Advertisement

Uttar Pradesh CM; ಯೋಗಿ ವಿರುದ್ಧ ಖರ್ಗೆ ಟೀಕೆ: ಬಿಜೆಪಿ ನಾಯಕರು ಕೆಂಡ

10:48 PM Nov 11, 2024 | Team Udayavani |

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಉಗ್ರರಿಗೆ ಹೋಲಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ಟೀಕೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Advertisement

ಮುಂಬೈನಲ್ಲಿ ಮಾತನಾಡಿದ ಕೇಂದ್ರ ಸಚಿವ ಪಿಯೂಷ್‌ ಗೋಯೆಲ್‌ ಸಮಾಜಕ್ಕೆ ತಮ್ಮ ಇಡೀ ಜೀವನ ಮುಡಿಪಾಗಿಟ್ಟಿರುವ ವ್ಯಕ್ತಿಯ ವಿರುದ್ಧ ಮಾತನಾಡುತ್ತಿರುವುದು ದುರದೃಷ್ಟಕರ. ಯೋಗಿ ಆದಿತ್ಯನಾಥ್‌ ಧರಿಸಿದ ಕಾವಿಯ ಬಗ್ಗೆ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದರು.

ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ ಖರ್ಗೆ ಹೇಳಿಕೆಯನ್ನು ಖಂಡಿಸಿ, ಸೋಲಿನ ಕೆಟ್ಟ ಕನಸು ಕಾಣುತ್ತಿರುವ ಕಾಂಗ್ರೆಸ್‌ ನಾಯಕರು ಇಂಥ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಉಗ್ರರಿಗಾಗಿ ಕಣ್ಣೀರು ಸುರಿಸಿದವರು ಕಾಂಗ್ರೆಸ್‌ ನಾಯಕರು ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷರ ಹೆಸರಲ್ಲಿ ಮಾತ್ರ ಹಿಂದೂ ಇದೆ. ಆದರೆ, ಅವರ ಕೃತ್ಯಗಳು ಮಾತ್ರ ಹಿಂದೂ ರೀತಿಯಲ್ಲಿಲ್ಲ. ಅವರು ಮೊದಲು ತಾವು ಹಿಂದೂವೋ ಅಲ್ಲವೋ ಎಂಬುದನ್ನು ತಿಳಿಸಬೇಕೆಂದು ಕಾಂಗ್ರೆಸ್‌ನ ಮಾಜಿ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣನ್‌ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ಖರ್ಗೆ ಹೇಳಿದ್ದೇನು?
ನೈಜ ಯೋಗಿಗಳಾದವರು ವಿಭಜನೆಗೊಂಡರೆ ನಾಶವಾಗುತ್ತೇವೆ(ಬಟೆಂಗೇ ತೋ ಕಟೆಂಗೇ) ಎಂಬಂಥ ಹೇಳಿಕೆಗಳನ್ನು ನೀಡುವುದಿಲ್ಲ. ಈ ಇಂಥ ಭಾಷೆಯನ್ನು ಉಗ್ರರು ಬಳಸುತ್ತಾರೆ. ಬಿಜೆಪಿಯಲ್ಲಿ ಕೆಲವರು ಸಾಧುಗಳ ವೇಷದ ರಾಜಕಾರಣಿಗಳಿದ್ದಾರೆ. ಅವರು ಖಾವಿ ಧರಿಸುತ್ತಾರೆ, ತಲೆಯಲ್ಲಿ ಕೂದಲು ಇಲ್ಲ. ಯೋಗಿಗಳಾದವರು ಸಮಾಜವನ್ನು ಒಂದು ಮಾಡುವ ಮಾತನಾಡಬೇಕು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಉದ್ದೇಶಿಸಿ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೀಕಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next