Advertisement

ಉತ್ತಮ ಆರೋಗ್ಯಕ್ಕೆ ಕ್ರೀಡೆ ಪೂರಕ

08:13 PM Aug 27, 2019 | Lakshmi GovindaRaj |

ಆನೇಕಲ್‌: ಕ್ರೀಡೆಗಳಲ್ಲಿ ಭಾಗವಹಿಸುಕೆಯಿಂದ ದೈಹಿಕ-ಮಾನಸಿಕ ಚೈತನ್ಯ ಬೆಳವಣಿಗೆ ಜೊತೆಗೆ ಜನರಲ್ಲಿ ದೇಶಾಭಿಮಾನ ಮತ್ತು ಭಾವೈಕ್ಯತಾ ಮನೋಭಾವ ಮೂಡುತ್ತದೆ ಎಂದು ಶಾಸಕ ಸರ್ಜಾಪುರ ಗ್ರಾಪಂ ಮಾಜಿ ಅಧ್ಯಕ್ಷ ಶಂಭಯ್ಯ ಹೇಳಿದರು. ತಾಲೂಕಿನ ಸರ್ಜಾಪುರ ಗ್ರಾಮದ ಅಂಬೇಡ್ಕರ್‌ ಆಟದ ಮೈದಾನದಲ್ಲಿ ಜೈ ಭೀಮ್‌ ಕಬಡ್ಡಿ ಕಪ್‌ (ಕ್ಲಬ್‌) ವತಿಯಿಂದ ಆಯೋಜಿಸಿದ್ದ 19 ವಯಸ್ಸಿನ ಒಳಗಿನ ಜೂನಿಯರ್‌ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

Advertisement

ಹಳ್ಳಿಯ ಸೊಗಡನ್ನು ಸೂಚಿಸುವ ಕಬಡ್ಡಿ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರಲು ಸಹಕಾರಿಯಾಗುತ್ತದೆ. ವಿಶೇಷವಾಗಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ಯಾವುದಾದರೊಂದು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕು. ಆದ್ದರಿಂದ ಭವಿಷ್ಯದಲ್ಲಿ ಉತ್ತಮ ಹುದ್ದೆಗಳು ಅರಸಿ ಬರುತ್ತವೆ ಎಂದರು.

ಜೈ ಭೀಮ್‌ ಕಬಡ್ಡಿ ಕಪ್‌ ಆಯೋಜಕರಾದ ನವೀನ್‌ ಮಾತನಾಡಿ, ಹೊಸ ಪ್ರತಿಭೆಗಳನ್ನು ಹೊರತರಲು ಕ್ರೀಡೆಗಳು ಅವಶ್ಯಕವಾಗಿದ್ದು, ಇದರ ಪೂರಕವಾಗಿ ಸರ್ಜಾಪುರದಲ್ಲಿ 19 ವಯಸ್ಸಿನ ಒಳಗಿನ ಜೂನಿಯರ್‌ ಕಬಡ್ಡಿ ಪಂದ್ಯಾವಳಿಯನ್ನು ತಾಲೂಕಿನಲ್ಲಿಯೇ ಪ್ರಥಮವಾಗಿ ರೂಪಿಸಿದ್ದು, ರಾಜ್ಯದ ನಾನಾ ಭಾಗಗಳಿಂದ ಸುಮಾರು 60ಕ್ಕೂ ಹೆಚ್ಚು ತಂಡಗಳು ಈ ಪಂದ್ಯದಲ್ಲಿ ಭಾಗವಹಿಸಿದ್ದು ಸರ್ಜಾಪುರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಜೈ ಭೀಮ್‌ ಕಬಡ್ಡಿ ಕಪ್‌ ಸಹ ಆಯೋಜಕ ಹೇಮಂತ್‌ಕುಮಾರ್‌ ಮಾತನಾಡಿ, ಆರೋಗ್ಯವಂತರಾಗಿರಲು ಮತ್ತು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಕ್ರೀಡೆ ಅತ್ಯವಶ್ಯಕವಾಗಿದೆ. ಪ್ರತಿಯೊಬ್ಬರು ಪ್ರತಿನಿತ್ಯಾ ಒಂದು ಗಂಟೆ ವ್ಯಾಯಾಮ ಮಾಡ ಬೇಕು. ಕ್ರೀಡೆಗಳಲ್ಲಿ ಸೋಲು-ಗೆಲುವು ಅನಿವಾರ್ಯ ಆದರೆ ಅದರಲ್ಲಿ ಭಾಗವಹಿಸುವುದು ಬಹಳ ಮುಖ್ಯವಾಗಿದ್ದು ವಿದ್ಯಾರ್ಥಿಗಳು ಸೋತರು ಸಹ ಬೇಸರ ಪಡದೆ ಕ್ರೀಡೆಗಳಲ್ಲಿ ಸತತ ಅಭ್ಯಾಸ ಮಾಡಿದರೆ ಇಂದೆಲ್ಲಾ ನಾಳೆ ಗೆಲುವು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಉತ್ತಮವಾಗಿ ಆಟಚಾಡಿದ ಸರ್ಜಾಪುರ ಟೆರರ್‌ ತಂಡದ ಆಟಗಾರ ನಾಗೇಂದ್ರಗೆ 20 ಸಾವಿರ ರೂ. ನಗದು ಬಹುಮಾನವನ್ನು ಜೈಹಿಂದ್‌ ವಾಲಿಬಾಲ್‌ ಕ್ಲಬ್‌ನ ಮುಖ್ಯಸ್ಥರು ನೀಡಿದರು. ಶಾಸಕ ಬಿ.ಶಿವಣ್ಣ, ಸರ್ಜಾಪುರಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ್‌, ಕಾಂಗ್ರೆಸ್‌ ಮುಖಂಡರಾದ ಮದ್ದೂರಪ್ಪ ಮಧು, ಸತೀಶ್‌, ಯಲ್ಲಪ್ಪ, ಮೌನ, ಜೈ ಭೀಮ್‌ ಕಬಡ್ಡಿ ಕಪ್‌ ಸಹ ಆಯೋಜಕ ಮುರಳಿ ಕೃಷ್ಣ, ಮೋಹನ್‌, ಮಂಜುನಾಥ್‌, ಆಭಿಲಾಷ್‌ ಹಾಗೂ ಕ್ರೀಡಾಭಿಮಾನಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next