Advertisement

ಕೇರಳ ಟಿ20 ಮೂಲಕ ಶ್ರೀಶಾಂತ್‌ ಮತ್ತೆ ಕ್ರಿಕೆಟ್‌ಗೆ

11:10 PM Nov 23, 2020 | sudhir |

ಹೊಸದಿಲ್ಲಿ: ಐಪಿಎಲ್‌ನಲ್ಲಿ ನಡೆದ ಸ್ಪಾಟ್‌ಫಿಕ್ಸಿಂಗ್‌ ಪ್ರಕರಣದ ಹಿನ್ನೆಲೆಯಲ್ಲಿ 7 ವರ್ಷ ಕ್ರಿಕೆಟ್‌ನಿಂದ ನಿಷೇಧಗೊಂಡಿದ್ದ ಎಸ್‌.ಶ್ರೀಶಾಂತ್‌, ಮತ್ತೆ ಕ್ರಿಕೆಟ್‌ಗೆ ಮರಳಲು ಸಿದ್ಧವಾಗಿದ್ದಾರೆ.

Advertisement

ಅವರು ಕೇರಳ ಕ್ರಿಕೆಟ್‌ ಸಂಸ್ಥೆ ಆಯೋಜಿಸಲಿರುವ ಅಧ್ಯಕ್ಷರ ಟಿ20 ಕೂಟದ ಮೂಲಕ, ತಮ್ಮ 7 ವರ್ಷಗಳ ಹಸಿವನ್ನು ಇಂಗಿಸಿಕೊಳ್ಳಲಿದ್ದಾರೆ. ಈ ಕೂಟ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ಹೇಳಲಾಗಿದ್ದರೂ, ದಿನಾಂಕ ಇನ್ನೂ ನಿಶ್ಚಯವಾಗಿಲ್ಲ.

ಇದಕ್ಕೆ ರಾಜ್ಯ ಸರಕಾರದ ಅನುಮತಿಗಾಗಿ ಕೇರಳ ಕ್ರಿಕೆಟ್‌ ಸಂಸ್ಥೆ ಕಾಯುತ್ತಿದೆ. ಜೈವಿಕ ಸುರಕ್ಷಾ ವಲಯದಲ್ಲಿ ಆಟಗಾರರನ್ನು ಉಳಿಸಿ ಕೂಟವನ್ನು ನಡೆಸಲಾಗುತ್ತದೆ.

ಶ್ರೀಶಾಂತ್‌ ಭಾರತದ ಪರ 27 ಟೆಸ್ಟ್‌, 53 ಏಕದಿನ, 10 ಟಿ20 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವೇಗಿಯೂ ಹೌದು. ಅವರು ಭಾರತ ಕ್ರಿಕೆಟ್‌ ಪ್ರವೇಶಿಸಿದಾಗ ಭಾರೀ ನಿರೀಕ್ಷೆಗಳನ್ನು ಹೊಂದಲಾಗಿತ್ತು. ಆದರೆ 2013ರಲ್ಲಿ ಫಿಕ್ಸಿಂಗ್‌ ಪ್ರಕರಣ ನಡೆದ ಬಳಿಕ ಅವರ ಕ್ರಿಕೆಟ್‌ ವೃತ್ತಿಜೀವನಕ್ಕೆ ಹಿನ್ನಡೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next