲ್ಲಿ ಪ್ರತಿ ಪರ್ಯಾಯದಲ್ಲಿ ನಡೆಯುವ ನಾಗಮಂಡಲವು ಶುಕ್ರವಾರ ನಡೆದಿದ್ದು ಹಲವು ವಿಶಿಷ್ಟತೆಯನ್ನು ದಾಖಲಿಸಿತು.

Advertisement

ನಾಗಕನ್ನಿಕೆಯ ಪಾತ್ರ ವಹಿಸಿದ ಡಮರು ಕಲಾವಿದ ಮುದ್ದೂರು ನಟರಾಜ ವೈದ್ಯರು ಕೈಮಗ್ಗದ, ರಾಸಾಯನಿಕವಲ್ಲದ ನೈಸರ್ಗಿಕ ಬಣ್ಣ ಹಾಕಿದ ಸೀರೆಯನ್ನು ಧರಿಸಿ ನರ್ತನ ಮಾಡಿದರು. ಸಗ್ರಿ ಗೋಪಾಲಕೃಷ್ಣ ಸಾಮಗ ನಾಗಪಾತ್ರಿಗಳಾಗಿ ಕಾರ್ಯ ನಿರ್ವಹಿಸಿದರು.

“ಸುಮಾರು 25 ವರ್ಷಗಳ ಹಿಂದೆ 16 ಮೊಳದ ಕಸೆ ಸೀರೆಯನ್ನು ಉಟ್ಟು ನಾಗಕನ್ನಿಕೆಯ ನರ್ತನ ಮಾಡುತ್ತಿದ್ದೆವು. ಇತ್ತೀಚಿನ ವರ್ಷಗಳಲ್ಲಿ ನಿಂತು ಹೋಯಿತು. ಈಗ ಅಂಥ ಸೀರೆ ಯನ್ನುಟ್ಟು ಸೇವೆ ಸಲ್ಲಿಸುತ್ತಿದ್ದೇವೆ’ ಎಂದು ನಾಗಕನ್ನಿಕೆ ಪಾತ್ರ ವಹಿಸಿದ ನಟರಾಜ ವೈದ್ಯ ಹೇಳಿದರು.

40-50 ವರ್ಷಗಳ ಹಿಂದೆ ಗ್ಯಾಸ್‌ಲೈಟ್‌ ಬೆಳಕಿನಿಂದ ನಾಗಮಂಡಲೋತ್ಸವ ನಡೆಯುತ್ತಿತ್ತು. ವಿದ್ಯುತ್‌ ದೀಪಗಳು ಬಂದ ಬಳಿಕ ಅವುಗಳ ಬಳಕೆ ನಿಂತವು. ಕೃಷ್ಣಮಠದ ನಾಗಮಂಡಲವು ಗ್ಯಾಸ್‌ಲೈಟ್‌ ಬೆಳಕಿನಲ್ಲಿ ಸಂಪನ್ನಗೊಂಡಿತು.

ಪರ್ಯಾಯ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.

Advertisement

ಇದನ್ನೂ ಓದಿ:ಶೀಘ್ರ ಬಿಜೆಪಿ, ಜೆಡಿಎಸ್‌ ನಾಯಕರು ಕಾಂಗ್ರೆಸ್‌ ಸೇರ್ಪಡೆ: ಸತೀಶ ಜಾರಕಿಹೊಳಿ

ಅದಮಾರು ಮಠದ ಪರ್ಯಾಯದಲ್ಲಿ ನೈಸರ್ಗಿಕತೆಗೆ ಒತ್ತು ನೀಡಿದ್ದರಿಂದ ಕೈಮಗ್ಗದ ಸೀರೆಗಳಿಗೆ ಮಹತ್ವ ನೀಡಲಾಗಿದೆ. ಇದರ ಭಾಗವಾಗಿ ನಾಗಮಂಡಲೋತ್ಸವದಲ್ಲಿಯೂ ನೈಸರ್ಗಿಕ ವಾತಾವರಣ ಸೃಷ್ಟಿಯಾಯಿತು.
ಈ ನಾಗಮಂಡಲವು ಬಡಗುಮಾಳಿಗೆ ಎದುರು ಇರುವ ನಾಗನ ಸನ್ನಿಧಿಯಲ್ಲಿ ನಡೆದಿದೆ.

ವಾದಿರಾಜಸ್ವಾಮಿಗಳು ಸುಮಾರು 500 ವರ್ಷಗಳ ಹಿಂದೆ ಉತ್ತರ ಭಾರತದ ಸುಲ್ತಾನ್‌ ಒಬ್ಬ ನೀಡಿದ ಚಿನ್ನವನ್ನು ಶ್ರೀಕೃಷ್ಣಮಠದಲ್ಲಿ ಇದ್ದ ನಾಗನ ಸನ್ನಿಧಿಗೆ (ತಕ್ಷಕ ಪೊಟರೆ) ಹಾಕಿ ಅದರ ಮೇಲೆ ನಾಗನನ್ನು ಪ್ರತಿಷ್ಠಾಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next