Advertisement
ಫೆ.25ರಂದು ಬೆಳಗ್ಗೆ ಶ್ರೀ ಪಾರ್ವತಿ ಸನ್ನಿಧಿಯಲ್ಲಿ ದರ್ಶನ ಬಲಿ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಬಲ್ಲೋಡಿ ಮಾಗಣೆ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮನ, ಪಾರ್ವತಿ -ಪರಮೇಶ್ವರ ದೇವರ ಭೇಟಿ, ಚಂದ್ರಮಂಡಲ ಉತ್ಸವ, ಬೆಳಗ್ಗೆ ಶಯನೋತ್ಸವ ,ಕವಾಟ ಬಂಧನ, ಪ್ರಸಾದ ವಿತರಣೆ, ಫೆ.26ರಂದು ಬೆಳಗ್ಗೆ ಮಹಾರಥೋತ್ಸವ, ದೈವದ ನೇಮ, ಮಹಾಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.
ದೇಗುಲದ ಪ್ರಧಾನ ಅರ್ಚಕ ನಟರಾಜ ಉಪಾಧ್ಯಾಯ, ಅರ್ಚಕರಾದ ಮಿಥುನ್‌ರಾಜ್ ನಾವುಡ, ರಾಘವೇಂದ್ರ ಭಟ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಜನಾರ್ದನ ಆಚಾರ್ಯ ಬಿ., ಯು. ಸದಾಶಿವ ಪ್ರಭು, ಟಿ. ಕೃಷ್ಣಪ್ಪ ಗೌಡ, ಪಿ. ವಿಶ್ವನಾಥ ಪೂಜಾರಿ, ವೆಂಕಪ್ಪ ನಾಯ್ಕ, ಪಿ. ಸುಜಲಾ ಶೆಟ್ಟಿ, ಸವಿತಾ ಮತ್ತು ಸಿಬಂದಿ ವರ್ಗ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.