ಭಾಗದಲ್ಲಿ ಮುಖಂಡರ ಭೇಟಿ ಮುಂದುವರೆಸಿದರು.
Advertisement
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಸಂಭವನೀಯ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಬೆಳಗ್ಗೆ ವಿನೋಬ ನಗರ, ಯಲ್ಲಮ್ಮ ನಗರ ಇತರೆ ಭಾಗದಲ್ಲಿ ಮುಷ್ಟಿ ಧಾನ್ಯ ಅಭಿಯಾನ ನಡೆಸಿದರು. ಸಂಜೆ ನಿಟುವಳ್ಳಿ ಭಾಗದಲ್ಲಿ ಮುಷ್ಟಿ ಧಾನ್ಯಅಭಿಯಾನ ಮುಂದುವರೆಸಿದರು. ಸಂಸದ ಜಿ.ಎಂ. ಸಿದ್ದೇಶ್ವರ್ ಇತರೆ ಮುಖಂಡರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಹರಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಜನಾಶೀರ್ವಾದ ಯಾತ್ರೆ ಸಮಾರೋಪ ಮತ್ತು ಇತರೆ ಕೆಲಸದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿದ್ದರು. ಮಾಜಿ ಸಚಿವ ಜಿ. ಕರುಣಾಕರರೆಡ್ಡಿ ಹುಲಿಕಟ್ಟೆ, ಹಾರಕನಾಳ್ ಭಾಗದಲ್ಲಿ ಪ್ರಚಾರ ನಡೆಸಿದರು. ಬಿಜೆಪಿ ಟಿಕೆಟ್‌ಗೆ ಪಟ್ಟು ಬಿಡದ ಪ್ರಯತ್ನ ಮುಂದುವರೆಸಿರುವ ಎನ್. ಕೊಟ್ರೇಶ್ ಬೆಂಗಳೂರುನಲ್ಲಿ ಉಳಿದುಕೊಂಡಿದ್ದಾರೆ.
ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಬೆಂಗಳೂರಿನಿಂದ ವಾಪಾಸ್ಸಾದ ನಂತರ ತಮ್ಮ ಅಕ್ಕಿ ಮಿಲ್ ನಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಸಭೆ ನಡೆಸಿದರು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬೇಲಿಮಲ್ಲೂರು, ಕೋಟೆಮಲ್ಲೂರು, ಘಂಟಾಪುರ ಇತರೆಡೆ ಮುಷ್ಟಿ ಧಾನ್ಯ ಅಭಿಯಾನ ಮುಂದುವರೆಸಿದರು. ಚನ್ನಗಿರಿ ಶಾಸಕ ವಡ್ನಾಳ್ ರಾಜಣ್ಣ, ಶೆಟ್ಟಿಹಳ್ಳಿ ಒಳಗೊಂಡಂತೆ ಇತರೆಡೆ ಪ್ರಚಾರ ನಡೆಸಿದರು. ಮಾಜಿ ಶಾಸಕ, ಬಿಜೆಪಿಯ ಸಂಭವನೀಯ ಅಭ್ಯರ್ಥಿ ಮಾಡಾಳ್ ವಿರುಪಾಕ್ಷಪ್ಪ, ಸಂತೇಬೆನ್ನೂರು ಭಾಗದಲ್ಲಿ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಕೆಲವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ಜೆಡಿಎಸ್ ಅಭ್ಯರ್ಥಿ ಹೊದಿಗೆರೆ ರಮೇಶ್ ಚನ್ನಗಿರಿ ಪಟ್ಟಣದ ಪೊಲೀಸ್ ಸಮುತ್ಛಯ ಇತರೆ ಭಾಗದಲ್ಲಿ ಪ್ರಚಾರ ನಡೆಸಿದರು. ಜೆಡಿಯು ರಾಜ್ಯ ಅಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಸೂಳೆಕೆರೆ(ಶಾಂತಿಸಾಗರ)ದಲ್ಲಿ ಪ್ರಚಾರಕ್ಕೆ ಚಾಲನೆ ನೀಡಿ, ಬಹಿರಂಗ ಸಭೆ ನಡೆಸಿದರು.
Related Articles
Advertisement
ಹರಿಹರ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಎಸ್. ರಾಮಪ್ಪ, ಬೆಳಗ್ಗೆ ಕುಮಾರನಹಳ್ಳಿ, ಮಲೇಬೆನ್ನೂರುನಲ್ಲಿ ಪ್ರಚಾರ ನಡೆಸಿದರು. ಸಾಯಂಕಾಲ ಹರಿಹರ ಪಟ್ಟಣದ ಇಂದಿರಾನಗರ, ವಿದ್ಯಾನಗರ ಇತರೆಡೆ ಪ್ರಚಾರ ನಡೆಸಿದರು.