Advertisement

ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಪೂರಕ

10:05 AM Dec 15, 2017 | Team Udayavani |

ಕದ್ರಿ: ದೈಹಿಕ ಕ್ಷಮತೆ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆ ಪೂರಕ ಎಂದು ಬೆಳ್ತಂಗಡಿ ತಾಲೂಕು ಪಂಚಾಯತ್‌ ಸದಸ್ಯ ಶಶಿಧರ ಎಂ.ಕಲ್ಮಂಜ ಹೇಳಿದರು.

Advertisement

ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟವನ್ನು ಇತ್ತೀಚೆಗೆ ಕದ್ರಿಹಿಲ್ಸ್‌ನಲ್ಲಿರುವ ಕೆಪಿಟಿ ಮೈದಾನಿನಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯದ ಸಂಘಟನೆಯಲ್ಲೂ ಕ್ರೀಡೆ ಮಹತ್ತರ ಪಾತ್ರ ವಹಿಸುತ್ತದೆ. ಕ್ರೀಡೆಯಲ್ಲಿ ಗೆಲುವಿನ ಛಲ ಇರಬೇಕು. ಆದರೆ ಸೋತಾಗ ಹತಾಶರಾಗದೆ ಇದನ್ನೇ ಗೆಲುವಿಗೆ ಸೋಪಾನವಾಗಿಟ್ಟುಕೊಂಡು ಗುರಿ ಸಾಧಿಸಬೇಕು ಎಂದರು.

ಸಂಘದ ಸಲಹೆಗಾರ ಮೋನಪ್ಪ ಬಿಜೈ, ವಸಂತ ಕಾಯರ್‌ಮಾರ್‌, ಸುಮಂತ್‌ ಅತ್ತಾವರ, ಉಪಾಧ್ಯಕ್ಷ ಜಿನೇಂದ್ರ ಮಾಣಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ್‌ ಬೇಕಲ್‌, ಶಶಿಧರ್‌ ಕೊಂಡಾಣ, ಮೋಹನ ಕುಮಾರ್‌ ಅಳಪೆ, ರಾಜ ಎಂ. ಸಾಲ್ಯಾನ್‌, ಸುದರ್ಶನ್‌ ಸಾಲ್ಯಾನ್‌, ರಜಕ ಯೂತ್ಸ್ ಅಧ್ಯಕ್ಷ ಸಂಪತ್‌ ಕೊಂಡಾಣ, ಪ್ರದೀಪ್‌ ಸಾಲ್ಯಾನ್‌, ಕಸ್ತೂರಿ ಭಾಸ್ಕರ್‌ ಸಾಲ್ಯಾನ್‌, ಪ್ರೇಮಾ ಆಶೋಕ್‌ ಪೊಳಲಿ, ಆಶಾ ಜಿನೇಂದ್ರ, ತನುಜಾ ಪ್ರಕಾಶ್‌, ರಮಾ ಭಾಸ್ಕರ್‌ ಬೇಕಲ್‌, ಶ್ವೇತಾ ರವಿ ಕಕ್ಕೆಬೆಟ್ಟು , ಲತಾ ಪ್ರಕಾಶ್‌ ಸಾಲ್ಯಾನ್‌, ಅರುಣ್‌ ಕುಮಾರ್‌ ಕದ್ರಿ , ಅರುಣ್‌ ಸಾಲ್ಯಾನ್‌ ಸೊರಕೆ, ಸುಜಾತಾ ಪ್ರದೀಪ್‌ ಸಾಲ್ಯಾನ್‌, ರವೀಂದ್ರ ಎಂ.ಸಾಲ್ಯಾನ್‌ ಪಚ್ಚನಾಡಿ, ರಾಮ ಮಂಕುಡೆ , ಆನಂದ್‌ ಕೆ. ತೊಕ್ಕೊಟ್ಟು, ಬಿ.ಎಂ.ಸಾಲ್ಯಾನ್‌ ಮತ್ತಿತರರಿದ್ದರು. ಕ್ರೀಡಾ ಕಾರ್ಯದರ್ಶಿ ಆಶೋಕ್‌ ಪೊಳಲಿ ಸ್ವಾಗತಿಸಿ, ಭಾಸ್ಕರ್‌ ಬೇಕಲ್‌ ವಂದಿಸಿದರು. 

ಸಹಕಾರ ಅಗತ್ಯ
ವರ್ಷಂಪ್ರತಿ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ನಡೆಯುತ್ತಾ ಬಂದಿದ್ದು ಇದಕ್ಕೆ ಸಹಕಾರ ನೀಡುತ್ತಿರುವ ಸಮುದಾಯದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಸಮಾಜ ಬಾಂಧವರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು.
 – ಬಿ.ಎನ್‌. ಪ್ರಕಾಶ್‌, ಅಧ್ಯಕ್ಷರು,
   ಜಿಲ್ಲಾ ಮಡಿವಾಳರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next