ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ನ ಮುಂದಿನ ಆವೃತ್ತಿಗೆ ಈಗಾಗಲೇ ತಯಾರಿ ಆರಂಭವಾಗಿದೆ. ಯಾವ ಆಟಗಾರನನ್ನು ರಿಟೆನ್ಶನ್ ಮಾಡಬೇಕು ಎಂಬ ಚರ್ಚೆಯಲ್ಲಿ ಫ್ರಾಂಚೈಸಿಗಳು ತೊಡಗಿದೆ. ಈ ಮಧ್ಯೆ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಅವರು ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಹೊಸ ಬೇಡಿಕೆಯೊಂದನ್ನು ಇರಿಸಿದ್ದು, ಫ್ರಾಂಚೈಸಿಯ ತಲೆನೋವಿಗೆ ಕಾರಣವಾಗಿದೆ.
ಮೂಲಗಳ ಪ್ರಕಾರ ಸನ್ ರೈಸರ್ಸ್ ಹೈದರಾಬಾದ್ ತಂಡವು ನಾಯಕ ಕೇನ್ ವಿಲಿಯಮ್ಸನ್ ಮತ್ತು ಸ್ಪಿನ್ನರ್ ರಶೀದ್ ಖಾನ್ ರನ್ನು ರಿಟೈನ್ ಮಾಡಲು ಬಯಸಿದೆ. ಆದರೆ ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಮೊದಲ ಆಯ್ಕೆಯ ರಿಟೆನ್ಶನ್ ಆಗಿ ಉಳಿಸಿಕೊಳ್ಳಲು ಬಯಸುತ್ತಾರೆ ಎಂದು ವರದಿಯಾಗಿದೆ. ಆದಾಗ್ಯೂ, ಹೈದರಾಬಾದ್ ಮೂಲದ ಫ್ರಾಂಚೈಸಿ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ನಾಯಕರಲ್ಲಿ ಒಬ್ಬರಾದ ಕೇನ್ ವಿಲಿಯಮ್ಸನ್‌ಗೆ ಆ ಸವಲತ್ತು ನೀಡಲು ಬಯಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ:ಅಂಪೈರ್ ನಿತಿನ್ ಮೆನನ್- ಅಶ್ವಿನ್ ನಡವೆ ಮಾತಿನ ಚಕಮಕಿ
ಬಿಸಿಸಿಐ ನಿಯಮದ ಪ್ರಕಾರ ರಿಟೆನ್ಶನ್ ಮಾಡುವ ಮೊದಲ ಆಟಗಾರನಿಗೆ 16 ಕೋಟಿ ರೂ., ಎರಡನೇ ಆಟಗಾರನಿಗೆ 12 ಕೋಟಿ ರೂ., ಮೂರನೇ ಆಟಗಾರನಿಗೆ 8 ಕೋಟಿ ರೂ. ಮತ್ತು ನಾಲ್ಕನೇ ಆಟಗಾರನಿಗೆ 6 ಕೋಟಿ ರೂ. ನೀಡಬೇಕು.
ಸದ್ಯ ಕೇನ್ ವಿಲಿಯಮ್ಸನ್ ಮೊದಲ ಆಯ್ಕೆಯಾದರೆ ಅವರಿಗೆ 16 ಕೋಟಿ ರೂ. ನೀಡಿ, ರಶೀದ್ ಖಾನ್ ಗೆ 12 ಕೋಟಿ ರೂ. ಒಪ್ಪಂದ ಮಾಡಬೇಕಾಗುತ್ತದೆ. ಆದರೆ ರಶೀದ್ ಖಾನ್ ಇದಕ್ಕೆ ಒಪ್ಪುತ್ತಿಲ್ಲ ಎಂದು ವರದಿ ತಿಳಿಸಿದೆ.