Advertisement
22 ವರ್ಷ 6.3 ಅಡಿ ಉದ್ದನೆಯ ಹದಿಹರೆಯದ ಈ ಹುಡುಗ ಆಸ್ಟ್ರೇಲಿಯಾದ ವಿರುದ್ಧದ ಏಕದಿನ ಸರಣಿಯಲ್ಲಿ ತನ್ನ ಮೊದಲ ಪಂದ್ಯದಲ್ಲೇ 59ರನ್‌ಗಳಿಗೆ 3 ವಿಕೆಟ್ ಉರುಳಿಸಿ ಆಸಿಸಿ ತಂಡದ ದಂಡಿ ಗ ರಿ ಗೆ ನಿದ್ದೆ ಗೆಡಿಸಿದ್ದರು. ಜಾವಗಲ್ ಶ್ರೀನಾಥ್ ಒಬ್ಬ ಉತ್ತಮ ಬೌಲರ್ ಮಾತ್ರವಲ್ಲದೆ ತಂಡಕ್ಕೆ ಅನೇಕ ಬಾರಿ ತಮ್ಮ ಬ್ಯಾಟ್ ಮೂಲಕವು ರನ್‌ಗಳ ಕೊಡುಗೆ ನೀಡಿದ್ದಾರೆ.
Related Articles
Advertisement
ಆಶೀಶ್ ನೆಹರ, ಜಾಹಿರ್ ಖಾನ್ ಮತ್ತು ಶ್ರೀನಾಥ್ ಈ ತ್ರಿವಳಿಗಳ ವೇಗದ ದಾಳಿಯೂ ಭಾರತವನ್ನು ಫೈನಲ್‌ಗೆ ಏರಿಸುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು. ಯುವ ವೇಗಿಗಳಾದ ಜಾಹಿರ್ ಖಾನ್ ಹಾಗೂ ಆಶೀಶ್ ನೆಹರ ಅವರಿಗೆ ಮಾರ್ಗದರ್ಶನ ನೀಡುತ್ತಾ ತಂಡವನ್ನು ಫೈನಲ್ ನವರೆಗೂ ನಡೆಸಿ ಕೊಂಡು ಹೋದರು. ಆದರೆ ಪೈನಲ್‌ನಲ್ಲಿ ಅದೃಷ್ಟ ಕೈಕೊಟ್ಟಿತು.
ಶ್ರೀನಾಥ್ ಅವರ ಕೆಲವು ಸಾಧನೆಗಳು
- 150 ಕಿ.ಮೀ/ಎಚ್ ಗಿಂತ ಹೆಚ್ಚು ವೇಗದಲ್ಲಿ ಬೌಲ್ ಮಾಡಿದ ಭಾರತದ ಮೊದಲ ಬೌಲರ್.
- ಭಾರತದ ಪರ ಏಕದಿನ ಪಂದ್ಯದಲ್ಲಿ ಅತಿಹೆಚ್ಚು (351) ವಿಕೆಟ್ ಪಡೆದ, ಟೆಸ್ಟ್‌ನಲ್ಲಿ ಮೂರನೇ ಅತಿ ಹೆಚ್ಚು (236) ವಿಕೆಟ್ ಪಡೆದ ವೇಗಿ.
- 1998-99 ಪಾಕಿಸ್ತಾನದ ವಿರುದ್ಧ ಕೋಲ್ಕತ್ತ ಟೆಸ್ಟಿನಲ್ಲಿ 132 ರನ್ ನೀಡಿ 13 ವಿಕೆಟ್ ಪಡೆದರು. ಇದು ತಂಡ ಸೋತ ಪಂದ್ಯದಲ್ಲಿ ಗಳಿಸಿದ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ದಾಖಲೆ ನಿರ್ಮಿಸಿತು.
- ಭಾರತದ ಪರವಾಗಿ ಎರಡನೇ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ